ಮಾನ ಮರ್ಯಾದೆ ಇದ್ದರೆ ಅಮಿತ್ ಶಾ ರಾಜೀನಾಮೆ ನೀಡಲಿ: ಎಸ್.ಆರ್. ಹಿರೇಮಠ ಆಗ್ರಹ

ವರದಿ: ಅಮರೇಶ ಕಾಮನಕೇರಿ


     ರಾಜ್ಯ ಸುದ್ದಿಗಳು


                        ಜಾಹೀರಾತು

ಗದಗ(ಫೆ. 27): ದೆಹಲಿಯಲ್ಲಿ ನಡೆಯುತ್ತಿರುವ ಕೋಮುಘರ್ಷಣೆ ಬಗ್ಗೆ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆತಂಕ ವ್ಯಕ್ತಪಡಿಸಿದರು. ಸ್ವಾತಂತ್ರ್ಯದ ನಂತರ ದೆಹಲಿಯಲ್ಲಿ ಇಂಥ ಹಿಂಸೆ ನಡೆದಿರಲಿಲ್ಲ. ಕೇಂದ್ರ ಸರ್ಕಾರವೇ ಇದಕ್ಕೆ ಹೊಣೆಯಾಗಿದೆ. ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಹಿರೇಮಠ ಅವರು ಆಗ್ರಹ ಮಾಡಿದರು. ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ದೆಹಲಿಯ ಗಲಭೆಯ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ಧಾರೆಂದು ಆರೋಪಿಸಿದರು.

“ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಮೇಲೆ ಎಫ್​ಐಆರ್ ಹಾಕಬೇಕಿತ್ತು. ಈ ಮೂವರಿಗೆ ಮೂಗುದಾರ ಹಾಕಿ ನಿಯಂತ್ರಿಸುವ ಬದಲು ಗೃಹ ಸಚಿವರು ನಾಚಿಕೆಗೇಡಿತನದ ಹೇಳಿಕೆ ನೀಡುತ್ತಾರೆ. ಬಿಜೆಪಿ ಮುಖಂಡರ ಬಾಯಲ್ಲಿನ ಹೇಳಿಕೆಗಳು ದೆಹಲಿಯನ್ನು ಉರಿಯುವಂತೆ ಮಾಡಿವೆ. ಬೆಂಕಿಯಲ್ಲಿ ಪೆಟ್ರೋಲ್ ಎಸದಂತೆ ಮಾಡಿವೆ. ಇದನ್ನೆಲ್ಲಾ ನಿಯಂತ್ರಣ ಮಾಡಬೇಕಾದ ಅಮಿತ್ ಶಾ ಎಲ್ಲಿದ್ದಾರೆ. ಮಾನ ಮರ್ಯಾದೆ ಇದ್ದರೆ ಇವರು ತಕ್ಷಣ ರಾಜೀನಾಮೆ ನೀಡಲಿ” ಎಂದು ಎಸ್.ಆರ್. ಹಿರೇಮಠ ಒತ್ತಾಯಿಸಿದರು.

ದೆಹಲಿ ಗಲಭೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. 200 ಜನರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಪೊಲೀಸರ ಗುಂಡೇಟು ಇವರೆಲ್ಲರ ಸಾವಿಗೆ ಕಾರಣವಾಗಿದೆ. ದೆಹಲಿ ಪೊಲೀಸರು ಗಲಭೆ ನಿಯಂತ್ರಿಸಲು ವಿಫಲರಾಗಿದ್ಧಾರೆ. ಜವಾಬ್ದಾರಿ ಮರೆತಿರುವ ಗೃಹ ಮಂತ್ರಿ ರಾಜೀನಾಮೆ ನೀಡಬೇಕು. ಇವರು ರಾಜೀನಾಮೆ ನೀಡದಿದ್ದರೆ ಪ್ರಧಾನಿಗಳು ಇವರನ್ನು ಕಿತ್ತೆಸೆಯಬೇಕು. ಅಮಿತ್ ಶಾ ಈಗಾಗಲೇ ಜೈಲಿಗೆ ಹೋಗಿ ಬಂದಿದ್ಧಾರೆ. ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರಲು ಅವರು ಯೋಗ್ಯನಲ್ಲ. ಮುಂದಿನ ಭವಿಷ್ಯದ ಬಗ್ಗೆ ಕಾಳಜಿ ಇರುವವರು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಸಾಮಾಜಿಕ ಹೋರಾಟಗಾರ ಹೇಳಿದರು.

