ಸಹೋದರನ ಸವಾಲ್ : ಮುದ್ದೇಬಿಹಾಳ ಬಿಜೆಪಿ ಪಕ್ಷದಲ್ಲಿ ಭಿನ್ನಮತ…? ಮಾಜಿ ಶಾಸಕ ನಡಹಳ್ಳಿಗೆ ಸಹೋದರನ್ನಿಂದಲೇ ಸವಾಲ್….!!!

ವರದಿ: ಚೇತನ ಕೆಂದೂಳಿ, ಸಂಪಾದಕರು


ರಾಜ್ಯ ಸುದ್ದಿಗಳು 

ಮುದ್ದೇಬಿಹಾಳ:

ರಾಜ್ಯದ 224 ಮತಕ್ಷೇತ್ರದಲ್ಲಿ ಅತೀ ಕುತೂಹಲ ಮೂಡಿಸಿರುವ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ರಣತಂತ್ರಕ್ಕೆರಿದಂತಾಗಿದೆ.

ಹೌದು, ಈ ಹಿಂದೆ ದೇವರ ಹಿಪ್ಪರಗಿ ಮತಕ್ಷೇತ್ರದದಿಂದ ಕಾಂಗ್ರೆಸ್ ಪಕ್ಷದಿಂದ ಸತತ 2 ಭಾರಿ ಶಾಸಕರಾಗಿ ಆಯ್ಕೆಯಾಗಿ ನಂತರ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಜೆಡಿಎಸ್ವ ಪಕ್ಷದಿಂದ ಪ್ರಚಾರ ನೆಡೆಸಿ ರಾತ್ರೋರಾತ್ರಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಕಾಂಗ್ರಸ್ಲ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಅವರಿಗೆ ಸಹೋದರ ಸವಾಲ್ ಎದುರಾಗಿದೆ.

ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಅವರು ಬಿಜೆಪಿಯಿಂದ ಚುನಾಯಿತರಾಗಿ ಆಯ್ಕೆಯಾದ ನಂತರ ಕೆಲ ಸ್ಥಳೀಯ ಬಿಜೆಪಿ ಮುಖಂಡರನ್ನು ಹಾಗೂ ಮೂಲ ಕಾರ್ಯಕರ್ತರನ್ನು ಕಡೆಗೇಣಿಸಿದ್ದಾರೆ ಎಂಬ ದೊಡ್ಡ ಆರೋಪ ಪಕ್ಷದಲ್ಲಿ ನೆಡೆದಿದೆ. ಅಲ್ಲದೇ ಮುದ್ದೇಬಿಹಾಳ ತಾಲೂಕಿನ ಬಿಜೆಪಿಯ ಮೂಲ ಕಾರ್ಯಕರ್ತರೂ ಪತ್ರಿಕಾಗೋಷ್ಠಿ ನೆಡೆಸಿ ಶಾಸಕರಾಗಿದ್ದ ಎ. ಎಸ್. ಪಾಟೀಲ್ ನಡಹಳ್ಳಿ  ಅವರಿಗೆ ಬಿಜೆಪಿ ಟಿಕೆಟ್ ನಿಡಬಾರದು ಅಲ್ಲದೇ ಮುದ್ದೇಬಿಹಾಳದ ಯಾವುದೇ ಬಿಜೆಪಿಯ ಮೂಲ ಕಾರ್ಯಕರ್ತರಿಗೆ ನೀಡಿದರೆ ಮಾತ್ರ ಎಲ್ಲ ಬಿಜೆಪಿ ಕಾರ್ಯಕರ್ತರೂ ಒಗ್ಗೂಡಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಪ್ರಪ್ರಥಮ ಬಾರಿಗೆ ಅರಳಿರುವ ಬಿಜೆಪಿ ಪಕ್ಷಕ್ಕೆ ಈ ಭಾರಿ ಸೋಲಿನ ಭೀತಿ ಎದುರಾಗುವಂತಿದೆ.

Be the first to comment

Leave a Reply

Your email address will not be published.


*