ನರೇಗಾ ಬಜೆಟ್‌ನಲ್ಲಿ ತೀವ್ರ ಕಡಿತಕ್ಕೆ ಸಂಸದೀಯ ಸಮಿತಿಯ ಆಕ್ರೋಶ:ಅಮರೇಶಣ್ಣ ಕಾಮನಕೇರಿ

ಕೇಂದ್ರ ಮುಂಗಡಪತ್ರದಲ್ಲಿ ನರೇಗಾ ಯೋಜನೆಗೆ ಹಣ ಹಂಚಿಕೆಯನ್ನು ತೀವ್ರವಾಗಿ ಕಡಿತಗೊಳಿಸಿರುವುದನ್ನು ಗ್ರಾಮೀಣಾಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿಯು ದೇಶದ ಜನತೆಯು ಸಂಕಷ್ಟದಲ್ಲಿರುವಾಗ ಯೋಜನೆಯ ಪ್ರಮುಖ ಪಾತ್ರವನ್ನು ಪರಿಗಣಿಸಿ,ಹಣ ಕಡಿತದ ಹಿಂದಿನ ತಾರ್ಕಿಕತೆಯೇನು ಎಂದು ಸರಕಾರವನ್ನು ಪ್ರಶ್ನಿಸಿದೆ.

2022-23ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ 2023-24ನೇ ವಿತ್ತವರ್ಷಕ್ಕೆ ನರೇಗಾ ಯೋಜನೆಗಾಗಿ ಬಜೆಟ್ ಅಂದಾಜನ್ನು 29,400 ಕೋ.ರೂ.ಗಳಷ್ಟು ತಗ್ಗಿಸಲಾಗಿದೆ.

ತಮ್ಮು ಮತ್ತು ತಮ್ಮ ಕುಟುಂಬ ಸದಸ್ಯರ ಹೊಟ್ಟೆಯನ್ನು ಹೊರೆಯಲು ಬೇರೆ ಯಾವುದೇ ಮಾರ್ಗವಿಲ್ಲದ ನಿರುದ್ಯೋಗಿ ಜನರಿಗೆ ಈಗಲೂ ನರೇಗಾ ಕೊನೆಯ ಆಧಾರವಾಗಿದೆ.

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸರಕಾರವು 2020-21ನೇ ಸಾಲಿಗೆ ಆರಂಭದಲ್ಲಿ ಹಂಚಿಕೆ ಮಾಡಲಾಗಿದ್ದ 61,500 ಕೋ.ರೂ.ಗಳಿಂದ 1,11,500 ಕೋ.ರೂ.ಗಳಿಗೆ ಪರಿಷ್ಕೃತಗೊಳಿಸುವಂತಾಗಿತ್ತು. ಇದೇ ರೀತಿ 2021-22ರಲ್ಲಿ ನರೇಗಾ ಹಂಚಿಕೆಯನ್ನು 73,000 ಕೋ.ರೂ.ಗಳಿಂದ 99,117.53 ಕೋ.ರೂ. ಗಳಿಗೆ ಹೆಚ್ಚಿಸಲಾಗಿತ್ತು, ಇದು ನರೇಗಾ ಯೋಜನೆಯ ಹಾಲಿ ಹಣಕಾಸು ವರ್ಷದಲ್ಲಿಯೂ ಯೋಜನೆಗೆ ಆರಂಭದಲ್ಲಿ 73,000 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿತ್ತಾದರೂ ನಂತರ ಅದನ್ನು 89,400 ಕೋ.ರೂ. ಗಳಿಗೆ ಹೆಚ್ಚಿಸಲಾಗಿತ್ತು.

ನರೇಗಾ ಯೋಜನೆಯಡಿ ಹಣದ ಕಡಿಮೆ ಹಂಚಿಕೆಯ ತಾರ್ಕಿಕತೆಯನ್ನು ಅರ್ಥ ಮಾಡಿಕೊಳ್ಳಲು ಸಮಿತಿಗೆ ಸಾಧ್ಯವಾಗಿಲ್ಲ ಅಲ್ಲದೆ ರಾಜ್ಯ ಸರಕಾರಗಳಿಗೆ ವೇತನ ಪಾವತಿ ಮತ್ತು ಸಾಮಗ್ರಿ ನಿಧಿ ಬಿಡುಗಡೆಯಲ್ಲಿ ವಿಳಂಬದ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ.

Be the first to comment

Leave a Reply

Your email address will not be published.


*