ಯತ್ನಾಳ್ ಹೇಳಿಕೆಗೆ ಕಿಡಿ:

ಇದೇ ವೇಳೆ, ಹಿರಿಯ ಸ್ವಾತಂತ್ರ್ಯ ಹೋರಾಟ ಎಚ್.ಎಸ್. ದೊರೆಸ್ವಾಮಿ ಅವರನ್ನು ಪಾಕಿಸ್ತಾನೀ ಏಜೆಂಟ್ ಎಂದು ಕರೆದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಹಿರೇಮಠ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ದೊರೆಸ್ವಾಮಿ ಅವರು ಛಲೇಜಾವ್, ಕ್ವಿಟ್ ಇಂಡಿಯಾದಂಥ ಚಳವಳಿಗಳಲ್ಲಿ ಭಾಗವಹಿಸಿದವರು. ಇಲ್ಲಿಯವರೆಗೆ ನಮ್ಮ ಆಂದೋಲನಗಳಿಗೆ ಅವರೇ ಪ್ರೇರಣೆ. ಇಂಥವರ ಬಗ್ಗೆ ಹಗುರವಾಗಿ ಮಾತನಾಡುವುದು ಯತ್ನಾಳ್ ಅವರಿಗೆ ಶೋಭೆ ತರುವುದಿಲ್ಲ. ಇದೆಲ್ಲವೂ ಅವರ ನಾಲಿಗೆ ಚಪಲವನ್ನು ತೋರಿಸುತ್ತದೆ ಎಂದು ಎಸ್.ಆರ್. ಹಿರೇಮಠ ಟೀಕಿಸಿದರು.

ಗಾಂಧಿಜಿ ಈ ದೇಶದಲ್ಲಿ ಇದ್ದವರೇ ಅಲ್ಲ ಎಂಬ ಹೇಳಿಕೆಗೂ ಹಿರೇಮಠ ಕಿಡಿಕಾರಿದರು. ಇದು ತಿಳಿಲಾರದ ಮಾತುಗಳು. ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಇದ್ದರು. ಅಲ್ಲಿಯೂ ಹೋರಾಟ ಮಾಡಿದರು. ಹಾಗೆಯೇ ಭಾರತದಲ್ಲೂ ಹೋರಾಟ ಮಾಡಿದ್ಧಾರೆ. ಅದಕ್ಕೆ ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ಗಾಂಧಿಜಿ ಅವರ ಹೋರಾಟ ಕೂಡ ಅಷ್ಟೇ ಸತ್ಯ. ಪ್ರಾಮಾಣಿಕ ಅಭ್ಯಾಸ ಇರದೇ ಕುಹಕ ಬುದ್ಧಿಯಿಂದ ಮಾತನಾಡುವುದು ಸರಿಯಲ್ಲ. ನಾಲಗೆ ಮೇಲೆ ನಿಯಂತ್ರಣ ಹಾಕಿದರೆ ಯತ್ನಾಳರ ತಂದೆ ತಾಯಿಯ ಹೆಸರಿಗೂ ಒಳ್ಳೆಯದಾಗುತ್ತದೆ. ಯತ್ನಾಳ ಅವರ ವಿಧಾನಸಭಾ ಜವಾಬ್ದಾರಿ ಸ್ಥಾನಕ್ಕೂ ಒಳ್ಳೆಯದಾಗುತ್ತದೆ ಎಂದು ಹಿರೇಮಠ ಅಭಿಪ್ರಾಯಪಟ್ಟರು.



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745


ಭಾರತ ಸರ್ಕಾರದಿಂದ ವರದಿಗಾರರನು ನೇಮಿಸಿಕೋಳುವ ಅನುಮತಿ ಪಡೆದ ಆನ ಲೈನ ಮಿಡಿಯಾ

Be the first to comment

Leave a Reply

Your email address will not be published.


*