ವಿಜಯಪುರ :ವಚನಗಳ ಹರಿಕಾರ ಬಸವಣ್ಣನವರು ವಿಜಾಪುರ ಜಿಲ್ಲೆಯ ಬಾಗೇವಾಡಿ ಗ್ರಾಮದಲ್ಲಿ 1134ರಲ್ಲಿ ಮಾದರಸ ಮತ್ತು ಮಾದಲಾಂಬಿಕೆಯ ಪುತ್ರನಾಗಿ ಜನಿ ಸಿದರು. ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋದಿಯಾಗಿದ್ದ ಬಸವಣ್ಣನವರು ಬ್ರಾಹ್ಮಣ ಸಂಪ್ರದಾಯದ ಕಟ್ಟಳೆಗಳನ್ನು , ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ, ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದರು. ಮೂಢ ನಂಬಿಕೆ, ಕಂದಾಚಾರಗಳಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಪುರುಷ ಪ್ರಧಾನ ವರ್ಣ ವ್ಯವಸ್ಥೆಯಿಂದ ಪಡಬಾರದ ಕಷ್ಟಪಡುತ್ತಿದ್ದ ಕಾಯಕ ಜೀವಿಗಳು, ಮಹಿಳೆಯರು ಮತ್ತು ಪಂಚಮರುಗಳ ಮೇಲಾಗುತ್ತಿದ್ದ ಶೋಷಣೆ ವಿರುದ್ಧ ಸಿಡಿದೆದ್ದರು. ಜಾತಿ, ಮತ, ಲಿಂಗ ಭೇದ ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ,ಮಹಾಮಾನವತಾ ವಾದಿ ಎಂದೂ ಕರೆಯಲಾಗಿದೆ. ಮಾನವಿಯತೆ. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು.
“ಇವನಾರವ, ಇವನಾರವ ಎಂದೆನ್ನದಿರಯ್ಯ
ಇವ ನಮ್ಮವ, ಇವ ನಮ್ಮವ ಎಂದೆನ್ನಿರಯ್ಯ”
ಎಂದು, ಜಾತೀಯತೆಯ ವಿರುದ್ಧ ಸಮರ ಸಾರಿದ ಬಸವಣ್ಣ. ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿದರು. “ಹೊಲೆಯನೆಂಬುವವನು ಊರ ಹೊರಗಿಹನೇ? ಊರ ಒಳಗಿಲ್ಲವೆ? ಎಂದು ಪ್ರಶ್ನಿಸಿ, ಅಸ್ಪೃಶ್ಯತೆ ಹೆಸರಿನಲ್ಲಿ ಊರ ಹೊರಗೆ ಇರಿಸಿದ್ದ ದಲಿತರನ್ನು ಕರೆತಂದು ಸಮಾಜದ ಭಾಗವನ್ನಾಗಿ ಮಾಡಿದರು.
1ಬಸವ ಕಲ್ಯಾಣದಲ್ಲಿ ಬಸವಣ್ಣನವರು ಶರಣರ ಜೊತೆ ಸೇರಿ ಅನುಭವ ಮಂಟಪ ಸ್ಥಾಪಿಸಿದರು. ಅನುಭವ ಮಂಟಪವು ವಿಶ್ವ ಮಾನವ ಸಂದೇಶ ಮತ್ತು ವಿಚಾರಗಳ ಬಗೆಗೆ ಮುಕ್ತವಾಗಿ ಚರ್ಚಿಸಬಹುದಾದ ವೇದಿಕೆಯಾಗಿದ್ದು, ಭಾರತದಾದ್ಯಂತ ಅನೇಕೆ ಕಡೆಗಳಿಂದ ಜನರನ್ನು ಸೆಳೆಯಿತು. ಇದೇ ಸಮಯದಲ್ಲೇ ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗಾಗಿ ವಚನಗಳ ರಚನೆ ಆರಂಭವಾಯಿತು.
ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ ” ಶಿವಶರಣ ” ರೆಂದು ಕರೆದರು.
ಬಸವಣ್ಣನವರ ವಚನಗಳು ಜಗತ್ತಿಗೆ ಉತ್ತಮ ಸಂದೇಶಗಳಾಗಿವೆ. ಭಾರತ ಸರಕಾರದ ಅಂಚೆ ಇಲಾಖೆಯು ಗುರು ಬಸವಣ್ಣವರ ಭಾವಚಿತ್ರವುಳ್ಳ ಅಂಚೆ ಚೀಟಿ, ಭಾವಚಿತ್ರವುಳ್ಳ ೫ ರೂಪಾಯಿ ಮತ್ತು ೧೦೦ ರೂಪಾಯಿ ನಾಣ್ಯ ಮುದ್ರಿಸಿತು. ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಬಸವಣ್ಣನವರು ಪ್ರಥಮ ಕನ್ನಡಿಗ ರಾಗಿದ್ದಾರೆ.ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯ ಪಾರ್ಲಿಮೆಂಟ್ ನಲ್ಲಿ ಅನಾವರಣಗೊಳಿಸಲಾಗಿದೆ.
ಅರ್ಥಪೂರ್ಣ ಬಸವ ಜಯಂತಿ:
ರಾಜ್ಯಾಧ್ಯಂತ ಬಸವೇಶ್ವರರ ಜಯಂತಿಯನ್ನು ಆಚರಿಸುತ್ತಿದ್ದೂ ಜೇವರ್ಗಿಯಲ್ಲಿಯೂ ಕೂಡ ಅದ್ದೂರಿಯಾಗಿ ಆಚರಿಸಲಾಯಿತು ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಜಗಜ್ಯೋತಿ ಬಸವಣ್ಣನವರಿಗೆ ಗೌರವ ನಮನಗಳು ಸಲ್ಲಿಸಲಾಯಿತು.
ಶಾಸಕ ಡಾ. ಅಜಯಸಿಂಗ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಶಿವರಾಜ ಪಾಟೀಲ ರದ್ದೇವಾಡಗಿ ರಾಜಶೇಖರ್ ಸಿರಿ ಶರಣಬಸಪ್ಪ ಕಲ್ಲಾ ವಸಂತ ನರಿಬೋಳ ಶಿವಕುಮಾರ್ ಕಲ್ಲಾ ನೀಲಕಂಠ ಅವಂಟಿ ಬಸವರಾಜ್ ಬೂದಿಹಾಳ ಬಸವಭಿಮಾನಿಗಳು ನೀಲಮ್ಮನ ಬಳಗ ಮತ್ತು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ನೂರಾರು ಜನ ಉಪಸ್ಥಿತರಿದ್ದರು.
Be the first to comment