ಚಿಂಚೋಳಿ :ರಾಜ್ಯದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ತಾಲೂಕಿನ ಅನೇಕ ಕಡೆಗಳಲ್ಲಿ ಅಕ್ರಮಿತರು ಅಧಿಕಾರಿಗಳ ಕಣ್ಣಿಗೆ ಧೂಳೆರಚಿ ಅಕ್ರಮ ಹಣ ಹಾಗೂ ಹೆಂಡ ಎಗ್ಗಿಲ್ಲದೇ ಸಾಗಿಸುತ್ತಿದ್ದಾರೆ ಇಂತಹವರ ಹೆಡೆ ಮುರಿ ಕಟ್ಟಲು ಪೊಲೀಸ ಹಾಗೂ ಅಬಕಾರಿ ಇಲಾಖೆ ಹೊಂಚು ಹಾಕಿ ಕುಳಿತಿದೆ
ಖಚಿತ ಮಾಹಿತಿಯೊಂದಿಗೆ ಅಬಕಾರಿ ಇಲಾಖೆಯ ಸಿಪಿಐ ಜಟ್ಟೆಪ್ಪಾ ಬೇಲೂರ ಅವರ ನೇತೃತ್ವದಲ್ಲಿ ದಾಳಿ ಮಾಡಿದ ತಂಡ ಸುಲೇಪೇಟ ಗ್ರಾಮದಿಂದ ಕಲಬುರ್ಗಿ ನಗರಕ್ಕೆ ಹೋಗುವ ಮಾರ್ಗ ಮಧ್ಯೆ ಚಿಂಚೋಳಿ ತಹಸಿಲ್ ಕಛೇರಿಯ ಮುಂದೆ ಹಾಗೂ ನಗರದ ಹೊಸ ಊರು ರಸ್ತೆಯ ಹತ್ತಿರ ಕಾವಲು ನಡೆಸಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಕೊಂಡ್ಯೋಯುತ್ತಿದ್ದ ಸುಮಾರು 98.360 ಲೀಟರ್ ಮದ್ಯ ಹಾಗೂ 47.047 ಲೀಟರ್ ಬೀಯರ್ ವಶಪಡಿಸಿಕೊಂಡಿದ್ದಾರೆ
ಆರೋಪಿತರಿಂದ ಮೂರು ವಾಹನಗಳನ್ನು ಜಪ್ತಿ ಮಾಡಿಕೊಂಡ ಇಲಾಖೆ ಸುಮಾರು 277003 ರೂ.ಮೌಲ್ಯದ ಮುದ್ದೆ ಮಾಲು ವಶಪಡಿಸಿಕೊಂಡು ಮೂರು ಜನ ಆರೋಪಿಗಳನ್ನು ಬಂಧಿಸಿ ಕೃಷ್ಣನ ಜನ್ಮಸ್ಥಾನಕ್ಕೆ ತಳ್ಳಿದ್ದಾರೆ
ಆರೋಪಿತರು ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಚಾಪೆಯ ಕೆಳಗೆ ನುಗ್ಗಲು ಪ್ರಯತ್ನಿಸಿದರೆ ಅಬಕಾರಿ ಇಲಾಖೆಯವರು ರಂಗೋಲಿ ಕೆಳಗೆ ನುಗ್ಗಲು ಅಣಿಯಾಗಿದ್ದಾರೆ ಈ ಕಾರ್ಯಚರಣೆಯಲ್ಲಿ ಇಲಾಖೆಯ ಪಿಎಸ್ಐ ರಂಜೀತಾ ಸಿಬ್ಬಂದಿಗಳಾದ ಪುಂಡಲೀಕ ಶಿವರಾಜ ಸೇರಿದಂತೆ ಇತರರಿದ್ದರು.
Be the first to comment