ವಾಣಿಜ್ಯೋದ್ಯಮಿಗಳನ್ನು ಉತ್ತೇಜಿಸಲು ಸಾರ್ವಜನಿಕರಿಂದ ಲೂಟಿಗಿಳಿದ ಕರ್ನಾಟಕ ವಿದ್ಯುತ್ ಶಕ್ತಿ ಆಯೋಗ ಸಾರ್ವಜನಿಕರಿಂದ ಆಕ್ರೋಶ ವಿಶೇಷ ವರದಿ: ಜ್ಞಾನೇಶ್ ಮೂರ್ತಿ( ಬಂಗಾರಪೇಟೆ)

ಬಂಗಾರಪೇಟೆ: ಏಪ್ರಿಲ್ 1.. 2023 ರಿಂದ ಪೂರ್ವನ್ವಯವಾಗುವಂತೆ ವಿದ್ಯುತ್ ಬಳಕೆಯ ದರಗಳನ್ನು ಪರಿಷ್ಕರಿಸಿರುವ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಕೈಗಾರಿಕೆಗಳು, ವಾಣಿಜ್ಯ ಸ್ಥಾವರಗಳು, ಹೆಚ್ಚು ವಿದ್ಯುತ್ ಬಲುಸುವುದನ್ನು ಉತ್ತೇಜಿಸಲು “ರಿಯಾಯಿತಿ ಇಂಧನಧರ ಯೋಜನೆ” ಅಡಿಯಲ್ಲಿ ಪ್ರತಿ ಯೂನಿಟ್ಟಿಗೆ 6ರೂ ಇದ್ದ ವಿದ್ಯುತ್ ಬಳಕೆ ಶುಲ್ಕವನ್ನು ಪ್ರತಿ ಯೂನಿಟಿಗೆ 5ರೂ‌ ಇಳಿಸಿ ಅನುಮೋದಿಸಿದೆ. ಇದರೊಟ್ಟಿಗೆ ಇ.ವಿ.ಚಾರ್ಜಿಂಗ್ ಸ್ಟೇಷನ್ ಗಳು, ದತ್ತಾಂಶ ಕೇಂದ್ರಗಳಿಗೆ ಪ್ರತಿ ವಿದ್ಯುತ್ ಯೂನಿಟ್ ಬಳಕೆಗೆ 50 ಪೈಸೆ ರಿಯಾಯಿತಿಯನ್ನು ನೀಡಿ ಉತ್ತೇಜಿಸುವುದರೊಂದಿಗೆ ಉದ್ಯಮಿಗಳ ಪರ ನಿಂತು ಸಾರ್ವಜನಿಕರ ವಿದ್ಯುತ್ ಬಳಕೆಯ ದರಗಳನ್ನ ಏಕಾಏಕಿ ಏರಿಕೆ ಮಾಡಿ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರ ಬದುಕಿನ ಮೇಲೆ ಬರೆ ಎಳೆದಿದೆ. ಇದರಿಂದ ತೀವ್ರ ಆಕ್ರೋಶಕ್ಕೆ ಒಳಗಾಗಿರುವ ಸಾರ್ವಜನಿಕರು ಸರ್ಕಾರ ಹಾಗೂ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಸರ್ಕಾರಕ್ಕೆ ಇಡಿ ಶಾಪ ಹಾಗುತ್ತಿದ್ದಾರೆ.

