ನರೇಗಾ ಕೂಲಿ ಕಾರ್ಮಿಕರಿಗೆ ಅಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ತಪಾಸಣೆ ಶಿಬಿರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

CHETAN KENDULI

ಉತ್ತಮ ಆರೋಗ್ಯ ಭಾಗ್ಯವಿದ್ದರೆ ಬದುಕಿನಲ್ಲಿ ಏನಾದರೂ ಸಾಧಿಸಬಹುದು. ಇದನ್ನು ಅರಿತು ಪ್ರತಿಯೊಬ್ಬರು ತಮ್ಮ ಆರೋಗ್ಯ ಬಗ್ಗೆ ಉದಾಸೀನ ಮಾಡದೇ ಗಮನ ನೀಡುವಂತೆ ಪಿಡಿಓ ಪಿ.ಬಿ.ಮುಳ್ಳೂರ ಸಲಹೆ ನೀಡಿದರು.

ಬಾಗಲಕೋಟೆ:(ಕೆಲೂರ)ಗುಣ ಮಟ್ಟದ ಆಹಾರ ಸೇವನೆಯು ಉತ್ತಮ ಆರೋಗ್ಯಕ್ಕೆ ಬುನಾದಿ ಎಂದು ಸಿಎಚ್ಓ ಶ್ರೀಮತಿ ಪುಷ್ಪಾ ನಾಗಲೋಟಿಮಠ ತಿಳಿಸಿದರು.

ಇಲಕಲ್ಲ ತಾಲೂಕಿನ ಕೆಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲೂರ ಗ್ರಾಮದಲ್ಲಿ ಬದು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನರೇಗಾ ಕೂಲಿ ಕಾರ್ಮಿಕರಿಗೆ ಜಲ ಸಂಜೀವಿನಿ ಅಭಿಯಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಅವರು, ಆನಾರೋಗ್ಯಕ್ಕೆ ವಯಸ್ಸಿಲ್ಲ, ಎಲ್ಲಾ ವಯಸ್ಸಿನ ವರಿಗೂ ಮಾರಣಾಂತಿಕ ಕಾಯಿಲೆಗಳು ಬರುತ್ತವೆ ಇದಕ್ಕೆ ನಮ್ಮ ಆಹಾರ ಪದ್ಧತಿಯೇ ಕಾರಣವೆಂದು ಎಂದು ಹೇಳಿದರು. ಹೀಗಾಗಿ ಪ್ರತಿಯೊಬ್ಬರು ಗುಣಮಟ್ಟದ ಆಹಾರವನ್ನು ಸೇವಿಸಿ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಿ ಎಂದು ಹೇಳಿದರು.

ಬಳಿಕ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಬಿಪಿ,ಶುಗರ್ ಸಣ್ಣ ರೋಗಗಳು ಎಂದು ಭಾವಿಸದೆ ನಿರಂತರವಾಗಿ ಆರೋಗ್ಯದ ನೀಗಾವಹಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು.ಮುಂದುವರೆದು ಮಾತನಾಡಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ನಾವು ಇರುವ ಜಾಗದಲ್ಲಿ ಬಂದು ಆರೋಗ್ಯ ತಪಾಸಣೆ ಮಾಡುತ್ತಾರೆ.ಇದರ ಲಾಭ ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಎಮ್.ಡಿ.ಜಾಲಿಹಾಳ, ಪಿಎಚ್ ಸಿಒ ಶ್ರೀಮತಿ ಪಿ.ಡಿ.ಮುರಕ್ಕುಂಬಿ, ಎ.ವಾಯ್. ಮಡಿವಾಳರ,ಗಂಗಮ್ಮ ಹಿತ್ತಲಮನಿ,ಶ್ರೀ ಚೇತನಕುಮಾರ ಎಸ್.ಕೆ,ಮಾನಮ್ಮ ಕಂಬಾರ, ಕೆಎಚ್. ಪಿಟಿ ಸಿಬ್ಬಂದಿ ಶಿಲ್ಪಾ ಬಾವಿಕಟ್ಟಿ,ಆರೋಗ್ಯ ನಿರೀಕ್ಷಣಾಧಿಕಾರಿ ಅನೀಲ ಪೂಜಾರಿ, ಆಶಾ ಕಾರ್ಯಕರ್ತೆಯರು, ಕಾಯಕ ಬಂಧುಗಳು,ಗ್ರಾಮ ಪಂಚಾಯತಿ ಸಿಬ್ಬಂದಿಯವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*