ಜೇವರ್ಗಿ: ತಾಲೂಕಿನ ಗ್ರಾಮಗಳಲ್ಲಿನ 25 ಜನರ ಒಂದು ಜೇವರ್ಗಿ ತಾಲೂಕು ಕಾನೂನು ಸ್ವಯಂಸೇವಕರ ಸಮಿತಿಯನ್ನು ರಚಿಸಲಾಯಿತು.
ಜೇವರ್ಗಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಸಂದೀಪ್ ನಾಯಕ್ ರವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಕಾನೂನು ಕುರಿತು ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಿ ಸಮಿತಿಯನ್ನು ರಚಿಸಲಾಗಿದ್ದು ಸಾಮಾನ್ಯ ಜನರಿಗೆ ಉಚಿತವಾಗಿ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಸಹಕಾರವನ್ನು ಪಡೆಯಲು ಸಭೆಯಲ್ಲಿ ತಿಳಿಸಲಾಯಿತು.
ಸಹಾಯಕ ಆಡಳಿತ ಟಿ.ಎಲ್.ಆಯ್.ಸಿ ಜೇವರ್ಗಿ ಸೇರಿದಂತೆ, ಕಾನೂನು ಸ್ವಯಂಸೇವಕರಾಗಿ ಆಯ್ಕೆಯಾದ ಗುಂಡೂರಾವ್ ರಾಥೋಡ್ ಮುತ್ಕೋಡ್, ಅಮೀನಪ್ಪ ಬಿ ಹೊಸಮನಿ, ಪತೆ ಮೊಹಮ್ಮದ್ ನಾಯ್ಕೋಡಿ, ಸೈದಪ್ಪ ಇಜೇರಿ, ಸಿದ್ದನಗೌಡ ಬಿರಾದರ, ಸಾಯಬಣ್ಣ ದೊಡ್ಮನಿ ಕೆಲ್ಲೂರು, ಬಸವರಾಜ್ ಹಡಪದ, ಶಿವಶರಣಪ್ಪ ಬಡಶೆಟ್ಟಿ ನಿವೃತ್ತ ಎಎಸ್ಐ, ಬಿ ಎಂ ಪಾಟೀಲ್ ಹರನೂರ, ಸುಭಾಷ್ ಎಸ್ ಭಂಡಾರಿ, ಅನಿಲ್ ಕುಮಾರ್ ಕಾಂಬ್ಳೆ, ಸೇರಿದಂತೆ ವಕೀಲರಾದ ಅಪ್ಪ ಸಾಹೇಬ್ ಕೊಳಕೂರ, ಪರಶುರಾಮ್ ಮುದುವಾಳ,ರಾಮನಾಥ ಬಂಢಾರಿ ಇತರರು ಉಪಸ್ಥಿತರಿದ್ದರು.
Be the first to comment