ಈ ಕುರಿತು ಪ್ರಶ್ನಿಸಿಸಲು ಸಾರ್ವಜನಿಕರು ಬೆಸ್ಕಾಂ ಅನ್ನು ಸಂಪರ್ಕಿಸಿದಾಗ ನೂತನ ದರಗಳು ಏಪ್ರಿಲ್ ಒಂದರಿಂದ ಪೂರ್ವಾನ್ವವಾಗಿರುವುದರಿಂದಾಗಿ ಜೂನ್ ತಿಂಗಳಿನ ಬಿಲ್ ನಲ್ಲಿ ಹೆಚ್ಚಿನ ಮೊತ್ತ ಬಂದಿರುವುದಾಗಿ ತಿಳಿಸಿರುತ್ತಾರೆ. ಹಾಗಾದರೆ ಈ ಬಗ್ಗೆ ಆಗಿನ ವಿಪಕ್ಷ ಕಾಂಗ್ರೆಸ್ ಹಾಗೂ ಆಗಿನ ಆಡಳಿತ ಪಕ್ಷ ಬಿಜೆಪಿಗೆ ಮಾಹಿತಿ ಇರಲಿಲ್ಲವೇ?? ಈಗಿನ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಈಗಿನ ವಿಪಕ್ಷಗಳು ಜನರನ್ನ ಚುನಾವಣೆ ಕಾರಣದಿಂದ ಈ ವಿಷಯವನ್ನು ಗೌಪ್ಯವಾಗಿಟ್ಟು ಜನರ ಕಣ್ಣಿಗೆ ಮಂಕು ಬೂದಿಯನ್ನು ಎರಚಿ ಜನರನ್ನ ವಂಚಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಭಾಗದ ಗೃಹ ವಿದ್ಯುತ್ ಬಳಕೆದಾರರು ಫುಲ್ ಗರಂ.
ಈ ಹಿಂದೆ ಗ್ರಾಮೀಣ ಭಾಗದ ಬಳಕೆದಾರರು ಹಾಗೂ ನಗರ ಭಾಗದ ಬಳಕೆದಾರರನ್ನ ಪ್ರತ್ಯೇಕ ಪ್ರವರ್ಗದಡಿಯಲ್ಲಿ ಪರಿಗಣಿಸಿ ಪ್ರತ್ಯೇಕ ದರರಗಳನ್ನು ನಿಗದಿಪಡಿಸಲಾಗಿತ್ತು, ಅದರಲ್ಲಿ ಗ್ರಾಮೀಣ ಬಳಕೆದಾರರಿಗೆ ನಗರ ಬಳಕೆದಾರರಿಗಿಂತ ಕಡಿಮೆ ದರವನ್ನು ನಿಗದಿಪಡಿಸಲಾಗಿತ್ತು ಆದರೆ ಈಗ ಧರ ರಚನೆಯನ್ನು ಸರಳ ಮತ್ತು ತರ್ಕ ಬದ್ಧಗೊಳಿಸುವ ನೆಪಒಡ್ಡಿ ಒಂದೇ ಪ್ರವರ್ಗದಡಿಯಲ್ಲಿ ಸೇರಿಸಿ ಗ್ರಾಮೀಣ ಭಾಗದ ಜನರ ಬೆಲೆ ಏರಿಕೆ ಮಾಡುವ ಮೂಲಕ ಗ್ರಾಮೀಣ ಭಾಗದ ಬಳಕೆದಾರರಿಗೆ ಸರ್ಕಾರ ಮಂಕುಬೂದಿಯನ್ನು ಎರಚಿದೆ .

ಈ ಹಿಂದಿನ ನಗರ ಹಾಗೂ ಗ್ರಾಮೀಣ ಭಾಗಗಳ ದರಗಳು:

ಗ್ರಾಮೀಣ ಪ್ರದೇಶ ನಗರ ಪ್ರದೇಶ
0-50ಯೂನಿಟ್ 4.05₹ 4.25 ₹
51-100ಯೂನಿಟ್ 5.30₹ 5.60₹
101-200ಯೂನಿಟ್ 6.85₹ 7.15₹
200ಕ್ಕಿಂತ ಹೆಚ್ಚು 7.70₹ 8.20₹

ಈಗಿನ ನಗರ ಹಾಗೂ ಗ್ರಾಮೀಣ ಭಾಗಗಳ ದರಗಳು
0-100 ಯೂನಿಟ್ ————4.75₹
100 ಕ್ಕಿಂತ ಹೆಚ್ಚು————–7.00₹

