ಶರಣು ಪ್ರಕಾಶ್ ಪಾಟೀಲರಿಗೆ ಜಿಲ್ಲಾ ಉಸ್ತುವಾರಿಯಾಗಿ ಕೆಲಸ ಮಾಡಿದ ಅನುಭವ ಇದೆ . ಶರಣಪ್ಪ ಮೇಟಿ.

ಕಾಂಗ್ರೆಸ್ಸ್ ಪಕ್ಷದ ಹೈಕಮ್ಯಾಂಡ ಸೂಚನೆ ಮೇರಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವುಕುಮಾರ ಅಧಿಕಾರ ಸ್ವೀಕರಿಸಿದು ಅವರ ನಿರ್ದೇಶನ ಮೆರಗೆ ವೈದ್ಯಕೀಯ ಸಚಿವ ಡಾ ಶರಣು ಪ್ರಕಾಶ ಪಾಟೀಲರನ್ನು ರಾಯಚೂರ ಜಿಲ್ಲಾ ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ. ಇವರನ್ನು ನೇಮಿಸಿದಕ್ಕೆ ಸ್ವಾಗತಿಸುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶರಣಪ್ಪಮೇಟಿ ತಿಳಿಸಿರುವರು.

ಅವರು ಪತ್ರಕರ್ತ ರೊಂದಿಗೆ ಮಾತನಾಡುತ್ತಾ ಡಾ. ಶರಣುಪ್ರಕಾಶ ಪಾಟೀಲರಿಗೆ ಈ ಹಿಂದೆ ರಾಯಚೂರ ಜಿಲ್ಲಾ ಉಸ್ತವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ ಜಿಲ್ಲೆಯ ಅಬೀವೃದ್ಧಿ ವಿಶ್ವ ವಿದ್ಯಾನಿಲಯದ ಅನುದಾನ ಹಾಗೂ ಏಮ್ಸ ಸಂಸ್ಥೆ ಸ್ಥಾಪಿಸಲು ಅವರು ಸರಕಾರದ ಮೇಲೆ ಒತ್ತಡ ಹಾಕಿ ಶ್ರಮಿಸಬೇಕು.

ರಾಯಚೂರು ಜಿಲ್ಲೆಯಲ್ಲಿ ಅನೇಕ ಮೂಲಬೂತ ಸಮಸ್ಯೆಗಳಿದ್ದು ಹಾಗೂ ರೈತರ ಅನೇಕ ಸಮಸ್ಯೆಗಳಿದ್ದು ಇವರ ಆಡಳಿತದಲ್ಲಿ ರಾಯಚೂರ ಜಿಲ್ಲೆ ಹಿಂದುಳಿದ ಪ್ರದೇಶ ಎಂಬ ಹಣ್ಣೆ ಪಟ್ಟಿ ತಗೆದುಹಾಕಬೇಕು ಜಿಲ್ಲೆ ಸಚಿವರಿಗೆ ಉಸ್ತವಾರಿ ನೀಡದರೆ ಇನೂ ಹೆಚ್ಚಿನ ಪ್ರಗತಿ ಅಭಿವೃದ್ಧಿ ಆಗಬಹುದಿತ್ತು ಎಂದು ಶರಣಪ್ಪ ಮೇಟಿ ತಿಳಿಸಿರುವರು

ಈಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ ಅಧ್ಯಕ್ಷ ಬಸನಗೌಡಮೇಟಿ,ಪುರಸಭೆಸದಸ್ಯ ಶಿವಯ್ಯದೆಗಲುಮಡಿ ,ಅಂಬರೇಶ,ಸಿದ್ದಪ್ಪ ಪರಂಗಿ ಸೇರಿದಂತೆ ಇನ್ನೂ ಅನೇಕರು ಇದ್ದರು.

Be the first to comment

Leave a Reply

Your email address will not be published.


*