ಚಿಂಚೋಳಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಗ್ಯಾರಂಟಿ-ರಮೇಶ ಯಾಕಾಪೂರ*

ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಸ್ಪರ್ಧೆಯಿದೆ ಎಂದು ಎರಡು ಪಕ್ಷಗಳ ಮುಖಂಡರು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಆದರೆ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ಇವರ ಲೆಕ್ಕ ಉಲ್ಟಾ ಆಗಲಿದೆ ಎಂದು ಹಿರಿಯ ರಾಜಕೀಯ ಮುತ್ಸದ್ದಿ ರಮೇಶ ಯಾಕಾಪೂರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

 

ಅವರು ತಮ್ಮ ಸ್ವ-ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿಂಚೋಳಿ ಮತಕ್ಷೇತ್ರದಲ್ಲಿ ಯಾರು ಎಷ್ಟು ಅಪಪ್ರಚಾರ ಮಾಡಿ ತಿಪ್ಪರಾ ಲಾಗ ಹಾಕಿದರು ತ್ರಿಕೋನ ಸ್ಪರ್ಧೆ ಏರ್ಪಡುವುದು ಗ್ಯಾರಂಟಿ ಎಂದು ತಮ್ಮ ಹೇಳಿಕೆ ನೀಡಿದರು

 

ಕಾಂಗ್ರೇಸ್ ಪಕ್ಷವು ಚಿಂಚೋಳಿ ಕ್ಷೇತ್ರದ ಸ್ಥಳಿಯರಿಗೆ ಮೂಲೆಗುಂಪು ಮಾಡಿ ಬೇರೆ ತಾಲೂಕಿನ ಮುಖಂಡನಿಗೆ ಮಣೆ ಹಾಕಿದೆ ಚಿಂಚೋಳಿ ಮತಕ್ಷೇತ್ರಕ್ಕೆ ಈ ಮುಖಂಡನ ಅಗತ್ಯತೇ ಹಾಗೂ ಕೊಡುಗೆ ಏನೆಂಬುವುದನ್ನು ಸ್ಪಷ್ಟಿಕರಿಸುವಂತೆ ಕಾಂಗ್ರೇಸ್ ಅಭ್ಯರ್ಥಿಗೆ ಯಾಕಾಪೂರ ಸವಾಲು ಹಾಕಿದರು

 

ಕಳೆದ ಉಪ-ಚುನಾವಣೆಯಲ್ಲಿ ಚಿಂಚೋಳಿ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಗೆ ಅವರ ಸಮುದಾಯದ ಮತಗಳೇ ಅವರಿಗೆ ಸಾಥ್ ನೀಡಲ್ಲಿಲ್ಲ ಅಂದ ಬಳಿಕ ಈ ಬಾರಿ ಅವರಿಗೆ ಯಾವ ಸಮುದಾಯಗಳು ಆಶೀರ್ವದಿಸುತ್ತವೆ ಕಾದು ನೋಡೋಣ ಎಂದರು

 

ಡಾಃಉಮೇಶ ಜಾಧವ ಅವರಿಂದ ತೆರವಾದ ಶಾಸಕ ಸ್ಥಾನಕ್ಕೆ ಅವರ ಸುಪುತ್ರ ಡಾಃಅವಿನಾಶ ಜಾಧವ ಅವರಿಗೆ ಉಪ-ಚುನಾವಣೆಯಲ್ಲಿ ಸರ್ವ ಸಮುದಾಯಗಳು ಮತ ನೀಡಿರುವುದರಿಂದ ಅವರ ಗೆಲವು ಸರಳವಾಯಿತು ಆದರೆ ಈ ಬಾರಿ ಕ್ಷೇತ್ರದಲ್ಲಿ ವಾತಾವರಣ ಅಷ್ಟು ಸರಳಿಲ್ಲ ತ್ರಿಕೋನ ವಾತಾರಣವಾಗಿ ಮಾರ್ಪಟ್ಟಿದೆ ಎಂದರು

 

ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಅವಾಂತರ ಸೃಷ್ಟಿ ಮಾಡುವುದರಲ್ಲಿ ತಲ್ಲೀನವಾಗಿವೆ ಜನ ಸಾಮಾನ್ಯರು ಬಳಸುವ ದಿನನಿತ್ಯ ಬಳಕೆಯ ಬೆಲೆ ಸೇರಿದಂತೆ ಇತರೆ ವಸ್ತುಗಳ ಬೆಲೆ ಗಗನಕ್ಕೇರಿ ಬಡವನ ಕಣ್ಣೀರು ಕಪಾಳಕ್ಕೆ ಹರಿಯುವಂತೆ ಮಾಡಿದೆ ಎಂದು ಡಬಲ್ ಇಂಜಿನ್ ಸರಕಾರದ ವಿರುದ್ಧ ಗುಡುಗಿದರು