ವಿದ್ಯುತ್ ಬಳಕೆಗೆ ಶೇಕಡ 9%ರ ತೆರಿಗೆ ಬರೆ*
ಗೃಹಬಳಕೆಯ ಗ್ರಾಹಕರು ತಾವು ಬಳಕೆ ಮಾಡಿದ ವಿದ್ಯುತ್ ದರವನ್ನ ಪಾವತಿಸುವುದಲ್ಲದೆ ಅದಕ್ಕೆ ಶೇಕಡ 9%ರಷ್ಟು ತೆರಿಗೆಯನ್ನು ಹೆಚ್ಚುವರೆಯಾಗಿ ಬರಿಸಬೇಕಾದಂತಹ ಪರಿಸ್ಥಿತಿ ಬಂದಿದೆ.
ಉದಾಹರಣೆಗೆ : ಈ ಹಿಂದೆ 100 ರೂಪಾಯಿ ವಿದ್ಯುತ್ ಬಳಕೆ ಮಾಡಿದ್ದಲ್ಲಿ 100 ರೂಪಾಯಿ ಬಿಲ್ ಪಾವತಿಸಬೇಕಾಗಿತ್ತು,.
ಆದರೆ ಈಗ 100 ರೂಪಾಯಿ ಜೊತೆಗೆ 9 ರೂಪಾಯಿ ತೆರಿಗೆಯನ್ನು ಸೇರಿಸಿ 109 ರೂಪಾಯಿಯಷ್ಟು ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗಿದೆ..
ಸರ್ಕಾರದಿಂದ 200 ಯೂನಿಟ್ ವರಗಿನ ವಿದ್ಯುತ್ ಬಳಕೆ ಉಚಿತ ಗ್ಯಾರೆಂಟಿ ಎಂಬ ವಿರುಧ್ಧ ಪ್ರಜ್ಞಾವಂತ ಸಾರ್ವಜನಿಕರ ಆಕ್ರೋಶ :
ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಆರ್ಥಿಕ ವರ್ಷ 2023-24ಕ್ಕೆ ಒಟ್ಟು 62,133.47 ಕೋಟಿಗಳ ವಾರ್ಷಿಕ ಕಂದಾಯ ಅಗತ್ಯತೆಯನ್ನು ಅನುಮೋದಿಸುವಂತೆ ಸರ್ಕಾರವನ್ನು ಕೋರಿರುತ್ತದೆ. ಸದರಿ ಮೊತ್ತವು 8951.20 ಕಂದಾಯದಲ್ಲಿನ ಕೊರತೆಯನ್ನು ಒಳಗೊಂಡಿರುತ್ತದೆ.ಒಟ್ಟು ಕಂದಾಯದ ಕೊರತೆಯನ್ನು ಸರಿದೂಗಿಸಲು ಪ್ರತಿ ಯೂನಿಟ್ ಗೆ ಸರಾಸರಿ 139 ಪೈಸೆಗಳಷ್ಟು ಹೆಚ್ಚಿಸುವಂತೆ ಸರ್ಕಾರವನ್ನು ಕೋರಿರುತ್ತದೆ.
ಸದರಿ ಕೊರತೆಯು ವಾರ್ಷಿಕ ಕಾರ್ಯ ನಿರ್ವಹಣೆ ಪುನರ್ಮನನ ಅನುಸಾರ ಆರ್ಥಿಕ ವರ್ಷ 2021- 22 ರಲ್ಲಿ ಉಂಟಾಗಿರುವ ಕಂದಾಯದ ಕೊರತೆ ಮೊತ್ತ ರೂ 2,337.08 ಕೋಟಿ ಗಳನ್ನು ಒಳಗೊಂಡಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯನ್ನು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ನೀಡಿರುತ್ತದೆ.
ಹೀಗೆ ನಷ್ಟದಲ್ಲಿ ಕರ್ನಾಟಕ ವಿದ್ಯುತ್ ಶಕ್ತಿ ನಿಗಮಗಳು ಇದ್ದರೂ ಸಹ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಗ್ಯಾರಂಟಿ ನೀಡಿರುವುದನ್ನು ಪ್ರಜ್ಞಾವಂತ ನಾಗರಿಕರು ಹಾಸ್ಯಾಸ್ಪದ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕೋಟ್ 1: ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳು ತೈಲಬೆಲೆ ಕೃಷಿ ಪರಿಕರಗಳು ಗೃಹ ನಿರ್ಮಾಣ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೆ ಇರುತಿದೆ ಇಂತಹ ಸಂದರ್ಭದಲ್ಲಿ ವಿದ್ಯುತ್ತರ ಹೆಚ್ಚಳ ಮಾಡಿರುವುದು ತೀವ್ರ ದುರಾದೃಷ್ಟಕರ ಬಡವರು ರೈತರು ಕಾರ್ಮಿಕರು ಬದುಕನ್ನು ಹಸನು ಮಾಡಬೇಕಾದ ಸರ್ಕಾರ ಈ ರೀತಿಯ ನಿರ್ಧಾರ ಸಮಂಜಸವಲ್ಲ,: ಕೃಷ್ಣಕುಮಾರ್ ವಿಜಯನಗರ.

Be the first to comment

Leave a Reply

Your email address will not be published.


*