ಹುಣಸಗಿ: ಶುಕ್ರವಾರ ಸಾಯಂಕಾಲ ಕೊಳಿಹಾಳ ಗ್ರಾಮದಲ್ಲಿ ವಿದ್ಯುತ್ ತಗಲಿ ಸಾವನ್ನಪ್ಪಿದ ಮಲ್ಲಿಕಾರ್ಜುನ ಬಸಣ್ಣ ಬಿರಾದರ ಎಂಬ ಯುವಕ ಸಾವನ್ನಪ್ಪಿದ ಘಟನೆ ತಿಳಿದು ಶನಿವಾರ ಕಾಂಗ್ರೆಸ್ ಮುಖಂಡರಾದ ರಾಜಾ ವೇಣುಗೋಪಾಲ್ ನಾಯಕ ಹಾಗೂ ಹುಣಸಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಸಾಹುಕಾರ ದಂಡಿನ್ ಅವರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು ಸುತಕದಲ್ಲಿ ಇರುವ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೆ ಮತ್ತು ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ ನಿಮ್ಮ ಕುಟುಂಬಕ್ಕೆ ಆದಷ್ಟೂ ಬೇಗನೆ ಪರಿಹಾರ ಒದಗಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಸಿದ್ರಾಮಪ್ಪ ಸಾಹುಕಾರ್ ಮುದಗಲ್, ರಮೇಶ ವಾಲಿ, ಅಂಬು ದೇಸಾಯಿ ಸೇರಿದಂತೆ ಇತರರು ಇದ್ದರು.
Be the first to comment