ಚಿಲಕಲನೆರ್ಪು : ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ

ಚೇಳೂರು : ತಾಲೂಕಿನ ಚಿಲಕಲನೆರ್ಪು ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

 

ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಉದ್ಭವ ಹಾಗೂ ಉತ್ಸವ ಮೂರ್ತಿಗಳಿಗೆ ನಾನಾ ಪೂಜೆ ಕೈಂಕರ್ಯ ಜರುಗಿದವು. ಸುಮಾರು 35 ಅಡಿ ಎತ್ತರದ ರಥವನ್ನು ನಾನಾ ಬಣ್ಣದ ಧ್ವಜ, ಆಳೆತ್ತರದ ಹೂವಿನ ಹಾರ ಕಟ್ಟಲಾಗಿತ್ತು. ನಂತರ ಉತ್ಸವದ ಮೂರ್ತಿಗಳನ್ನು ರಥದಲ್ಲಿ ಕೂರಿಸಿ ಶ್ರೀ ವೀರಾಂಜನೇಯ ಸ್ವಾಮಿಗೆ ಜಯಘೋಷಿಸುವದರೊಂದಿಗೆ ರಥೋತ್ಸವ ನೆರವೇರಿತು.

ರಥವನ್ನು ಎಳೆಯುವಲ್ಲಿ ಪುಟಾಣಿ ಮಕ್ಕಳ ಕುತೂಹಲವನ್ನು ನೆರೆದಿದ್ದ ಭಕ್ತರಲ್ಲಿ ವಿಶೇಷ ಆಕರ್ಷಣೆ ಮೂಡಿಸಿತು.ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ತೂರಿ, ರಥದ ಗಾಲಿಗೆ ಇಡಿಗಾಯಿ ಹಾಗೂ ತೆಂಗಿನ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಭಕ್ತರಿಗೆ ಮಜ್ಜಿಗೆ ಪಾನಕ ಹೆಸರು ಕಾಳು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಬದಲ್ಲಿ ಶ್ರೀ.ಸಿ.ಕೆ.ವಿಜಯ ಕುಮಾರ್ ಭಟ್ಟ‌ (ಶ್ರೀನಾಥ), ಆಗಮಪ್ರವೀಣ ರಾಷೀಯರತ್ನ ಪ್ರಶಸ್ತಿ ಪುರಸ್ಕೃತರು, ಹಾಗೂ ರಾಮಂಜಿನೇಯ ಹಾಗೂ, ಭಕ್ತಾದಿಗಳು ಪಾಲ್ಗೊಂಡಿದ್ದರು.

 

Be the first to comment

Leave a Reply

Your email address will not be published.


*