ಸ್ಥಳೀಯರಿಗೆ ಟಿಕೆಟ್‌ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ : ರವೀಂದ್ರ ಬಾಡಗಿ.*

:ಬನಹಟ್ಟಿ. ತೇರದಾಳ ಮತಕ್ಷೇತ್ರದಿಂದ ಸ್ಥಳೀಯರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ರವೀಂದ್ರ ಬಾಡಗಿ.ಹೇಳಿದರು.

 

ಅವರು ಜಮಖಂಡಿ- ಕುಡಚಿ ಮುಖ್ಯರಸ್ತೆಯ ಬನಹಟ್ಟಿಯ ಎಂ ಎಂ ಬಂಗಲೆ ಹತ್ತಿರ ಡಾ.ಪದ್ಮಜೀತ ನಾಡಗೌಡ ಪಾಟೀಲ ಅಭಿಮಾನಿ ಬಳಗವು ಮುಖ್ಯರಸ್ತೆಯಲ್ಲಿ ಬಸ್ ಸಂಚಾರ ತಡೆದು ಟಾಯರಗಳಿಗೆ ಬೆಂಕಿ ಹಚ್ಚಿ ಉಮಾಶ್ರೀ ಹಟಾವೋ ಕಾಂಗ್ರೆಸ್ ಬಚಾವೋ ಎಂಬ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ 2014 ರಲ್ಲಿ ಕಾಂಗ್ರೆಸ್ ಪಕ್ಷದಿಂದ 2544 ಮತಗಳಿಂದ ಗೆದ್ದುಕೊಂಡ ಶಾಸಕರಾಗಿ ಆಯ್ಕೆಯಾದ ನಂತರ ಮತಕ್ಷೇತ್ರದತ್ತ ಮುಖ ಮಾಡದೆ ಇಲ್ಲಿರುವ ಕಾರ್ಯಕರ್ತರನ್ನು ಬೆಕ್ಕಾಬಿಟ್ಟಿಯಾಗಿ ವರ್ತಿಸಿ.ಇಲ್ಲಿ ನಡೆಯುವ ಪ್ರತಿಯೊಂದು ಕಾಮಗಾರಿಯನ್ನು ಸ್ಥಳೀಯರಿಗೆ ನೀಡಿದೆ. ಬೇರೆ ನೀಡಿ. ಕೊಟ್ಟು ತುಂಬಾ ಮೊಸಮಾಡಿದ್ದಾರೆ. ಈ ಬಾರಿ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾರ್ಡ ಸ್ಥಳೀಯರಿಗೆ ಟಿಕೆಟ್ ನೀಡಲೇಬೇಕು ಏನಾದರೂ ಉಮಾಶ್ರೀ ಯವರಿಗೆ ಟಿಕೆಟ್ ನೀಡಿದರೆ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿದರು. ಈ ಪ್ರತಿಭಟನೆಯಲ್ಲಿ ಕುಬೇರ ಸಾರವಾಡ.ರಾಜು ನಧಾಪ.ಮಹೇಶ ಬಬಲಾದಿ.ಕರಬಸು ಆರಗಿ.ಚಿದಾನಂದ ಮಟ್ಟಿಕಲ್ಲಿ.ಪಪ್ಪು ಜಿಗಜಿನ್ನಿ.ಕುಮಾರ ಬಿಳ್ಳೂರ. ಕಲ್ಲಪ್ಪ ಕರಲಟ್ಟಿ.ಬಸು ಕೊಪ್ಪದ.ಮಲ್ಲಪ್ಪ ಕಾಂಬಳೆ. ಗಿರಮಲ್ಲ ಹಿತ್ತಲಮನಿ.ರಫೀಕ ಪೆಂಡಾರಿ.ಓಂಪ್ರಕಾಶ್ ಮನಗೊಳಿ. ಇನ್ನೂ ಅನೇಕ ಜನ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು

 

Be the first to comment

Leave a Reply

Your email address will not be published.


*