ರಿಯಲ್ ಎಸ್ಟೇಟ್ ಭೂಮಾಫಿಯಾಗಳು ಮತ್ತು ಅಧಿಕಾರಿಗಳ ಶಾಮೀಲಿನಿಂದ ವಾರಸುದಾರರ ನಿದ್ದೆಗೆಡಿಸಿದ್ದಾರೆ : ಹನುಮಂತಪ್ಪ ವೆಂಕಟಾಪುರ

 

 

ಮಸ್ಕಿ,ತಾಲೂಕಿನ ಹಿರೇ ಅಂತರಗಂಗಿ ಸೀಮಾದ ಜಮೀನು 60 ರಲ್ಲಿ ಜಮೀನನ್ನು ರಿಯಲ್ ಎಸ್ಟೇಟ್ ಗಳು ಹಾಗೂ ಅಧಿಕಾರಿಗಳು ಸೇರಿ ಮೋಸ – ವಂಚನೆ ಕುತಂತ್ರತನದಿಂದ ಭೂ ಕಬಳಿಕೆಗೆ ಕೈ ಜೋಡಿಸುವ ಮೂಲಕ ವಾರಸುದಾರರ ನಿದ್ದೆಗೆಡಿಸಿದ್ದಾರೆ. ಎಂದು ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪುರ ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

 

 

ಮಸ್ಕಿ ತಾಲೂಕಿನ ಹಿರೇ ಅಂತರಗಂಗಿ ಸೀಮಾದ ಸರ್ವೇ ನಂಬರ್ 60 ರ ನಾಗರಾಜ ತಂದೆ ಮಲ್ಲಪ್ಪ ಸಜ್ಜನ್ ಇವರಿಗೆ ಸಂಭಂದಿಸಿದ 3 ಎಕರೆ 28 ಗುಂಟೆಯ ಜಮೀನು ನಮ್ಮದು ಎಂದು ಸರ್ವೇ ನಂಬರ್ 60 ರಲ್ಲಿಯೇ ಪಹಣಿದಾರರಾಗಿರುವ ಸತ್ಯಮ್ಮ ಗಂಡ ಮುದುಕಪ್ಪ ರವರ 4 ಎಕರೆ ಜಮೀನು ನಾವು ಒತ್ತಿ ಮಾಡಿಕೊಂಡಿದ್ದೇವೆ ಎಂದು ಬಿ.ಜಿ ನಾಯಕ್ ಹಾಗೂ ಜಿ.ಪಿ.ಎ ಮಾಡಿಕೊಂಡಿದ್ದೇನೆ ಎಂದು ಮಲ್ಲಿಕಾರ್ಜುನ ಭಜಂತ್ರಿ ಎಂಬ ವ್ಯಕ್ತಿಗಳು ತಮ್ಮಲ್ಲಿರುವ ಜಮೀನಿನ ದಾಖಲೆಗಳಿಗೂ ಮತ್ತು ನಾಗರಾಜ್ ತಂದೆ ಮಲ್ಲಪ್ಪ ಸಜ್ಜನ್ ರವರ ಜಮೀನಿಗೆ ಯಾವುದೇ ರೀತಿಯ ಸಂಭಂದ ಇಲ್ಲದಿದ್ದರೂ ನಮ್ಮ ಜಮೀನು ಎಂದು ಭೂ ದಾಖಲೆಗಳ (ಸರ್ವೇ) ಇಲಾಖೆಯ ರಾಯಚೂರು ಜಿಲ್ಲೆಯ ಡಿ.ಡಿ.ಎಲ್.ಆರ್ ರೇಷ್ಮಾ,ಲಿಂಗಸ್ಗೂರು ತಾಲೂಕಿನ ಎ.ಡಿ.ಎಲ್.ಆರ್

