ಲಿಂಗಸುಗೂರು: ಮುಖ್ಯ ರಸ್ತೆ ಅಗಲೀಕರಣಕ್ಕೆ ಪುರಸಭೆ ಸದಸ್ಯರು ಸಹಾಯಕ ಆಯುಕ್ತ ರಿಗೆ ಮನವಿ

ವರದಿ: ಗೌತಮ ಲಿಂಗಸೂರು

ಜಿಲ್ಲಾ ಸುದ್ದಿಗಳು

ಲಿಂಗಸುಗೂರು:

ಲಿಂಗಸುಗೂರು ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕ್ಕಾಗಿ ಲಿಂಗಸುಗೂರು ಪುರಸಭೆಯ 15 ಜನ ಸದಸ್ಯರು ಸಹಾಯಕ ಆಯುಕ್ತ ರಿಗೆ ಮನವಿಯನ್ನು ಸಲ್ಲಿಸಿದರು. ಲಿಂಗಸುಗೂರು ಪಟ್ಟಣದ ಡಿ.ವೈ.ಎಸ್.ಪಿ ಕಛೇರಿಯಿಂದ ಲಕ್ಷ್ಮೀ ದೇವಸ್ಥಾನದ ವರೆಗೆ ಚರಂಡಿ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿ ನಡೆದಿದ್ದು, ಸದರಿ ಕಾಮಗಾರಿಗೆ ಮಧ್ಯ ರಸ್ತೆಯಿಂದ 50 ಅಡಿಯ ಅಂತರದಲ್ಲಿ ಚರಂಡಿ ನಿರ್ಮಾಣ ಮಾಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿದ್ದು, ಸದರಿ ಠರಾವು ಪ್ರಕಾರ ಕಾಮಗಾರಿ ನಿರ್ವಹಿಸುತ್ತಿಲ್ಲ. ಬಸ್‌ ನಿಲ್ದಾಣದ ಎದುರಿಗೆ ಇರುವ ಸುಮಾರು 8 ರಿಂದ 10 ಕಟ್ಟಡಗಳು ಮುಖ್ಯ ರಸ್ತೆಯ ಸುಮಾರು 5 ರಿಂದ 6 ಅಡಿ ಒತ್ತುವರಿ ಮಾಡಿರುವುದು ಮತ್ತು ಹಿಂದುಗಡೆ ರಸ್ತೆಯಲ್ಲಿ ಸುಮಾರು 20 ಅಡಿ ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಸದರಿ ಕಟ್ಟಡಗಳ ಉದ್ದ ಮತ್ತು ಆಗಲ ಪುರಸಭೆಯ ದಾಖಲೆ ಪ್ರಕಾರ 15150 ಅಡಿ ಇರುತ್ತದೆ.



ಪ್ರಸ್ತುತ ಕಟ್ಟಡ ಮಾಲೀಕರು 15486 ಕಟ್ಟಡವನ್ನು ಕಟ್ಟಿರುವುದು ತಾವುಗಳು ಪರಿಶೀಲಿಸಬೇಕು, ಸಾರ್ವಜನಿಕರಿಗೆ ತೊಂದರೆ ಕೊಡುವ ಮುಖಾಂತರ ನಗರದ ಸೌಂದರ್ಯರೀಕರಣ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಲಿಂಗಸುಗೂರಿನ ತಾಲೂಕಿನಲ್ಲಿ ಸುಮಾರು 180 ಹಳ್ಳಿಗಳ ಜನರು, ರೈತರು ಮತ್ತು – ವಿದ್ಯಾರ್ಥಿಗಳು ಲಿಂಗಸುಗೂರು ನಗರಕ್ಕೆ ದಿನನಿತ್ಯ ಆಗಮಿಸುತ್ತಿರುವುದು ತಮಗೆ ತಿಳಿದಿರುವಂತಹ ವಿಷಯ, ವರ್ಷ ವರ್ಷಕ್ಕೆ ಜನಸಂಖ್ಯೆ ದ್ವಿಗುಣವಾಗುತ್ತಿರುವುದರಿಂದ ಸದರಿ ಮುಖ್ಯ ರಸ್ತೆಯನ್ನು ಕಡ್ಡಾಯವಾಗಿ 50 ಅಡಿಗೆ ವಿಸ್ತರಿಸಿ ಸುಗಮ ಸಂಚಾರಕ್ಕೆ ಮತ್ತು ನಗರದ ಸೌಂದರ್ಯರೀಕರಣ ಹೆಚ್ಚಿಸುವ ಸಲುವಾಗಿ ಲಿಂಗಸುಗೂರು ಪಟ್ಟಣದ ಪುರಸಭೆ ಸದಸ್ಯೆರಾದ ಪ್ರಮೋದ ಕುಲಕರ್ಣಿ.

ದೊಡ್ದನಗೌಡ ಮುತ್ತು ಮೇಟಿ. ಮೌಲಾಸಾಬ್. ಯಮನಪ್ಪ. ಸುನಿತಾಕೆಂಬಾವಿ. ಶಾಂತಮ್ಮ್. ಪಾತಿಮಾ. ಗದ್ದೆಮ್ಮ. ಗಿರಿಜಮ್ಮ್. ಶಶಿಕಲಾ ಮನವಿಯನ್ನು ಸಹಾಯಕ ಆಯುಕ್ತ ರು ಲಿಂಗಸುಗೂರು ಇವರಿಗೆ ಮನವಿಯನ್ನು ಸಲ್ಲಿಸಿದರು.

Be the first to comment

Leave a Reply

Your email address will not be published.


*