ಚಿಂಚೋಳಿ ಮತಕ್ಷೇತ್ರದ ಚೇಂಗಟಾ ಗ್ರಾಮ ಪಂಚಾಯತ ಅಧ್ಯಕ್ಷ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ ಕಾಮಗಾರಿ ಮಾಡದೇ ಲಕ್ಷಾಂತರ ರೂ.ಗಳನ್ನು ನುಂಗಿದ್ದಾರೆಂದು ಚೇಂಗಟಾ ಪಂಚಾಯತ ಮಾಜಿ ಅಧ್ಯಕ್ಷ ಬಾಬು ಪವಾರ ಆರೋಪಿಸಿದ್ದಾರೆ
ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆಯಡಿಯಲ್ಲಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರರು ನಕಲಿ ಬಿಲ್ ಗಳನ್ನು ಶೃಷ್ಟಿ ಮಾಡಿ ಸಾರ್ವಜನಿಕರ ಲಕ್ಷಾಂತರ ರೂ.ಗಳನ್ನು ಕೊಳ್ಳೆ ಹೊಡೆದ್ದಿದ್ದಾರೆಂದು ಅವರು ಗಂಭೀರವಾಗಿ ಆರೋಪಿಸಿದರು
ಈಗಾಗಲೇ ಇವರ ವಿರುದ್ಧ ಕ್ರಮಕ್ಕಾಗಿ ಕಲಬುರ್ಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಮನವಿ ಸಲ್ಲಿಸಿ ಇವರ ನಕಲಿ ಬಿಲ್ ಗಳ ವಿವಿರ ಸಲ್ಲಿಸಲಾಗಿದೆ ಕೊಳ್ಳೆ ಹೊಡೆದವರ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿದ್ದೇನೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಚೇಂಗಟಾ ಪಂಚಾಯತ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಪವಾರ ಎಚ್ಚರಿಸಿದರು.
Be the first to comment