ಲಿಂಗಸೂಗೂರು ಆಧುನಿಕ ಭಾರತದಲ್ಲಿ ಮಹಿಳಾ ಶಕ್ತಿ ಎಂಬ ಪದ ತೂಕದ ಅರ್ಥವನ್ನು ಕೊಡುತ್ತದೆ ನಡುರಾತ್ರಿಯಲ್ಲಿ ಮಹಿಳೆ ಯೊಬ್ಬಳು ನಿರ್ಭಯದಿಂದ ಏಕಾಂಗಿ ಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಹಾತ್ಮಾ ಗಾಂಧೀಜಿಯವರ ನುಡಿಗಳು ಪ್ರಸ್ತುತ ಪುರುಷ ಪ್ರಧಾನ ರಾಷ್ಟ್ರ ಭಾರತದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿಗಿಂತಲೂ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆನ್ನುವ ಕಾಲದಲ್ಲಿ ರಾಜ್ಯಕಿಯ ಕ್ಷೇತ್ರದಲ್ಲಿ ವಂಚಿತ ರಾಗಿದ್ದಾರೆಂದರೆ ತಪ್ಪಾಗಲಾಗದು.
ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿರುವುದನು ಖಾತರಿ ಮಾಡಬೇಕೆಂದರೆ ಮಹಿಳಾ ಮೀಸಲಾತಿ ತುಂಬಾ ಮುಖ್ಯ. ಮಹಿಳಾ ಮೀಸಲಾತಿಯ ಅಗತ್ಯವನ್ನು ಇನ್ನೂ ಪ್ರಬಲವಾಗಿ ಬೆಳಕಿಗೆ ತರಬೇಕಾಗಿದೆ. ರಾಜಕೀಯ ಪಕ್ಷಗಳು ಸಹ ಸ್ವಪ್ರೇರಣೆಯಿಂದ ಮಹಿಳೆಯರಿಗೆ ಅವಕಾಶ ಕೊಡುವುದು ತುಂಬಾ ಕಡಿಮೆಯೆನ್ನುವ ಸತ್ಯವೂ ಸಹ ಮೀಸಲಾತಿಯ ಅಗತ್ಯವನ್ನು ಜರೂರು ಮಾಡುತ್ತದೆ. ಪಕ್ಷಗಳು ಮಹಿಳಾ ಪ್ರತಿನಿಧಿಗಳ ತಾರಾ ವರ್ಚಸ್ಸನ್ನು ಅಥವಾ ಅವರ ವಂಶಪರಂಪರೆಯ ಮೇಲೆ ಪ್ರಧಾನವಾಗಿ ಆಧಾರ ಪಡುತ್ತವೆ. ರಾಜಕೀಯ ಪಕ್ಷಗಳು ಮಹಿಳಾ ಅಭ್ಯರ್ಥಿಗಳನ್ನು ಚುನಾಯಿಸುವಾಗ ಅವರ ಗೆಲ್ಲುವ ಸಾಮರ್ಥ್ಯಗಳನ್ನು ಮಾತ್ರ ಪರಿಗಣಿಸುತ್ತವೆ. ಆದರೆ ಸಮುದಾಯದೊಂದಿಗೆ ಅವರು ಎಷ್ಟು ಬೆರೆತು ಕೆಲಸ ಮಾಡಿದ್ದಾರೆಂಬುದನ್ನು ಕಡೆಗಣಿಸುತ್ತವೆ. ಒಂದು