ಲಿಂಗಸುಗೂರ ಅಬಕಾರಿ ಉಪ ಆಯುಕ್ತರು ರಾಯಚೂರು ಜಿಲ್ಲೆರವರ ಆದೇಶದ ಮೇರೆಗೆ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಲಿಂಗಸುಗೂರು ರವರ ಸೂಚನೆ ಮೇರೆಗೆ ದಿನಾಂಕ: 08-08-2023 ರಂದು ಅಬಕಾರಿ ನಿರೀಕ್ಷಕರು ಮಾನ್ವಿ ವಲಯ, ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಛೇರಿ ರಾಯಚೂರು, ಅಬಕಾರಿ ಉಪ ನಿರೀಕ್ಷಕರು ಸಿಂಧನೂರು ವಲಯ ರವರೊಂದಿಗೆ ಲಿಂಗಸುಗೂರ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಸೇರಿ ಜಂಟಿಯಾಗಿ ಲಿಂಗಸುಗೂರು ವಲಯದ ಚಿತ್ತಾಪುರ ಗ್ರಾಮದ ಶಿಕ್ಕಲಗಾರ ಕಾಲೋನಿಯಲ್ಲಿ ಅಬಕಾರಿ ದಾಳಿ ಕೈಗೊಂಡು ಭಾಗವ್ವ ಗಂಡ ಪರಸಪ್ಪ ಮನೆಯಲ್ಲಿ ಪ್ಲಾಸ್ಟಿಕ್ ಕ್ಯಾನಿನಲ್ಲಿ 05 ಲೀಟರಿನಷ್ಟು ಕಳ್ಳಭಟ್ಟಿ ಸರಾಯಿ ಹಾಗೂ 50 ಲೀಟರಿನಷ್ಟು ಬೆಲ್ಲದ ಕೊಳೆಯನ್ನು ಸಂಗ್ರಹಿಸಿಟ್ಟಿರುವುದನ್ನು ಪತ್ತೆಹಚ್ಚಿ ಶ್ರೀಮತಿ ಶೈಲಜಾ ಅಬಕಾರಿ ನಿರೀಕ್ಷಕರು ಜಿಲ್ಲಾ ವಿಚಕ್ಷಣಾದಳ ರಾಯಚೂರು ರವರು ಪ್ರಕರಣ ಸಂಖ್ಯೆ: 4/2023-24 ನ್ನು ದಾಖಲಿಸಿರುತ್ತಾರೆ.
ಸದರಿ ಆರೋಪಿತಳನ್ನು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ನಂತರ ಮುಂದುವರೆದು ಬೊಮ್ಮನಾಳ ತಾಂಡಾದಲ್ಲಿ ಅಬಕಾರಿ ದಾಳಿ ಕೈಗೊಂಡು 20 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ 150 ಲೀಟರ್ ಬೆಲ್ಲದ ಕೊಳೆಯನ್ನು ನಾಶಪಡಿಸಲಾಯಿತು.
ಸದರಿ ದಾಳಿಯ ಸಮಯದಲ್ಲಿ ಯಮನೂರಸಾಬ ಹೊಸಮನಿ ಅಬಕಾರಿ ನಿರೀಕ್ಷಕರು ಮಾನವಿ ವಲಯ, ಸಂತೋಷ ಹರಿಜನ ಅಬಕಾರಿ ನಿರೀಕ್ಷಕರು ಲಿಂಗಸುಗೂರು ವಲಯ, ಮಹ್ಮದ್ ಹುಸೇನ್, ಲಿಂಗರಾಜ, ಯಮನೂರ, ಶಿವಲಿಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳಾದ ರಾಜೇಂದ್ರ ಮಾನೆ, ಮಾಳಿಂಗರಾಯ, ಸಂಗಮೇಶ, ದೇವರಾಜ, ಬೀರೇಶ ಪೂಜಾರಿ ಇತರರು ಹಾಜರಿದ್ದರು.
Be the first to comment