 

ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೇರಿದ ಕ್ಷಣದಿಂದ ರಾಜ್ಯದ್ಯಂತ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದೆ ಅನೇಕ ನಿರಪರಾಧಿ ಯುವಕರ ಕಗ್ಗೊಲೆ ಸಂವಿಧಾನ ವಿರೋಧಿ ಕಾರ್ಯಗಳು ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮೀಸಲಾತಿ ರದ್ದುಪಡಿಸಿರುವುದು ಸೇರಿ ಇನ್ನೀತರ ಕಾನೂನು ಬಾಹೀರ ಚಟುವಟಿಕೆಗಳೆ ಇವರ ಸಾಧನೆ ಎಂದು ಬಿಜೆಪಿ ಸರಕಾರದ ವಿರುದ್ಧ ಯಾಕಾಪೂರ ಹರಿಹಾಯ್ದರು

 

ಜೆಡಿಎಸ್ ಮುಖಂಡ ಸಂಜೀವನ್ ಕಳೆದ ಎರಡು ವರ್ಷಗಳಿಂದ ಕ್ಷೇತ್ರದ್ಯಂತ ಸಂಚರಿಸಿ ಜನ ಸಾಮಾನ್ಯರ ನಾಡಿ ಬಡಿತ ಅರೆತ್ತಿದ್ದಾರೆ ಬಡವರ ರೈತರ ಶೋಷಿತರ ಅಲ್ಪಸಂಖ್ಯಾತರ ದಮನಿತರ ಸೇರಿದಂತೆ ಇತರರ ಧ್ವನಿಯಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸೇವೆಯನ್ನು ಗುರುತಿಸಿ ಈ ಬಾರಿ ಕ್ಷೇತ್ರದ ಮತದಾರ ಪ್ರಭುಗಳು ಇವರ ಕೈ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು

 

ಮುಖಂಡ ಸಂಜೀವನ್ ಮುಲ್ಲಾಮಾರಿ ಕೆಳದಂಡೆ ಯೋಜನೆಯಲ್ಲಿ ನಡೆದ ಭಾರಿ ಪ್ರಮಾಣದ ಭೃಷ್ಟಚಾರ ಬಂಜಾರಾ ಅಭಿವೃದ್ಧಿ ನಿಗಮದಿಂದ ಬಿಡುಗಡೆಯಾದ ಕೋಟ್ಯಾಂತರ ರೂ.ಗಳ ಭೃಷ್ಟಚಾರ ಚಿಟ್ಟೆನಾಡು ಕಂಪನಿಯ ದುರಾಡಳಿತ ಹಾಗೂ ಕ್ಷೇತ್ರದ ಇತರೆ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದಾರೆ ಅಲ್ಲದೇ ಅವರು ಕೋವಿಡ್ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಕೂರದೇ ಅನೇಕ ಬಡವರಿಗೆ ಅಂಗವಿಕಲರಿಗೆ ನಿರ್ಗತಿಕರಿಗೆ ಶೋಷಿತರಿಗೆ ಕೊರೋನಾ ದಿನಸಿ ಕಿಟ್ಟುಗಳ ಪ್ಯಾಕೇಜ್ ನೀಡಿ ಸಹಾಯ ಹಸ್ತ ಚಾಚಿದ್ದಾರೆ ಇವರ ಋಣ ತೀರಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆಂದು ರಮೇಶ ಭವಿಷ್ಯ ನುಡಿದರು

 

ಕ್ಷೇತ್ರದಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಸ್ಪರ್ಧೆಯೆಂದು ಬೀಗುವವರಿಗೆ ಜನತಾ ದಳ ಪಕ್ಷದ ಅಭ್ಯರ್ಥಿಯ ಶಕ್ತಿ ಏನೆಂಬುದು ಮತ ಎಣಿಕೆ ಸಂದರ್ಭದಲ್ಲಿ ಗುರುತಾಗಲಿದೆ ಎಂದು ರಮೇಶ ಯಾಕಾಪೂರ ಪರೋಕ್ಷವಾಗಿ ಟಾಂಗ್ ಕೊಟ್ಟರು.

Be the first to comment

Leave a Reply

Your email address will not be published.


*