ಮಾಜಿ ಶಾಸಕ ಡಿ ಎಸ್ ಹೂಲಗೇರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯ

ಲಿಂಗಸುಗೂರು: ಮೇ 31, ಸಾರ್ವತ್ರಿಕಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯಾರ್ಥಿ ಡಿ ಎಸ್ ಹೂಲಿಗೇರಿಯವರು ಸುಮಾರು 56 ಸಾವಿರ ಮತಗಳು ಪಡೆದು, ಸ್ವಲ್ಪ ಅಂತರದಿಂದ ಕೆಲ ಕಾಂಗ್ರೆಸ್ ಪಕ್ಷದ ಮುಖಂಡರ ಕುತಂತ್ರದಿಂದ ಕೊನೆ ಗಳಿಗೆಯಲ್ಲಿ ಸೋಲನ್ನು ಕಂಡಿದ್ದಾರೆ, ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷ ಗಟ್ಟಿಗೊಳಿಸುವಸಬೇಕೆಂದು ಕಾಂಗ್ರೇಸ್ ಮುಖಂಡ ಹಾಗೂ ಅವರ ಕಟ್ಟಾ ಅಭಿಮಾನಿ ಆನಂದ ಕುಂಬಾರ ಈಚನಾಳ ಸರಕಾರಕ್ಕೆ ಒತ್ತಾಯಿಸಿದರು.

 

ಪಟ್ಟಣದ ಪತ್ರಿಕೆ ಭವನದಲ್ಲಿ ಸುದ್ದಿಗೋಸ್ಠಿಯಲ್ಲಿ ಮಾತನಾಡಿದ ಅವರು ಡಿ ಎಸ್ ಹೂಲಗೇರಿರವರು ಸುಮಾರು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತರಾಗಿ ಒಂದು ಸಾರಿ ಶಾಸಕರಾಗಿ ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದ ಕೀರ್ತಿ ತಾಲೂಕಿನಲ್ಲಿ ಅವರಿಗೆ ಇದೆ, ಈ ಚುನಾವಣೆಯಲ್ಲಿ ಕೆಲ ಕುತಂತ್ರ ರಾಜಕಾರಣಿಗಳಿಂದ ಕಾಂಗ್ರೇಸ್ ಪಕ್ಷ ಹದಗೆಡುವ ಸ್ಥಿತಿಯನ್ನು ತಂದೊಡ್ಡಿದ್ದಾರೆ, ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ಹಾಗೂ ಪುರಸಭೆ, ಪಟ್ಟಣ ಪಂಚಾಯತ, ತಾಲೂಕು, ಜಿಲ್ಲಾ ಪಂಚಾಯತ ಚುನಾವಣೆಯ ಸಂಘಟನೆಯ ದೃಷ್ಟಿಯಿಂದ ಹಾಗೂ ಲಿಂಗಸುಗೂರು ತಾಲೂಕಿನ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ರಕ್ಷಣೆಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಮಾಜಿ ಶಾಸಕ ಡಿ, ಎಸ್, ಹೊಲಗೇರಿರವರಿಗೆ ಸಿಎಂ ಸಿದ್ದರಾಮಯ್ಯನರವರ ಸರಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಹೇಳಿದರು.

 

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರು ಮಾಜಿ ಗ್ರಾಪಂ. ಉಪಾಧ್ಯಕ್ಷ ಯಮನಪ್ಪ ಕಟ್ಟಿಮನಿ ಈಚನಾಳ, ದೇವರೆಡ್ಡಿ ಮೇಟಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನುಮೇಶ ಮಸೂತಿ, ಚೌಡಪ್ಪ ನಂದವಾಡಗಿ, ದ್ಯಾಮಣ್ಣ ಗೌoಡಿ, ಲಾಲಸಾಬ ಇದ್ದರು.

Be the first to comment

Leave a Reply

Your email address will not be published.


*