ತಾಯಂದಿರ ಪಾದಪೂಜೆ ನೆರವೇರಿಸಿ ಭಾರತೀಯ ಸಂಸ್ಕೃತಿ ಎತ್ತಿಹಿಡಿದ ಶಾಲಾ ಮಕ್ಕಳು…!!!

ವರದಿ: ಬಸವರಾಜ ಕುಂಬಾರ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ತಂದೆ ತಾಯಿಯವರಿಗೆ ಮೊದಲು ಕೈಮುಗಿಯುವುದು ನಮ್ಮ ಪುರಾತನ ಶ್ರೀಮಂತ ಸಂಸ್ಕೃತಿ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಸ್ಟರ್ ಜನಪರ ಸೇವಕ ವೈ.ಬಿ.ಎಸ್ ಬಪ್ಪರಗಿ ಅವರು ಮಾತನಾಡಿದರು.

ರವಿವಾರ ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಶ್ರೀ ಕನಕಗುರಪೀಠ ತಿಂಥಣಿ ಪರಮ ಪೂಜ್ಯ ಗುರುಗಳಾದ ಸಿದ್ದರಾಮನಂದಪುರಿ ಮಹಾ ಸ್ವಾಮೀಜಿಗಳ ಕೃಪಾಆರ್ಶಿವಾದದಿಂದ ಹಾಗೂ ಚವನಭಾವಿ ಊರಿನ ಗುರುಹಿರಿಯ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ತಂದೆ- ತಾಯಿಯರ ಪಾದಪೂಜೆ ಮಾಡಿಸುವ ವಿನೂತನ ಕಾರ್ಯಕ್ರಮ ನಡೆಯಿತು.



ಹೆತ್ತವರನ್ನು ಪೂಜಿಸಿ ತಮ್ಮ ಮುಂದಿನ ಸಾಧನೆಗಳಿಗೆ ಆಶೀರ್ವಾದ ಪಡೆಯುವ ಗುರಿಯನ್ನಿಟ್ಟುಕೊಂಡು ಎಲ್ಲಾ ಶಾಲಾ ಮಕ್ಕಳಿಂದ ವಿದ್ಯಾರ್ಥಿಗಳು ಮಂತ್ರಘೋಷಗಳ ನಡುವೆ ಸಂಪ್ರದಾಯ ಬದ್ಧವಾಗಿ ತಂದೆ- ತಾಯಿಯರ ಪಾದ ಪೂಜೆ ನೆರವೇರಿಸಿದರು.

ಮಕ್ಕಳಿಂದ ಪಾದ ಪೂಜೆ ಮಾಡಿಸಿಕೊಂಡ ಹೆತ್ತವರ ಹೃದಯದಲ್ಲಿ ಧನ್ಯತಾಭಾವ, ಕಣ್ಣಂಚಿನಲ್ಲಿ ಆನಂದಭಾಷ್ಪ ಜಿನುಗಿತು. ಅನುಭವ ಹಂಚಿಕೊಳ್ಳಲು ಬಂದ ಹೆತ್ತವರು ಗದ್ಗದಿತರಾಗಿ ತಮ್ಮ ಮಕ್ಕಳುಸಂಸ್ಕಾರವಂತರಾಗಿ ಸಮಾಜಕ್ಕೆ ನೆರವಾಗಲಿ ಎಂದು ಹಾರೈಸಿದರು.ಇದೇ ವೇಳೆ ಮಾಸ್ಟರ್ ಜನಪರ ಸೇವಕ ವೈ ಬಿ ಎಸ್ ಬಪ್ಪರಗಿ,ಶಾಲೆ ಮುಖ್ಯಗಳು ಎಸ್ ಎಂ ಜೋಗಿನ ಅವರಿಗೆ ಗೌರವ ಸನ್ಮಾನ ಮಾಡಿದರು.



ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಗೋವಿಂದಪ್ಪಗೌಡ ಪಾಟೀಲ,ದ್ಯಾಮಣ್ಣ ಸೋಮನಾಳ, ಗದ್ದಪ್ಪ ಪೂಜಾರಿ,ಹುಲಗಪ್ಪ ತಳವಾರ,ವೀರೇಶ ಚಲವಾದಿ,ಮಂಜುನಾಥ ಚಲವಾದಿ,ಶಾಲೆಯ ಮುಖ್ಯಗಳು ಎಸ್ ಎಂ ಜೋಗಿನ,ಶ್ರೀಮತಿ ಡಿ.ಬಿ ಮದರಿ,ಅರ್ ಎಚ್ ಹಾದಿಮನಿ, ಶಾಲೆ ಮಕ್ಕಳ ತಂದೆ,ತಾಯಿಯವರ ಪಾಲಕರು,ಚವನಭಾವಿ ಗ್ರಾಮಸ್ಥರು ಭಾಗವಹಿಸಿದರು.

Be the first to comment

Leave a Reply

Your email address will not be published.


*