ವೇಳೆ ಪಕ್ಷದ ಟಿಕೆಟ್ ದೊರೆತರೂ ಅವರು ತಮ್ಮ ಬಗ್ಗೆ ವ್ಯತಿರಿಕ್ತ ಧೋರಣೆಯುಳ್ಳ, ಕಚ್ಚೆಹರುಕ, ಮತ್ತು ದಬ್ಬಾಳಿಕೆ ಮಾಡುಂತ ಕಾರ್ಯಕರ್ತರೊಂದಿಗೆ ಕೆಲಸ ಮಾಡಬೇಕಾದ ಪ್ರತಿಕೂಲ ಸಂದರ್ಭವನ್ನು ಎದುರಿಸಬೇಕಾಗುತ್ತದೆ. ಮತ್ತು ಅಥವಾ ತಮ್ಮನ್ನು ಆಟದ ಗೊಂಬೆಯನ್ನಾಗಿ ಪರಿಗಣಿಸುವ, ಅಥವಾ ಪ್ರತಿಯೊಂದನ್ನು ಮತ್ತೊಬ್ಬರೇ ನಿರ್ವಹಿಸುವ ಅಥವಾ ತಮ್ಮ ಸ್ತ್ರೀತನವನ್ನು ಮಾತ್ರ ಗ್ಲಾಮರೀಕರಿಸುವಂತ ಅಪಮಾನಗಳಿಗೆ ಗುರಿಯಾಗಬೇಕಾಗುತ್ತದೆ. ಹೀಗೆ ತಮ್ಮ ವ್ಯಕ್ತಿತ್ವವು ಹನನವಾಗುವುದನ್ನು ಮಹಿಳೆಯರೇ ವಿರೋಧಿಸಬೇಕಿರುವುದು ಅತ್ಯಗತ್ಯ.
ರಾಜಕೀಯದಲ್ಲಿ ಮಹಿಳೆಯರು ಪ್ರಾದಿನಿದ್ಯಾಹ ಇಲ್ಲದಾಗಿದೆ ಸ್ವಾತಂತ್ರ‍್ಯ ಬಂದು .೭೬ ವರ್ಷ ಕಳೆದುಹೊಗಿದೆ, ರಾಜ್ಯದಲ್ಲಿ ಇಲ್ಲಿಯವರಿಗೆ ಸುಮಾರು ೧೫ ಚುನಾವಣಾ ನಡೆದು ಹೂಗಿವೆ ಆದರೆ ೧೬ ಚುನವಣೆ ಹೂಸ್ತಿಲಲ್ಲಿ ಇರುವ ಲಿಂಗಸೂಗೂರು ವಿಧಾನಸಬಾ ಕ್ಷೇತ್ರದಲ್ಲಿ ಮಹಿಳಯರನ್ನು ಯಾಕೆ ಗುರುತಿಸುವ ಕೆಲಸ ಯಾವ ಪಕ್ಷದವರು ಮಾಡಲಿಲ್ಲಾ ಮಹಿಳಾ ಜನಪ್ರತಿನಿದಿನಗಳ ಕಡೆ ಗಮನ ಹರಿಸದೆ ಮಹಿಳೆಯರಿಗೆ ಅನ್ಯಾಯ ಮಾಡಿದಂತೆ ಎದ್ದು ಕಾಣುತ್ತಿದೆ ?
ಈ ಕ್ಷೇತ್ರದಲ್ಲಿ ಮಹಿಳೆಯರು ಮನಸು ಮಾಡಿಲಾ ಕ್ಷೇತ್ರದಲ್ಲಿ ಶಾಸಕಿ ಆಗುವ ಅದ್ರುಷ್ಟ ಯಾವ ಮಹಿಳೆಯರಿಗೆ ಇದೆ ಗೂತ್ತಿಲಾ ಕಾಂಗ್ರೇಸ, ಬಿಜೆಪಿ, ಜೆಡಿಎಸ್ ಯಾವ ಪಕ್ಷದವರು ಮಹಿಳೆಯರಿಗೆ ಆಧ್ಯತೆ ನೀಡಿರುವುದಿಲ್ಲ, ಅನುಗುಣವಾಗಿ ಅನುಸರಿಸುತಿಲ್ಲಾ ಎಂದು ಸಾಮಾಜಿಕ ವೀಕ್ಷಕರು ಹೇಳುತ್ತಿದಾರೆ.
