ಚಾಮರಾಜನಗರ: ಚಾಮರಾಜನಗರದ ಬಳಿ ಭಾರತ ವಾಯು ಸೇನೆಯ ವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಇಬ್ಬರು ಪೈಲಟ್ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾರತ ವಾಯು ಸೇನೆಯ ವಿಮಾನ ಚಾಮರಾಜನಗರ ಜಿಲ್ಲೆ ಭೋಗಪುರದ ಬಳಿ ಜಮೀನೊಂದರಲ್ಲಿ ಲಘು ಪತನವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸರು ದೌಡಾಯಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವಿಮಾನದಲ್ಲಿದ್ದ ಪೈಲಟ್ ಗಳಿಬ್ಬರು ಪ್ಯಾರಾಚೋಟ್ ಮೂಲಕ ವಿಮಾನದಿಂದ ಹಾರಿದ್ದು, ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಪಾಳ ಮೋಕ್ಷ ಮಾಡಿದ ಪೊಲೀಸ್ ಅಮಾನತು ಮಂಡ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೊಬ್ಬರು, ಆಟೋ ಚಾಲಕನಿಗೆ ನಡು ರಸ್ತೆಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಮಹೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಅಮಾನತು ಮಾಡಿದ್ದಾರೆ.
ಪೊಲೀಸ್ ಕಾನ್ಸ್‌ಸ್ಟೇಬಲ್ ಸಾರ್ವಜನಿಕವಾಗಿ ಎಲ್ಲರ ಮುಂದೆ ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ಟ್ವಿಟ್ ಮೂಲಕ ಮಂಡ್ಯ ಎಸ್‌ಪಿ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಕೃತ್ಯವನ್ನು ತಂದು ಕ್ರಮಕ್ಕೆ ಆಗ್ರಹಿಸಿದ್ದರು ಎನ್ನಲಾಗಿದೆ. ಮಂಡ್ಯ ಜಿಲ್ಲಾಸ್ಪತ್ರೆಯ ಎದುರು ಆಟೋ ಚಾಲಕ ಮತ್ತು ಪೊಲೀಸರು ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಪೊಲೀಸ್ ಪೇದೆ ರಸ್ತೆಗೆ ಬಿದ್ದು, ಕಾಲಿಗೆ ಸಣ್ಣ ಪೆಟ್ಟಾಗಿದೆ. ಸ್ಥಳೀಯರು ಪೇದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಟೋ ಚಾಲಕನಿಗೆ ಹೇಳಿದ್ದಾರೆ.
ಅದರಂತೆ ಚಾಲಕ ಪೇದೆಯನ್ನು ಆಸ್ಪತ್ರೆಗೆ ಹೋಗೋಣ ಬನ್ನಿ ಎಂದು ಕರೆದಿದ್ದಾರೆ. ಆತ ಕರೆದಾಗ ಸಿಟ್ಟಿಗೆದ್ದ ಪೇದೆ, ಚಾಲಕನ ಕಪಾಳಕ್ಕೆ ಹೊಡೆದು, ಹೊಟ್ಟೆಗೆ ಗುದ್ದಿದ್ದಾರೆ. ತಪ್ಪಾಯ್ತು ಬಿಡಿ ಸಾರ್ ಎಂದರೂ ಸುಮ್ಮನಾಗದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ಫೇಸ್‌ಬುಕಲ್ಲಿ 36 ಲಕ್ಷ ರೂ ಹಣ ಕಳೆದುಕೊಂಡ ಮಹಿಳೆ!ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ತಾನು ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ ಎಂದು ನಂಬಿಸಿ ನಗರದ 36.50 ಲಕ್ಷ ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಮಹಿಳೆಯೊಬ್ಬರ ಫೇಸ್‌ಬುಕ್‌ಗೆ ವ್ಯಕ್ತಿಯೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆಕೆ ರಿಕ್ವೆಸ್ಟ್ ಅಸೆಪ್ಟ್ ಮಾಡಿ ಕೆಲ ದಿನ ಆ ವ್ಯಕ್ತಿಯೊಂದಿಗೆ ಚಾಟಿಂಗ್ ನಡೆಸಿದ್ದರು. ತಾನೊಬ್ಬ ವೈದ್ಯ. ಇಂಗ್ಲೆಂಡ್‌ನಲ್ಲಿ ವಾಸವಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಮೇ 14ರಂದು ಚಾಟಿಂಗ್ ನಡೆಸಿದ್ದ ವೇಳೆ ಆತ, ಮಹಿಳೆಗೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದ. ಮೇ 16ರಂದು ಮಹಿಳೆಯ ಮೊಬೈಲ್ ಸಂಖ್ಯೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏರ್‌ಪೋರ್ಟ್ ಅಧಿಕಾರಿ ಎಂದು ಹೇಳಿದ್ದ.
ನಿಮಗೆ ಕೊರಿಯರ್ ಬಂದಿದ್ದು ಅದಕ್ಕೆ ಕಸ್ಟಮ್ ವೆಚ್ಚ ತಗುಲಲಿದೆ ಎಂದು ಹೇಳಿದ್ದನು. ಆ ವ್ಯಕ್ತಿಯ ಮಾತು ನಂಬಿದ ಮಹಿಳೆ ಮೇ 16ರಿಂದ 20ರವರೆಗೆ ಬೇರೆ ಬೇರೆ ಸಮಯದಲ್ಲಿ 36.50 ಲಕ್ಷ ಹಣ ವರ್ಗಾಯಿಸಿದ್ದರು. ಆ ಬಳಿಕ ವೈದ್ಯ ಮತ್ತು ಏರ್‌ಪೋರ್ಟ್ ಅಧಿಕಾರಿ ಸೋಗಿನ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿಲ್ಲ.ತಾನು ವಂಚನೆಗೊಳಗಾಗಿರುವುದು ಗೊತ್ತಾಗುತ್ತಿದ್ದಂತೆಯೇ ಮಹಿಳೆ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Be the first to comment