ಎಮ್.ಜಿ ಹಿರೇಮಠ ಹಾಗೂ ಮಸ್ಕಿ ತಾಲೂಕಿನ ಸೂಪರ್ ವೈಸರ್ ಗಿರೀಶ್ , ಸರ್ವೇಯರ್ ಮಲ್ಲಪ್ಪ ಅಂಗಡಿ ನಾಗರಬೆಂಚಿ, ಕೇಸ್ ವರ್ಕರ್ ಭೀಮಣ್ಣ ಎಂಬ ಅಧಿಕಾರಿಗಳ ಒಳ ಒಪ್ಪಂದದ ಮೂಲಕ ಅಮಾಯಕರ ಜಮೀನುಗಳ ಭೂ ಕಬಳಿಕೆಗೆ ಒಳ ಸಂಚಿನ ಯೋಜನೆಯ ರೂಪಿಸಿ ಮುಗ್ದ ಜನತೆಯ ಮೇಲೆ ಅಧಿಕಾರ ದರ್ಪ ಮೆರೆಯಲು ಮುಂದಾದ ಅಧಿಕಾರಿಗಳ ಹಾಗೂ ಭೂ ಕಬಳಿಕೆ ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

 

ಹಾಗೆಯೇ ಈ ಹಿಂದೆ ಅಂದರೇ

2022 ರಲ್ಲಿಯೂ ಬೈಲಗುಡ್ಡ, ಬಗಲಗುಡ್ಡ ಗ್ರಾಮದಲ್ಲಿ ಬಳ್ಳಾರಿ ಮೂಲದ ಪ್ರಬಾರಿ ಮಧ್ಯವರ್ತಿಗಳ ಸಹಾಯದಿಂದ ಜಮೀನು ವಾರಸುದಾರರಿಗೆ ಮಾಹಿತಿ ಇಲ್ಲದಂತೆ ಮೂರನೇ ವ್ಯಕ್ತಿಯ ಖೊಟ್ಟಿ ದಾಖಲೆ ಸೃಷ್ಟಿಸಿ ರಿಜಿಸ್ಟರ್ ಆಫೀಸ್ ನಲ್ಲಿ ಹೆಸರಿಗೆ ಮಾಡಿಕೊಂಡು ಅಕ್ರಮ ಭೂ ಕಬಳಿಕೆ ಮಾಡುವ ಮೂಲಕ ಇಂದು ಶಿಕ್ಷೆ ಅನುಭವಿಸುತ್ತಾ ಇದ್ದು. ಇಷ್ಟಾದರೂ ಅಕ್ರಮ ಭೂ ಕಬಳಿಕೆಗೆ ಮುಂದಾಗಿ ಅಮಾಯಕರ ಮೇಲೆ ಅಟ್ರಾಸಿಟಿ ಕೇಸು,ಇನ್ನಿತರೇ ಬಗೆ ಬಗೆಯ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುವ ಮೂಲಕ ಭಯಭೀತಗೊಳಿಸುವ ಸುಸಂದರ್ಭ ನಿರ್ಮಾಣ ಆಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇನ್ನೂ ಮುಂದೆಯಾದರು ಇಂತಹ ಯಾವುದೇ ಭೂ ಕಬಳಿಕೆದಾರರು ಮತ್ತೊಮ್ಮೆ ಸರ್ವೇ ನಂಬರ್ 60 ರ ನಾಗರಾಜ ತಂದೆ ಮಲ್ಲಪ್ಪ ಸಜ್ಜನ್ ರವರ ಜಮೀನಿಗೆ ತಂಟೆ ತಕರಾರು ಮಾಡದ ರೀತಿಯಲ್ಲಿ ಶಿಸ್ತು ಕಾನೂನು ಕ್ರಮ ಜರುಗಿಸಬೇಕೆಂದು

ಮಸ್ಕಿ ತಾಲೂಕಿನ ದಲಿತ ಮುಖಂಡರು ಹಾಗೂ ದಲಿತ ಸಂಘರ್ಷ ಸಮಿತಿ ಪ್ರೋ ಬಿ. ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಳಿಕೆ 01

 

ಸರ್ವೇ ನಂಬರ್ 60 ಅಷ್ಟೇ ಅಲ್ಲದೇ ಇನ್ನುಳಿದ ತಾಲೂಕಿನ ಯಾವುದೇ ಜಮೀನಿನ ಮೇಲೆ ರಿಯಲ್ ಎಸ್ಟೇಟ್ ಗಳು ಮೋಸ ವಂಚನೆ ಹಾಗೂ ಅಧಿಕಾರಿಗಳು ಶಾಮೀಲಾಗಿ ತಮ್ಮ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಭ್ರಷ್ಟಚಾರಕ್ಕೆ ಮುಂದಾಗಿರುವ ಸರ್ವೇ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ಮುಖಂಡ ಮಲ್ಲಯ್ಯ ಬಳ್ಳಾ ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*