ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರಕ್ಕೆ ಕೊರಮ- ಕೊರಚ ಸಮುದಾಯದ ಏಕೈಕ ಅಭ್ಯರ್ಥಿ ಜಿ.ಪಲ್ಲವಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿ : ಅಖಿಲ ಕರ್ನಾಟಕ ಕುಳುವ ಮಹಾಸಂಘ ಒತ್ತಾಯ

ಬೆಂಗಳೂರು: ಸಾಮಾಜಿಕ ನ್ಯಾಯದಡಿ ಪರಿಶಿಷ್ಟ ಜಾತಿಯ ಅಲೆಮಾರಿ ಕೊರಮ-ಕೊರಚ (ಕುಳುವ) ರಾಜ್ಯದ ಏಕೈಕ ಅಭ್ಯರ್ಥಿ ಶ್ರೀಮತಿ ಪಲ್ಲವಿ.ಜಿ ಅವರಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭೆಯ ಮೀಸಲು ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ ಅಂತಿಮಗೊಳಿಸುವಂತೆ ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಶಿವಾನಂದ ಎಂ. ಭಜಂತ್ರಿ ಮಾತನಾಡಿ,

ರಾಜ್ಯದಲ್ಲಿ 10-12ಲಕ್ಷ ಜನಸಂಖ್ಯೆಯುಳ್ಳ ಕೊರಮ-ಕೊರಚ ಕುಳುವ ಜನಾಂಗ 5ನೇ ಅತಿದೊಡ್ಡ ಸಮುದಾಯವಾಗಿದ್ದು, ಪಲ್ಲವಿ ಅವರು ದಶಕಗಳಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ತಳಮಟ್ಟದಿಂದ ದುಡಿದ್ದಾರೆ. ಎಲ್ಲಾ ಸಮುದಾಯದ ಶ್ರೇಯೋಭಿವೃದ್ದಿಗೆ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಮೀಸಲು ಮತಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಂಭವನೀಯ 2ನೇ ಪಟ್ಟಿಯಲ್ಲಿ ಸ್ಥಳೀಯ ಆಕಾಂಕ್ಷಿ ಪಲ್ಲವಿ.ಜಿ ಹೆಸರು ಅಂತಿಮವಾಗಿದ್ದರೂ ಸಹ, ಪರಿಶಿಷ್ಟ ಜಾತಿಯ ಬಲಾಡ್ಯ ಒಳ ಜಾತಿಗಳು ಷಡ್ಯಂತ್ರ ನಡೆಸುತ್ತಿದ್ದು ಇದು ಅತ್ಯಂತ ಖಂಡನೀಯ ಹಾಗೂ ಅಲೆಮಾರಿ ಸಮಯದಾಯಗಳ ದಮನಕಾರಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿ ಕ್ಷೇತ್ರದ ಪರಿಚಯವೇ ಇಲ್ಲದ, ಜನರ ಗುರುತೇ ಇಲ್ಲದ ದೂರದ ರಾಯಚೂರಿನ ವ್ಯಕ್ತಿಗೆ ಅವಕಾಶ ನೀಡಲು ಕಾಣದ ಕೈಗಳು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿವೆ. ಈ ತಾರತಮ್ಯ ನೀತಿ ವಿಷಾಧನೀಯ.

 

ಸಾಮಾಜಿಕ ನ್ಯಾಯ ಮತ್ತು ಕಾಂಗ್ರೆಸ್ ತತ್ವಸಿದ್ಧಾಂತಕ್ಕೆ ಬದ್ಧರಾಗಿರುವವರಿಗೆ ಅವಕಾಶ ಕಲ್ಪಿಸಬೇಕು. ಸಮಾಜದ ಕಟ್ಟಕಡೆಯ ಅವಕಾಶ ವಂಚಿತ ಅಲೆಮಾರಿ ಕುಳುವ ಸಮುದಾಯಕ್ಕೆ ಅನ್ಯಾಯವೆಸಗುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು. ಪಲ್ಲವಿಯವರಿಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೇಸ್ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ

Be the first to comment

Leave a Reply

Your email address will not be published.


*