ತಾಲೂಕಿನ ಪೋಲಕಪಳ್ಳಿ ಗ್ರಾಮದ ಹತ್ತಿರವಿರುವ ಆದರ್ಶ ಶಾಲೆಯ ಆರನೇ ತರಗತಿಯ 120 ಸ್ಥಾನಗಳಿಗೆ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು
ನಗರದ ಕರ್ನಾಟಕ ಪಬ್ಲಿಕ್ ಶಾಲೆ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆ ಹಾಗೂ ಸರಕಾರಿ ಕನ್ಯಾ ಪ್ರೌಢ ಶಾಲೆಯು ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳಾಗಿದ್ದವು
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಒಟ್ಟು 179 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದರು ಆದರೆ ಈ ಕೇಂದ್ರದಲ್ಲಿ 26 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆಯ ಕೇಂದ್ರದಲ್ಲಿ ಒಟ್ಟು 240 ವಿದ್ಯಾರ್ಥಿಗಳು ನೋಂದಾಯಿಸಿದರೆ 30 ವಿದ್ಯಾರ್ಥಿಗಳು ಗೈರಾಗಿದ್ದರು ಅದರಂತೆ ಸರಕಾರಿ ಕನ್ಯಾ ಪ್ರೌಢ ಶಾಲೆಯ ಕೇಂದ್ರದಲ್ಲಿ 240 ವಿದ್ಯಾರ್ಥಿಗಳಲ್ಲಿ 29 ಗೈರಾಗಿದ್ದರೆಂದು ತಿಳಿದು ಬಂದಿದೆ
ಮುಖ್ಯೋಪಾಧ್ಯಾಯ ಮಾರುತಿ ಪತಂಗೆ ನಂದುಕುಮಾರ ನಾಯಿನೂರ್ ಹಾಗೂ ಸುರೇಶ ವಾಲಿಕರ್ ಈ ಮೂರು ಕೇಂದ್ರಗಳ ಮುಖ್ಯ ಅಧೀಕ್ಷರಾಗಿದ್ದರು ಕೃಷ್ಣ ಶೆಟ್ಟಿ ಜಿ.ವಿ.ಹಿರೇಮಠ ದೇವಿದಾಸ ರಾಠೋಡ ಕೇಂದ್ರಗಳ ಸ್ಥಾನಿಕ ಜಾಗೃತ ದಳ ಅಧಿಕಾರಿಗಳಾಗಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ಅಮರಪ್ಪಾ ಶಿವಬಲ್ಲ ನೇತೃತ್ವದಲ್ಲಿ ಪಿಎಸ್ಐ ಮಹೇಬೂಬ ಅಲಿ ಹಾಗೂ ಪೊಲೀಸರ ತಂಡ ಸೂಕ್ತ ಬಂದುಬಸ್ತ ವಹಿಸಿದರು.
Be the first to comment