ಹುಣಸಗಿ: ರಾಷ್ಟೋತ್ಥಾನ ಪರಿಷತ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ನಡೆಯುವ ವಸತಿ ಸಹಿತ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಧನಾ ಹಾಗೂ ತಪಸ್ ವಿಭಾಗಕ್ಕೆ ಆಯ್ಕೆಯಾಗಿದ್ದು ಅತ್ಯಂತ ಸಂತೋಷದಾಯಕವಾಗಿದೆ ಎಂದು ಪ್ರಾಚಾರ್ಯ ಅಶೋಕ ನೀಲಗಾರ ಹೇಳಿದರು.
ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಜ್ಯೋತಿ ಎಸ್ ಕುಂಬಾರ ಮತ್ತು ಕುಮಾರಿ ಕವಿತಾ ಸಿ ಮುದ್ದೇಬಿಹಾಳ ಹಾಗೂ ಕುಮಾರ ಅರುಣ ಚವ್ಹಾಣ ಇವರು ರಾಷ್ಟೊತ್ಥಾನ ಪರಿಷತ್ ಬೆಂಗಳೂರುವತಿಯಿಂದ ಅಂತಿಮ ಹಂತದ ಶಿಬಿರಕ್ಕೆ ಆಯ್ಕೆಯಾಗಿರುತ್ತಾರೆ.
ಸಾಧನಾ ವಿಭಾಗದಲ್ಲಿ (ಬಾಲಕಿಯರಿಗಾಗಿ): ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ರಾಷ್ಟೊತ್ಥಾನ ಪರಿಷತ್ ಬೆಂಗಳೂರಿನ ಪ್ರತಿ಼ಷ್ಠಿತ ಕಾಲೇಜೊಂದರಲ್ಲಿ ಎರಡು ವರ್ಷದ ವಸತಿ ಸಹಿತ ಉಚಿತ ಪಿ.ಯು ಮತ್ತು ಬಿ.ಎಸ್ಸಿ ಬಿ.ಈಡಿ ಶಿಕ್ಷಣ (ಒಟ್ಟು ಆರು ವರ್ಷಗಳ ಶಿಕ್ಷಣ) ಹಾಗೂ ನೀಟ್, ಸಿ.ಇ.ಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಸತಿ ಸಹಿತ ಉಚಿತ ತರಬೇತಿ ನೀಡಲಾಗುತ್ತದೆ
ತಪಸ್ (ಬಾಲಕರಿಗಾಗಿ): ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ರಾಷ್ಟೋತ್ಥಾನ ಪರಿಷತ್ ಬೆಂಗಳೂರಿನ ಪ್ರತಿ಼ಷ್ಠಿತ ಕಾಲೇಜೊಂದರಲ್ಲಿ ಎರಡು ವರ್ಷದ ವಸತಿ ಸಹಿತ ಉಚಿತ ಪಿ.ಯು ಶಿಕ್ಷಣ ಹಾಗೂ ಐಐಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ನೀಡಲಾಗುತ್ತದೆ.
ಇದಲ್ಲದೇ ವಿದ್ಯಾರ್ಥಿಗಳ ಸಾಧನೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿಯರಾದ ಕುಮಾರಿ ಸರೋಜಾ ಜಿ.ಟಿ ಹಾಗೂ ಜಿಲ್ಲಾ ಸಮನ್ವಯಾಧಿಕಾರಿ ಶ್ರೀಮತಿ ಸೂರಯ್ಯಾಬೇಗಂ ಹಾದಿಮನಿ ಮತ್ತು ವಸತಿ ಶಾಲೆಯ ಪ್ರಾಂಶುಪಾಲರಾದ ಅಶೋಕ ನೀಲಗಾರ, ನಿಲಯಪಾಲಕ ರಘುವೀರ ಬಡಿಗೇರ ಹಾಗೂ ಸಮಸ್ತ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಸತಿ ಶಾಲೆಯ ಶಿಕ್ಷಕರಾದ ಸಂಗನಗೌಡ ಧನರಡ್ಡಿ, ಶ್ರೀರಾಮ, ಸೇರಿದಂತೆ ಇತರರು ಇದ್ದರು.
Be the first to comment