ಲಿಂಗಸ್ಗೂರು ಏಪ್ರಿಲ್ 03 : ನಗರದ ದೊಡ್ಡ ಹನುಮಂತನ ದೇವಸ್ಥಾನದಿಂದ ಆರಂಭವಾಗಿ ಹೊಸ ಬಸ್ ನಿಲ್ದಾಣದ ವೃತ್ತದ ವರೆಗೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹೆಚ್. ಬಿ ಮುರಾರಿಗೆ ನೀಡುವಂತೆ ಅಭಿಮಾನಿ ಬಳಗ ಮತ್ತು ದಲಿತ ಪ್ರಗತಿಪರ ಸಂಘಟನೆಗಳು ಬೃಹತ್ ಕಾಲ್ನಡಿಗೆಯ ಜಾಥಾ ನಡೆಸುವ ಮೂಲಕ ಹೈ ಕಮಾಂಡ್ ಗೆ ಒತ್ತಡ ಹಾಕಲಾಯಿತು.
ವಿಧಾನಸಭಾ ಮೀಸಲು ಕ್ಷೇತ್ರದ ಸ್ಥಳೀಯ ಎಡ ಗೈ ಮಾದಿಗ ಸಮುದಾಯದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಹೆಚ್. ಬಿ ಮುರಾರಿ ರವರು ಸುಮಾರು 35 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸುತ್ತಾ ಗ್ರಾಮ ಪಂಚಾಯತ್ ಹಾಗು ತಾಲೂಕ ಪಂಚಾಯತ್ ಸದಸ್ಯರಾಗಿ, ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಲಿಂಗಸುಗೂರು ತಾಲೂಕ ಸರ್ಕಾರಿ ಆಸ್ಪತ್ರೆಗೆ ಸಿಟಿ ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಿ ಸಾರ್ವಜನಿಕ ಆರೋಗ್ಯ ತಪಾಸಣೆ ಉಚಿತವಾಗಿ ಪಡೆಯಲು ಶ್ರಮಿಸಿರುತ್ತಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕೆಪಿಸಿಸಿಯ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾಗಿ ನಿಷ್ಠಾವಂತ ಸತತ 10 ವರ್ಷಗಳಿಂದ ಹೋರಾಟ ಮಾಡಿ ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಅನೇಕ ಪ್ರಗತಿಪರ ಮತ್ತು ರೈತ ಮುಖಂಡರ ನೇತೃತ್ವವನ್ನು ವಹಿಸಿ ಜಾರಿಗೆ ತರಲು ಪ್ರಮುಖ ರೂವಾರಿಯಾಗಿರುತ್ತಾರೆ. ಜನರ ಮೆಚ್ಚುಗೆ ಪಡೆದ ಸರಳ ಸಜ್ಜನಿಕೆ ಜನ ಸ್ಪಂದನೆಯ ನಾಯಕರಾಗಿದ್ದಾರೆ.
ವಿಶೇಷವಾಗಿ ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದಾದ್ಯಂತ ಭಾರತ್ ಜೋಡೋ ಪಾದ ಯಾತ್ರೆಯ ಮೂಲಕ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಪಾದ ಯಾತ್ರೆಯ ಮುಖಾಂತರ ಹೋಗಿ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ತಾಲೂಕಿನ ಜನರ ಮನೆಯ ಮಾತಾಗಿದ್ದಾರೆ. ಆದ್ದರಿಂದ ತಾಲೂಕಿನ ಜನಸಾಮಾನ್ಯರ ನಿಲುವು ಸ್ಥಳೀಯರಾದ ಶ್ರೀ ಹೆಚ್. ಬಿ ಮುರಾರಿ ಯವರಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲು ಲಿಂಗಸ್ಗೂರು ಕ್ಷೇತ್ರದ ಮತದಾರರು ಆಶೀರ್ವಾದ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.
ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದಲ್ಲಿ ಬಹು ಸಂಖ್ಯಾತರಾದ ಎಡ ಗೈ ಸಮುದಾಯದ ಮಾದಿಗರು ಸುಮಾರು 45,000 ಕ್ಕೂ ಹೆಚ್ಚು ಮತದಾರರನ್ನು ಹೊಂದಿದ ಕ್ಷೇತ್ರವಾಗಿದ್ದರಿಂದ ಈ ಬಾರಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕರಾದ ಹೆಚ್. ಬಿ ಮುರಾರಿ ಯವರಿಗೆ ಕಾಂಗ್ರೇಸ್ ಟಿಕೆಟ್ ನೀಡಬೇಕೆಂದು ಕರ್ನಾಟಕ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ವಿವಿಧ ಬೀದಿಗಳಲ್ಲಿ ಬೃಹತ್ ಕಾಲ್ನಡಿಗೆಯ ಜಾಥಾದ ಮೂಲಕ ಕಾಂಗ್ರೇಸ್ ಟಿಕೆಟ್ ನೀಡುವಂತೆ ಹೈ ಕಮಾಂಡ್ ಗೆ ಒತ್ತಡ ಹಾಕಲಾಯಿತು.
ಇದೇ ಸಂದರ್ಭದಲ್ಲಿ ದಲಿತ ಸಂಘಟನೆಗಳ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಭೀಮಣ್ಣ ನಗನೂರು, ಜೆ.ಬಾಬು ಹಟ್ಟಿ ತಾ. ಪಂ ಮಾಜಿ ಉಪಾಧ್ಯಕ್ಷರು, ರಾಮನಗೌಡ, ನಾಗರಾಜ್ ಅಸ್ಕಿಹಾಳ ಮಾಜಿ ಪುರ ಸಭೆ ಉಪಾಧ್ಯಕ್ಷರು, ಯಂಕಪ್ಪ ಚಿತ್ತಾಪುರ, ಮೊಕ್ಷ್ಯಮ್ಮ ನವಜೀವನ ಮಹಿಳಾ ತಾಲೂಕ ಸಂಘಟನೆ ಅಧ್ಯಕ್ಷರು,ಯಲ್ಲಮ್ಮ, ಹುಲಿಗೆಮ್ಮ,ಮಹಾದೇವಪ್ಪ,ನಾಗಪ್ಪ,ವಿಜಯ್ ಕುಮಾರ್,ಶರಣಪ್ಪ ಕಟ್ಟಿಮನಿ,ಬಸವರಾಜ್ ಯಲಗಟ್ಟಾ,ಹುಲುಗಪ್ಪ ಕೆಸರಟ್ಟಿ,ಹನುಮಂತ ಜಾಲಿಹಾಳ,ಹನುಮಂತ ಶೀಲ ಹಳ್ಳಿ,ಲಕ್ಕಪ್ಪ ನಾಗರಾಳ, ಹುಲುಗಪ್ಪ ಜೂಲಗುಡ್ಡ,ಮೋಹನ್ ಗೋಸ್ಲೆ, ಸೇರಿದಂತೆ ಹೆಚ್. ಬಿ ಮುರಾರಿ ರವರ ಅಭಿಮಾನಿಗಳು ಇನ್ನಿತರರು ಉಪಸ್ಥಿತರಿದ್ದರು.
Be the first to comment