ಜೇವರ್ಗಿ :: ಬಿಜೆಪಿ ಕಟ್ಟಾಳು ಮಾಜಿ ಶಾಸಕರಾದ ದೊಡ್ಡ್ಗಪ್ಪಗೌಡ ನರಿಬೋಳ ತಮ್ಮಗೆ ಜೇವರ್ಗಿ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿದಕ್ಕೆ ಅಭಿಮಾನಿಗಳ ಸ್ವಾಭಿಮಾನದ ಸಭೆ ಕರೆದಿದ್ದರು. ಅವರ ಕರೆಗೆ ಹಳ್ಳಿ ಹಳ್ಳಿಯಿಂದ ಆಗಮಿಸಿದ ಅವರ ಅಭಿಮಾನಿದ ಸ್ವಾಭಿಮಾನಿಗಳು ಅವರನು ಹೆಗಲಿಗೆ ಮೇಲೆ ಹೊತ್ತು ವೇದಿಕೆ ಕರೆತಂದರು ಜೇವರ್ಗಿ ಜನರ ಪರ ಮಾತಡಿದ ದೊಡ್ಡಪ್ಪಗೌಡ ನರಿಬೋಳರು ನನ್ನ ಕರೆ ಆಗಮಿಸಿದ ತಮ್ಮ ಅಭಿಮಾನಕ್ಕೆ ನಾನು ಚಿರರೂಣಿ ಯಾಗಿರುವೆ.ನನ್ನ ರಾಜಕೀಯ ಜೀವನಕ್ಕೆ ನಿವೇ ದಾರಿ ದೀಪ ನಿಮ್ಮ ಸೇವೆ ಮಾಡುವುದೆ ನನ್ನ ಗುರಿ ಜೇವರ್ಗಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ನಿಮ್ಮ ಆರ್ಶೀವಾದ ಸದಾಕಾಲವೂ ನನ್ನ ಮೇಲೆ ಇರುಬೇಕು ಎಂದು ದುಃಖಿಸುತ್ತಲೆ ಹೇಳಿದರು.
ಬಿಜೆಪಿಯ ಕೆಲವು ಜನ ಉದ್ದೇಶ ಪೂರ್ವಕವಾಗಿ ನನಗೆ ಟಿಕೆಟ ತಪ್ಪುವಂತೆ ಮಾಡಿದ್ದಾರೆಂದು ಭಾವೋದ್ರಿಕ್ತರಾಗಿ ಗಳಗಳನೆ ಕಣ್ಣಿರು ಹಾಕಿದರು.ಸಭೆಯಲ್ಲಿಯೇ ನಾನು ಮುಂದೆ ಏನು ಮಾಡಲಿ ಎಂದು ಜನರನ್ನು ಕೇಳಿದರು ಜನರು ನಿವು ಚುನಾವಣೆಗೆ ಸ್ಪರ್ಧಿಸಿಲ್ಲೆಬೇಕು ನಾವು ನಿಮ್ಮ ಜೋತೆಗೆ ಇದ್ದೆವೆ ಎಂದು ಎಲ್ಲರು ಜೋರು ಧ್ವನಿಯಲ್ಲಿ ಹೇಳಿದರು.ನಿಮ್ಮ ಅಭಿಪ್ರಾಯದಂತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೆನೆ.ಟಿಕೆಟ್ ನೀಡದೆ ಮೋಸ ಮಾಡಿದ ಬಿಜಿಪಿ ಪಕ್ಷಕ್ಕೆ ರಾಜಿನಾಮೆ ಸಲ್ಲುಸುತ್ತೆನೆ ಎಂದು ಜನರ ಎದುರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೇವರ್ಗಿ ತಾಲ್ಲೂಕಿ ಪ್ರಮುಖ ಮುಖಂಡರು ಇದ್ದರು ಅವರ ಆಪ್ತ ವಲಯದಲ್ಲಿ ಗುರುತಿಸಲ್ಪಡುವ ದಂಡಪ್ಪ ಸಾಹು,ಸಾಯಬಣ್ಣ ದೊಡ್ಡಮನಿ,ಬಸವರಾಜಗೌಡ ಮಾಲೀ ಪಾಟೀಲ್,ಶಿವಾನಂದ ಮಾಕಾ, ಹಳ್ಳಿ ಹಳ್ಳಿ ಯಿಂದ ಆಗಮಿಸಿದ ಸಹಸ್ರ ಸಂಖ್ಯೆಯ ಕಾರ್ಯಕರ್ತರು ಇದ್ದರು.
Be the first to comment