ಸುರಪುರದ ಆರ್.ವಿ.ಎನ್ ಗೆ ಮಂತ್ರಿ ಸ್ಥಾನ ನೀಡಲು ಬಂಜಾರ ಸಮಾಜದ ವತಿಯಿಂದ ಪತ್ರಿಕಾ ಗೋಷ್ಠಿ ಒತ್ತಾಯ. 

ಹುಣಸಗಿ: ಹಿಂದುಳಿದ ವರ್ಗಗಳ  ಸಮಾಜ ಸೇವಕ ಬಡವರ ಬಂಧು  ಬಂಜಾರ ಸಮಾಜದ ಮೇಲೆ ಅಪಾರ ನಂಬಿಕೆ ಇಟ್ಟಿರುವ ನೂತನ ಶಾಸಕರಾಗಿ ಆಯ್ಕೆಯಾಗಿರುವ ಡಾ. ರಾಜಾವೆಂಕಟಪ್ಪನಾಯಕ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು  ಬಂಜಾರ ಸಮಾಜದ ಕಾರ್ಯ್ಯಾಧ್ಯಕ್ಷ ಕಾಂಗ್ರೆಸ್ ಯುವ ಮುಖಂಡರು ಕೃಷ್ಣ ಹೆಚ್ ಜಾಧವ  ಗೆದ್ದಲಮಾರಿ ತಾಂಡಾ  ಅವರು ಒತ್ತಾಯಿಸಿದರು.

 

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸುರಪುರ ಹಾಗೂ ಹುಣಸಗಿ ತಾಲೂಕಿನಲ್ಲಿ ಬಂಜಾರ ಸಮಾಜವು ಸಾಕಷ್ಟು ಹಿಂದುಳಿದಿದ್ದು ಬಂಜಾರ ಸಮಾಜವನ್ನು ಈ ಹಿಂದೆ ಇರುವ ಸರಕಾರವು ಕಡೆಗಣಿಸುತ್ತಾ ಬಂದಿದ್ದು ತಾಲೂಕಿನ ಹಲವಾರು ತಾಂಡಾಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕುಂಟಿತಗೊಂಡಿವೆ.

 

ಅಲ್ಲದೇ ತಾಂಡಾದಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಾರ್ವಜನಿಕರಿಗೆ ಸುರಕ್ಷಿತವಾಗಿ ತಿರುಗಾಡಲು ಒಳ್ಳೆಯ ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇನ್ನು ಹಲವಾರು  ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ ಈ ಬಾರಿ ರಚನೆಯಾಗಲಿರುವ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಎಲ್ಲಾ ಸಮಾಜವನ್ನು ಒಂದುಗೂಡಿಸಿಕೊಂಡು ಹೋಗುವ ವಕ್ತಿ  ಎಲ್ಲಾ ಸಮಾಜದ  ದಿನ ದಲಿತರ   ಬಡವರ ಬಗ್ಗೆ ಕಾಳಜಿ ಹೊಂದಿರುವ ರಾಜಾವೆಂಕಟಪ್ಪ ನಾಯಕ ಅವರಿಗೆ ಕಾಂಗ್ರೆಸ್ ಸರಕಾರದಲ್ಲಿ ಸಚಿವ  ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

 

 

ಇದೇ ಸಂದರ್ಭದಲ್ಲಿ  ಸುರೇಶ ಮಿಲ್ಟ್ರಿ ಬೆಲಾಪೂರ ತಾಂಡ,  ಗುಂಡೂರಾವ್ ಮಿಲ್ಟ್ರೀ ರಾಜವಾಳ ತಾಂಡಾ, ಸಂತೋಷ ವಜ್ಜಲ್ ತಾಂಡಾ, ತಾರಾನಾಥ ಚವ್ಹಾಣ ಇದ್ದರು.

Be the first to comment

Leave a Reply

Your email address will not be published.


*