ಲಿಂಗಸುಗೂರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನೇರ ನೇರ ಪೈಪೋಟಿ.

ಲಿಂಗಸುಗೂರು ಕ್ಷೇತ್ರದಲ್ಲಿ ಚುನಾವಣಾ ಕಾವು ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ ಬಿಜೆಪಿ ಪಕ್ಷಗಳ ನಡುವೆ ನೇರ ನೇರ ಪೈಪೋಟಿ ನೆಡೆಯುತ್ತೆ , ಆದರೆ ಇಲ್ಲಿ ಜೆಡಿಎಸ್ ಹಾಗೂ ಜನಾರ್ದನ ರೆಡ್ಡಿಯ ಫುಟ್ಬಾಲ್ ಪಕ್ಷವು ಕೇವಲ ಅಟಕ್ಕೆ ವು0ಟು ಲೆಕ್ಕಕ್ಕಿಲ್ಲ ಎಂಬಂತೆ ಇವೆ ಲಿಂಗಸುಗೂರ ತಾಲ್ಲೂಕಿನ ಮತದಾರರು ಬಹಳ ಪ್ರಬುದ್ದರು ಹಾಗೂ ಜಾಣರಾಗಿದ್ದು ಒಂದೇ ದಿನಕ್ಕೆ ಎರಡು ಪಕ್ಷಗಳಿಗೆ ಮುಂಜಾನೆ ಒಂದು ಪಕ್ಷಕ್ಕೆ ಸಾಯಂಕಾಲ ಇನ್ನೊಂದು ಪಕ್ಷಕ್ಕೆ ಸೆರ್ಪೆಡ್ ಯಾಗಿ ಅಭ್ಯರ್ಥಿ ಗಳಿಂದ ತಮ್ಮ ಅನುಕೂಲವನ್ನು ಪೂರೈಸಿ ಕೊಳ್ಳುತ್ತಿದ್ದು.

ಬಿಜೆಪಿಯಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್. ಹಾಗೂ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕರಾದ ಡಿ.ಎಸ್.ಹುಲಗೇರಿ. ನಡುವೆ ಪೈಪೋಟಿ ಇದೆ.

ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಭಾರೀ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ

ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಹಳೆಯ ಕಲಿಗಳ ಕಾದಾಟವೇ ಈ ಚುನಾವಣೆಯಲ್ಲಿಯೂ ಕಾಣಬಹುದಾಗಿದೆ. ಆದ್ರೂ ಕೆಲ ಹೊಸ ಮುಖಗಳ ನಾಯಕರು ಕ್ಷೇತ್ರದಲ್ಲಿ ಓಡಾಟ ನಡೆಸಿ ಈ ಬಾರಿ ನಾನೇ ಲಿಂಗಸೂಗೂರು ಕ್ಷೇತ್ರದ ಶಾಸಕ ಆಗುವುದು, ಎಲ್ಲರೂ ನನಗೆ ಆರ್ಶಿವಾದ ಮಾಡಿ ಎಂದು ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ.

ಲಿಂಗಸೂಗೂರು ವಿಧಾನಸಭಾ ಕ್ಷೇತ್ರವೂ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ 2,53,335 ಮತದಾರರು ಇದ್ದಾರೆ. ಅದರಲ್ಲಿ 1,25,885 ಪುರುಷ ಮತದಾರರು ಇದ್ದು, 1,27,441 ಮಹಿಳಾ ಮತದಾರರು ಇದ್ದಾರೆ.

ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ 20ವರ್ಷದಿಂದ 40 ವರ್ಷದೊಳಗಿನ ಮತದಾರರೇ ಹೆಚ್ವಾಗಿದ್ದಾರೆ. ಇನ್ನೂ ತಾಲೂಕಿನ ವ್ಯಾಪ್ತಿಯಲ್ಲಿ 8 ಜಿ.ಪಂ. ಕೇಂದ್ರಗಳು ಬರುತ್ತವೆ. ಆದ್ರೆ ಮಸ್ಕಿ ವಿಧಾನಸಭಾ ಕ್ಷೇತ್ರವೂ ಆಗಿದ್ದರಿಂದ ಒಂದು ಜಿ.ಪಂ. ಕ್ಷೇತ್ರವೂ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದರೂ ಈ ಹತ್ತಾರು ಜಾತಿಗಳು ಇದ್ರೂ ಸಹ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ರೆಡ್ಡಿ ಲಿಂಗಾಯತ ಸಮುದಾಯದ ಮುಖಂಡರೇ ರಾಜಕೀಯ ಗುರುಗಳು. ಯಾವುದೇ ಪಕ್ಷದ ಶಾಸಕರು ಆದ್ರೂ ರೆಡ್ಡಿ ಲಿಂಗಾಯತ ಸಮುದಾಯದ ತೀರ್ಮಾನವೇ ಅಂತಿಮ.

1957ರಿಂದ 2004ರವರೆಗೆ ಸಾಮಾನ್ಯ ಕ್ಷೇತ್ರವಾದ ಲಿಂಗಸೂಗೂರು ವಿಧಾನಸಭಾ ‌ಕ್ಷೇತ್ರವೂ 2008ರಲ್ಲಿ ಪರಿಶಿಷ್ಟ ‌ಜಾತಿಗೆ ಮೀಸಲು ಕ್ಷೇತ್ರವಾಯ್ತು. ಆ ಬಳಿಕ 2008ರಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು ಸಾಧಿಸಿದ್ರು‌. 2013ರಲ್ಲಿ ಮಾನಪ್ಪ ವಜ್ಜಲ್ ಜೆಡಿಎಸ್ ನಿಂದ ಸ್ಪರ್ಧೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿಗೆ ಸೋಲಿಸಿ ಗೆದ್ದರು. ಮುಂದೆ 2018ರವರೆಗೆ ಡಿ.ಎಸ್. ಹೂಲಗೇರಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿಗೆ ಸೋಲಿಸಿ ಡಿ.ಎಸ್. ಹೂಲಗೇರಿ ಶಾಸಕರಾಗಿ ಆಯ್ಕೆಯಾದರು. ಈ ಮಧ್ಯೆ ಹೊಸಬರು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆರ್.ರುದ್ರಯ್ಯ ಕಲ್ಯಾಣ ಪ್ರಗತಿ ಪಕ್ಷ ದಲ್ಲಿ ಸದ್ದು ಮಾಡುತ್ತಿದ್ದು ಆದರೆ ಕಳೆದ ಎರಡು ಮೂರು ದಿನಗಳಿಂದ ರುದ್ರಯ್ಯ ನವರ ಜೊತೆಯಲ್ಲಿ ದ್ದ ಮುಖಂಡರು ಕಾಂಗ್ರೆಸ್ ಪಕ್ಷದ ಕಡೆ ವಾಲಿದ್ದು ಮುಖಂಡರು ಇಲ್ಲದ ಪಕ್ಷವಾಗಿದೆ. ಕೇವಲ ಮಾವ ಅಳಿಯ ಕ್ಷೇತ್ರದಲ್ಲಿ ಓಡಾಡುತ್ತಿದ್ದು ಫುಟ್ಬಾಲ್ ಪಂಚರ ಆಗುವ ಲಕ್ಷಣಗಳು ಕಾಣಿಸುತ್ತಿದೆ ಎಂದು ಕ್ಷೇತ್ರದಲ್ಲಿ ಜನತೆ ಮಾತನಾಡುತ್ತಿದ್ದಾರೆ. ಲಿಂಗಸುಗೂರ ಕ್ಷೇತ್ರದಲ್ಲಿ ಕೈ .ಹಾಗೂ ಕಮಲದ ನಡುವೆ ಜಿದ್ದಾ ಜಿದ್ದು ನಡೆಯುದು ಎಂದು ಕ್ಷೇತ್ರದ ಜನರು ಮಾತಾನಾಡುತ್ತಿದ್ದರೆ.

Be the first to comment

Leave a Reply

Your email address will not be published.


*