ಸರಕಾರದ ನಿಬಂಧನೆಗಳನ್ನು ಅರೆತು ಅಂಬೇಡ್ಕರ ಜಯಂತಿ ಆಚರಿಸಿ-ಸಂತೋಷ ಇನಾಮದಾರ*

ರಾಜ್ಯದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಕಾರ ಕೆಲವು ನಿಬಂಧನೆಗಳನ್ನು ನೀಡಿದ ಅವುಗಳನ್ನು ಗಮದಲ್ಲಿಟ್ಟಿಕೊಂಡು ಭಾರತ ರತ್ನ ಡಾಃಬಿ.ಆರ್.ಅಂಬೇಡ್ಕರ ಜಯಂತಿ ಆಚರಣೆ ಮಾಡುವಂತೆ ಚಿಂಚೋಳಿ ಮತಕ್ಷೇತ್ರದ ಚುನಾವಣಾಧಿಕಾರಿ ಸಂತೋಷ ಇನಾಮದಾರ ತಿಳಿಸಿದರು

 

ಅವರು ನಗರದ ಡಿವಾಯ್ಎಸ್ಪಿ ಕಛೇರಿ ಆವರಣದಲ್ಲಿ ಅಂಬೇಡ್ಕರ ಜಯಂತಿ ನಿಮಿತ್ಯ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಭಾಗವಹಿಸಿ ದಲಿತ ಸಂಘಟನೆಗಳ ಮುಖಂಡರಿಗೆ ಸಲಹೆ ನೀಡುತ್ತಿದ್ದರು

 

ಜಯಂತಿ ಆಚರಣೆ ಮಾಡುವ ಸಂಘಟಿಕರು ಸಂಬಂಧಿಸಿದ ಇಲಾಖೆಯಿಂದ ಕಡ್ಡಾಯವಾಗಿ ಪರವಾನಿಗೆ ತೆಗೆದುಕೊಳ್ಳಬೇಕು ಧ್ವನಿ ವರ್ಧಕ ಬಳಕೆಗೆ ಅವಕಾಶವಿಲ್ಲ ರಾಜಕೀಯ ಪ್ರೇರಿತ ಭಾಷಣ ಮಾಡುವುದಾಗಲಿ ಯಾವುದೇ ಪಕ್ಷಕ್ಕೆ ಹೊಗಳುವುದಾಗಲಿ ತೆಗಳುವುದಾಗಲಿ ಮಾಡುವಂತಿಲ್ಲವೆಂದು ಚುನಾವಣಾ ಆಯೋಗದ ಕೆಲವು ನಿಬಂಧನೆಗಳನ್ನು ಅವರು ಓದಿ ಹೇಳಿದರು

 

ಕಾರ್ಯಕ್ರಮ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಡಿವಾಯ್ಎಸ್ಪಿ ರುದ್ರಪ್ಪಾ ಉಜ್ಜನಕೊಪ್ಪ ಅಂಬೇಡ್ಕರ ಜಯಂತಿ ನಿಮಿತ್ಯ ದುಂದುವೆಚ್ಚಕ್ಕಾಗಿ ಖರ್ಚು ಮಾಡುವ ಹಣಕ್ಕೆ ಕಡಿವಾಣ ಹಾಕಿ ಅಂಬೇಡ್ಕರ ಅವರ ಬಗ್ಗೆ ಮಾತನಾಡುವ ವಾಗ್ಮಿಯನ್ನು ಔಹಾನಿಸಿ ಉಪನ್ಯಾಸ ನೀಡಿ ಮುಂದಿನ ಪೀಳಿಗೆಗಳ ಮನ ಪರಿವರ್ತಿಸಿ ಎಂದು ಅನೇಕ ಅಮೂಲ್ಯ ಸಲಹೆಗಳನ್ನು ನೀಡಿದರು

 

ಈ ಶಾಂತಿ ಸಭೆಯಲ್ಲಿ ತಹಸಿಲ್ದಾರ ವೀರೇಶ ಮುಳುಗುನಮಠ ಸಿಪಿಐ ಅಮರಪ್ಪಾ ಶಿವಬಲ್ಲ ಪ್ರೋ:ಮಲ್ಲಿಕಾರ್ಜುನ ಪಾಲಾಮೂರ ದಲಿತ ಮುಖಂಡರಾದ ಆರ್.ಗಣಪತರಾವ ಗೋಪಾಲ ರಾಂಪೂರೆ ಆನಂದ ಟೈಗರ್ ಮಾರುತಿ ಗಂಜಗೇರಿ ಅಮರ ಲೊಡ್ನೂರ ಗೌತಮ ಬೊಮ್ನಳ್ಳಿ ರಘುವೀರ ಕುಂಚಾವರಂ ಸೇರಿದಂತೆ ಅನೇಕರು ಮಾತನಾಡಿದರು

 

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ತಾಲೂಕಾ ಪಂಚಾಯತ ವ್ಯವಸ್ಥಾಪಕ ಶಿವಶಂಕರಯ್ಯ ಸ್ಥಾವರಮಠ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ಬುಳ್ಳಾ ಪಿಎಸ್ಐ ಮಹೇಬೂಬ ಅಲಿ ರಾಜಶೇಖರ ರಾಠೋಡ ಚಂದ್ರನಾಥ ಕುಂಚಾವರಂ ಶಿಕ್ಷಣ ಸಂಯೋಜಕ ಅಶೋಕ ಹೂವಿನಬಾವಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ದಲಿತ ಮುಖಂಡರು ಹಾಗೂ ಪೊಲೀಸ ಸಿಬ್ಬಂದಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*