ರಾಷ್ಟ್ರೀಯಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಎಫ್ಐಆರ್: ಆಪ್ ನಿಂದ ತಹಿರ್ ಹುಸೇನ್ ಅಮಾನತು

ವರದಿ: ಅಮರೇಶ ಕಾಮನಕೇರಿ


ದೇಶದ ಸುದ್ದಿಗಳು


ನವದೆಹಲಿ: ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ಎಫ್ಐಆರ್ ನಲ್ಲಿ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಹುಸೇನ್ ಹೆಸರು ಉಲ್ಲೇಖವಾಗಿದ್ದು, ಪಕ್ಷದಿಂದ ಆತನನ್ನು ಉಚ್ಛಾಟಿಸಲಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪೊಲೀಸ್ ತನಿಖೆಯಲ್ಲಿ ತಾಹಿರ್ ಹುಸೇನ್ ನ ಮೇಲೆ ಶಂಕೆ ವ್ಯಕ್ತವಾಗಿದ್ದು ಆತನ ವಿರುದ್ಧ 302 ಐಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಜಾಹೀರಾತು

ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಇದಕ್ಕೂ ಮುನ್ನ ವಿಡಿಯೋ ಹೇಳಿಕೆ ನೀಡಿದ್ದ ಹುಸೇನ್, ತಾನು ಈ ಪ್ರಕರಣದಲ್ಲಿ ಅಮಾಯಕ, ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಗಲಭೆಯ ನಾನೂ ಸಹ ಸಂತ್ರಸ್ತನಾಗಿದ್ದೇನೆ ಎಂದು ಹೇಳಿದ್ದಾರೆ.

Be the first to comment

Leave a Reply

Your email address will not be published.


*