ಮೀಸಲಾತಿ ನೆಪವೊಡ್ಡಿ ಜಾತಿಗಳ ನಡುವೆ ಕಾಂಗ್ರೇಸ್ ಜಗಳ ಹಚ್ಚುತ್ತಿದೆ-ಕಟ್ಟಿಮನಿ*

ಚಿಂಚೋಳಿ :ಮೀಸಲಾತಿ ನೆಪವೊಡ್ಡಿ ತಾಲೂಕಿನಾದ್ಯಂತ ದಲಿತ ಸ್ಪರ್ಷ ಹಾಗೂ ದಲಿತ ಅಸ್ಪ್ರೃಶ್ಯ ಸಮುದಾಯಗಳ ನಡುವೆ ಕಾಂಗ್ರೇಸ್ ಪಕ್ಷ ಪ್ರಚೋದನೆ ನೀಡಿ ಜಗಳ ಹಚ್ಚುವ ಕೆಲಸಕ್ಕೆ ಕೈ ಹಾಕಿದೆ ಎಂದು ಬಿಜೆಪಿ ವಕ್ತಾರ ಶ್ರೀಮಂತ ಕಟ್ಟಿಮನಿ ಆರೋಪಿಸಿದ್ದಾರೆ

 

ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ರಾಜ್ಯ ಸರಕಾರ ಜನಗಣತಿ ಆಧಾರದ ಮೇಲೆ ಮೀಸಲಾತಿ ನೀಡಿದೆ ಆದರೆ ಇದನ್ನು ಅರಗಿಸಿಕೊಳ್ಳದ ಕಾಂಗ್ರೇಸ್ಸಿಗರು ದಲಿತ ಸಮುದಾಯಗಳ ನಡುವೆ ವಿಷಬೀಜ ಬಿತ್ತಿ ದಲಿತ ಸಮುದಾಯಗಳ ಸೌಹಾರ್ದತೆ ಧಕ್ಕೆ ತರುತ್ತಿದ್ದಾರೆಂದು ಕಟ್ಟಿಮನಿ ಕಾಂಗ್ರೇಸ್ ವಿರುದ್ಧ ಕಿಡಿಕಾರಿದರು

 

ರಾಜ್ಯದಲ್ಲಿ ದಲಿತ (ಬಲಗೈ) ಸಮುದಾಯದ ಜನಸಂಖ್ಯೆ ಹೆಚ್ಚಿದೆ ನಮ್ಮ ಸಮುದಾಯಕ್ಕೆ ಕಡಿಮೆ ಮೀಸಲಾತಿ ನೀಡಿದರು ನಾವು ರಾಜಕೀಯ ಉದ್ದೇಶದಿಂದ ಸುಮ್ಮನಿದ್ದೇವೆ ಆದರೆ ಕೆಲವು ಸಮುದಾಯಗಳಿಗೆ ಮೀಸಲಾತಿ ಅಧಿಕ ಪ್ರಮಾಣದಲ್ಲಿ ನೀಡಿದರು ಅವರಿಗೆ ಸರಕಾರ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ನೀಡಿಲ್ಲವೆಂದು ಕಾಂಗ್ರೇಸ್ಸಿಗರು ಎತ್ತಿ ಕಟ್ಟಿ ಬೀದಿಗಿಳಿಯುವಂತೆ ಮಾಡುತ್ತಿದ್ದಾರೆಂದು ಕಟ್ಟಿಮನಿ ಗುಡುಗಿದರು

 

ಚಿಂಚೋಳಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದವರು ಸಮುದಾಯಗಳ ನಡುವೆ ಎತ್ತಿ ಕಟ್ಟುವ ಚಾಳಿ ಹೀಗೆ ಮುಂದುವರೆದರೆ ದಲಿತ (ಬಲಗೈ) ಸಮುದಾಯದವರು ಸುಮ್ಮನಿರಲು ಸಾಧ್ಯವಿಲ್ಲವೆಂದು ಕೈ ಪಕ್ಷದವರಿಗೆ ಕಟ್ಟಿಮನಿ ಎಚ್ಚರಿಕೆ ಗಂಟೆ ರವಾನಿಸಿದರು.

Be the first to comment

Leave a Reply

Your email address will not be published.


*