ಮಹದಾಯಿ ಗೆಜೆಟ್ ಅಧಿಸೂಚನೆ ಪ್ರಕಟಿಸಿದ ಕೇಂದ್ರ ಸರ್ಕಾರ: ಕಳಸಾ-ಬಂಡೂರಿ ಹಾದಿ ಸುಗಮ

ವರದಿ: ಅಮರೇಶ ಕಾಮನಕೇರಿ

     ದೇಶದ ಸುದ್ದಿಗಳು


ಮಹದಾಯಿ ಯೋಜನೆ ಸಂಬಂಧ ಇದೀಗ ಕೇಂದ್ರ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿರೋದು ಉತ್ತರ ಕರ್ನಾಟಕ ಭಾಗಕ್ಕೆ ಅದರಲ್ಲೂ ಮಹದಾಯಿ ಅಚ್ಚುಕಟ್ಟು ವ್ಯಾಪ್ತಿಯ ಜನಕ್ಕೆ ಸಿಹಿ ಸುದ್ದಿ ಕೊಟ್ಟಂತಾಗಿದೆ.ಮಹದಾಯಿ ಯೋಜನೆಗೆ ಕೇಂದ್ರದ ಗೆಜೆಟ್ ಅಧಿಸೂಚನೆ: ಕಳಸಾ-ಬಂಡೂರಿ ಹಾದಿ ಸುಗಮ

ಹೊಸ ದಿಲ್ಲಿ: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮಹದಾಯಿ ನದಿ ನೀರಿನ ಹಂಚಿಕೆ ಕುರಿತಂತೆ ಐತೀರ್ಪು ಪ್ರಕಟವಾಗಿತ್ತು. ಈ ತೀರ್ಪಿನನ್ವಯ ಕೇಂದ್ರ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಬೇಕಿತ್ತು. ಮಹದಾಯಿ ಜಲ ಯೋಜನೆಗೆ ಚಾಲನೆ ನೀಡಲು ಕೇಂದ್ರದ ಗೆಜೆಟ್ ಪ್ರಕಟಣೆ ಅತ್ಯಗತ್ಯವಾಗಿತ್ತು. ಇದೀಗ ಕೇಂದ್ರ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿರೋದು ಉತ್ತರ ಕರ್ನಾಟಕ ಭಾಗಕ್ಕೆ ಅದರಲ್ಲೂ ಮಹದಾಯಿ ಅಚ್ಚುಕಟ್ಟು ವ್ಯಾಪ್ತಿಯ ಜನಕ್ಕೆ ಸಿಹಿ ಸುದ್ದಿ ಕೊಟ್ಟಂತಾಗಿದೆ. ಕಳಸಾ ಬಂಡೂರಿನ ನೀರಾವರಿ ಯೋಜನೆ ಜಾರಿಗೆ ಇದ್ದ ಅಡೆತಡೆಗಳು ದೂರವಾಗಿವೆ.

ಮಹದಾಯಿ ವಿವಾದ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ

ಈ ಸಂಬಂಧ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಇದೇ ವಿಚಾರವಾಗಿ ತಾವು ಕೇಂದ್ರ ಜಲ ಶಕ್ತಿ ಸಚಿವರನ್ನು ಭೇಟಿ ಮಾಡಿದ್ದಾಗಿ ಟ್ವೀಟಿಸಿದ್ದಾರೆ. ಈ ಕುರಿತಾದ ಫೋಟೋಗಳನ್ನು ತಮ್ಮ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. 

ಮಹದಾಯಿ ನೀರಾವರಿ ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲು ಮುಂದಾದಾಗ ಗೋವಾ ಸರ್ಕಾರ ತಗಾದೆ ತೆಗೆದಿತ್ತು. ಕಳಸಾ ಬಂಡೂರಿ ಯೋಜನೆಯಿಂದಾಗಿ ಪ್ರಕೃತಿಕ ಸಮಸ್ಯೆಗಳಾಗುತ್ತವೆ, ಗೋವಾ ರಾಜ್ಯಕ್ಕೆ ಅನ್ಯಾಯವಾಗುತ್ತೆ ಎಂದು ಅಡ್ಡಗಾಲು ಹಾಕಿತ್ತು. ಗೋವಾ ಬಿಜೆಪಿ ಸರ್ಕಾರ ಮಹದಾಯಿ ಯೋಜನೆ ವಿರುದ್ಧ ಇದೀಗ ಸುಪ್ರೀಂ ಕೋರ್ಟ್‌ನಲ್ಲೂ ಹೋರಾಟ ನಡೆಸ್ತಿದೆ. ಗೋವಾದ ವಿರೋಧ ಪಕ್ಷ ಕಾಂಗ್ರೆಸ್ ನಾಯಕರೂ ಕೂಡಾ ಮಹದಾಯಿ ಯೋಜನೆ ವಿರುದ್ಧ ಕೆಂಡಕಾರಿದ್ದಾರೆ.

‌ಶಾಂತ ಭೀಷ್ಮ ಚೌಡಯ್ಯ ಶ್ರೀ ಸ್ವಾಗತ

ಮಹದಾಯಿ ನ್ಯಾಯಾಧೀಕರಣದ ಐ ತೀರ್ಪನ್ನು ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವುದು ಸ್ವಾಗತಾರ್ಹ. ಶತಮಾನದ ಕನಸು ನನಸಾದ ಸುಂದರ ಸಂದರ್ಭ ಎಂದು ಕೋಲಿ ಸಮಾಜದ ಪೀಠದ ಶ್ರೀ ಶಾಂತ‌ ಭೀಷ್ಮ ಚೌಡಯ್ಯ ಶ್ರೀಗಳು ಸಂತಸ ವ್ಯಕ್ತಪಡಿಸಿದ್ಧಾರೆ. ಕರ್ನಾಟಕದ ಏಳು ಕೋಟಿ ಕನ್ನಡಿಗರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆಗಳು. ಮುಖ್ಯಮಂತ್ರಿಗಳು ಕೂಡಲೇ ಇಚ್ಚಾಶಕ್ತಿ ಪ್ರದರ್ಶಿಸಿ ತಕ್ಷಣವೇ ಕಾಮಗಾರಿ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*