ಲಿಂಗಸೂಗೂರು ಕ್ಷೇತ್ರದಲ್ಲಿ ಒಟ್ಟು ೨.೪೯,೮೮೫ ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆ ೧,೨೫,೭೫೦ ಇರುತ್ತದೆ, ಅಂದರೆ ಪುರಷ್ಯರಕ್ಕಿಂತ ಹೆಚ್ಚು ಮಹಿಳಾ ಮತದಾರನ್ನು ಹೊಂದಿರುವಂತಹ ಕ್ಷೇತ್ರ ಇದಾಗಿರುತ್ತದೆ. ಆದರೆ ಇಲ್ಲಿ ಯಾವ ಮಹಿಳಾ ಅಭ್ಯೆರ್ಥಿಯು ಇಲ್ಲಿಯವರೆಗೆ ಶಾಸಕಿಯಾಗಿ ಆಯ್ಕೆ ಆಗಿಲ್ಲಾ.
ಇದು ಲಿಂಗಸೂಗೂರು ಶಾಸಕರ ಪರಂಪರೆ ಹೀಗಿದೆ.
೧೯೫೨ರಲ್ಲಿ ಎರಡು ಬಾರಿ ಬಸನಗೌಡರು ವಕೀಲರು ಕರಡಕಲ್, ಲಿಂಗಣ್ಣ ಗುತ್ತೇದಾರ, ಕೆ. ಸಂಗನಗೌಡರು ವಕೀಲರು, ಸಿ.ಎನ್. ಪಾಟೀಲ, ಎರಡು ಬಾರಿ ಬಸವರಾಜ ಪಾಟೀಲ ಆನ್ವರಿ, ರಾಜಾ ಅಮರಪ್ಪ ನಾಯಕ ಗುರಗುಂಟ, ರಾಜಾ ಅಮರೇಶ ನಾಯಕ ಗುಂತಗೋಳ, ಮೂರು ಬಾರಿ ಅಮರೇಗೌಡ ಬಯ್ಯಾಪೂರ, ಎರಡು ಬಾರಿ ಮಾನಪ್ಪ ಡಿ. ವಜ್ಜಲ್, ಪ್ರಸ್ತುತ ಡಿ. ಎಸ್ ಹೂಲಗೇರಿ ಯವರಿಂದ ಇಲ್ಲಿಗೆ ಬಂದ ಕಥೆ ಇದು ಮುಂದಾದರು ಮಹಿಳಾ ಜನ ಪ್ರತಿನಿದಿನಗಳನ್ನು ಗಣನೆಗೆ ಯಾವ ಪಕ್ಷ ತೆಗೆದು ಕೊಳ್ಳುವುದು ಕಾದು ನೋಡ ಬೇಕಾಗಿದೆ.
ಇನ್ನಾದರೂ ೭೬ ವರ್ಷ ಕಳೆದರೂ ಮಹಿಳಾ ಆಭ್ಯೆರ್ಥಿಯನ್ನು ಗುರುತಿಸದ ರಾಜಕೀಯ ಪಕ್ಷಗಳು ಇನ್ನೂ ರಾಷ್ಟೀಯ ಪಕ್ಷಗಳು ತಮ್ಮ ಅಭ್ಯೆರ್ಥಿಯನ್ನು ಘೋಷಣೆ ಮಾಡುವಾಗ ಮಹಿಳಾ ಅಭ್ಯೆರ್ಥಿಯನ್ನು ಗಣನೆಗೆ ತಗೆದುಕೊಂಡು ಮಹಿಳಾ ಮೀಸಲಾತಿ ಪ್ರಕಾರ ರಾಜಕಿಯ ಪಕ್ಷಗಳು ಸಮರ್ಥ ಮಹಿಳೆಯರನ್ನು ಗುರುತಿಸುವ ಕೆಲಸ ಮಾಡಬೇಕು.
Be the first to comment