ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯಕ್ಕೆ ಮನವಿ ಮಾರ್ಚ್‌ 24 ರಂದು ರಾಜ್ಯ ಮಟ್ಟದ ಸಮಾವೇಶ

ಬೆಂಗಳೂರು :ಮಾರ್ಚ್‌ 20ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರಿಂದ ಸಮಾವೇಶಕ್ಕೆ ಚಾಲನೆ*

*- ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರು ಹಾಗೂ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರಾದ ಡಾ||ಬಿ.ಎಂ ಉಮೇಶ್‌ ಕುಮಾರ್‌ ನೇತೃತ್ವ*

*- ಪದ್ಮಶ್ರೀ ಡಾ. ಚಂದ್ರಶೇಖರ ಕಂಬಾರ್‌ ಅವರಿಂದ ಪಂಚಶಿಲ್ಪಿಗಳಿಗೆ ಪ್ರಶಸ್ತಿ ಪ್ರಧಾನ.

ಕರ್ಮ ಸಿದ್ದಾಂತವನ್ನ ಪಾಲಿಸುತ್ತಾ ಬಂದಿರುವ ಶ್ರಮಿಕ ಜನಾಂಗವಾದ ವಿಶ್ವಕರ್ಮ ಸಮಾಜ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯವಿಲ್ಲದೆ ಸೊರಗುತ್ತಿದ್ದು ಸಮಾಜಕ್ಕೆ ನ್ಯಾಯ ಕಲ್ಪಿಸುವ

ಒಕ್ಕೊರಲಿನ ಪ್ರಾತಿನಿಧ್ಯಕ್ಕೆ ಮಾರ್ಚ್‌ 24 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ವಿಶ್ವಕರ್ಮ ಸಮಾಜದ ಜನಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು *ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷರು ಹಾಗೂ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರಾದ ಡಾ||ಬಿ.ಎಂ ಉಮೇಶ್‌ ಕುಮಾರ್‌ ಹೇಳಿದರು*.

 

ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ದಿಯಲ್ಲಿ ವಿಶ್ವಕರ್ಮ ಸಮುದಾಯದ ಗಮನಾರ್ಹ ಕೊಡುಗೆಯನ್ನು ನೀಡಿದೆ. ರಾಜ್ಯದ ಉದ್ದಗಲಕ್ಕೂ ನೆಲೆಸಿರುವ ಸಮಸ್ತ ವಿಶ್ವ ಕರ್ಮ ಜನಾಂಗ ಒಟ್ಟಾರೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಸಮುದಾಯಕ್ಕೆ ಸಿಗಬೇಕಾದಂತಹ ಹಲವಾರು ಸೌಲಭ್ಯಗಳು ದೊರೆತಿಲ್ಲ ಇದಕ್ಕೆ ರಾಜಕೀಯ ಹಾಗೂ ಸಾಮಾಜಿಕ ಇಚ್ಚಾಶಕ್ತಿಯ ಕೊರತೆ ಹೆಚ್ಚಾಗಿದೆ. ನಮ್ಮ ಸಮುದಾಯಕ್ಕೆ ಸಿಗಬೇಕಾದಂತಹ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಮಾಜವನ್ನ ಮತ್ತೊಮ್ಮೆ ಪುನರುತ್ಥಾನಗೊಳಿಸುವ ಅವಶ್ಯಕತೆ ಇದೆ. ಇದು ಕೇವಲ ಮಾತಿನಿಂದ ಸಾಧ್ಯವಿಲ್ಲ. ಮಾತು ಕೃತಿಯಾಗಲು ನಾವೆಲ್ಲರೂ ಒಗ್ಗಟ್ಟಾಗಬೇಕಾಗಿದೆ. ಎಲ್ಲರೂ ಒಂದೇ ಧ್ವನಿಯಿಂದ ನಮ್ಮ ಒತ್ತಾಯವನ್ನು ಮಂಡಿಸಬೇಕಿದೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌.ಡಿ ಕುಮಾರಸ್ವಾಮಿ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ

ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧಿಪತಿಗಳು ಶ್ರೀ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನ ವಹಿಸಲಿದ್ದಾರೆ.

 

 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಪದ್ಮಶ್ರೀ ಡಾ ಚಂದ್ರಶೇಖರ ಕಂಬಾರ ರವರು ಪಂಚಶಿಲ್ಪಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದು

 

ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಎಸ್‌. ಪ್ರಭಾಕರ್‌ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ ಜನತಾ ಸೇವಕ ಪುಸ್ತಕ ಬಿಡುಗಡೆಗೊಳಿಸಲಿದ್ದು, ಮಾಜಿ ಸಚಿವರಾದ ಹೆಚ್‌.ಡಿ ರೇವಣ್ಣ ಅವರು, ಧರ್ಮಜಾಗೃತಿ ಗ್ರಂಥವನ್ನು ಬಿಡುಗಡೆಗೊಳಿಸಲಿದ್ದಾರೆ. ಶ್ರೀ ವಿರಾಟ್‌ ವಿಶ್ವಕರ್ಮ ಪಲ್ಲಕ್ಕಿ ಉತ್ಸವಕ್ಕೆ ಮಾನ್ಯ ವಿಧಾನಪರಿಷತ್‌ ಸದಸ್ಯರಾದ ಡಾ. ಟಿ.ಎ ಶರವಣ ಅವರು ಚಾಲನೆ ನೀಡಲಿದ್ದಾರೆ. ಶ್ರೀ ವಿರಾಟ್‌ ವಿಶ್ವಕರ್ಮ ಮಹೋತ್ಸವದ ಸಂಚಿಕೆಯನ್ನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಅರಮನೆ ಶಂಕರ್‌ ಬಿಡುಗಡೆಗೊಳಿಸಲಿದ್ದಾರೆ.

ವಿಧಾನಪರಿಷತ್‌ ಸದಸ್ಯರಾದ ಕೆ.ಎ ತಿಪ್ಪೇಸ್ವಾಮಿ ಶ್ರೀ ವಿರಾಟ್ ವಿಶ್ವಕರ್ಮ ಧ್ವನಿ ಸಾಂದ್ರತೆ ಬಿಡುಗಡೆಗೊಳಿಸಲಿದ್ದಾರೆ

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಎ.ಮಂಜುನಾಥ್, ಶ್ರೀ ಮಂಜುನಾಥ, ಮಾಜಿ ಶಾಸಕರಾದ ಶ್ರೀ ಸುಧಾಕರ್ ಲಾಲ್ , ಜೆಡಿಎಸ್ ಮುಖಂಡ ಶ್ರೀ ಶ್ರೀ ಬಾಗೇಗೌಡರು, ಪಕ್ಷದ ಅಭ್ಯರ್ಥಿ ಶ್ರೀ ವಿ.ನಾರಾಯಣಸ್ವಾಮಿ , ಶ್ರೀ ಸುಧಾಕರ್ ಎಸ್ ಶೆಟ್ಟಿ ಜೆಡಿಎಸ್‌ ಪಕ್ಷದ ಬೆಂಗಳೂರು ಅಧ್ಯಕ್ಷರಾದ ಆರ್‌ ಪ್ರಕಾಶ್‌ ಹಾಗೂ ಅನೇಕ ಮುಖಂಡರು ಹಾಗೂ ನಾಯಕರು ಭಾಗವಹಿಸಲಿದ್ದಾರೆ.

ರಾಜ್ಯದ ಎಲ್ಲಾ ಭಾಗಗಳಿಂದ ವಿಶ್ವಕರ್ಮ ಸಮುದಾಯದ ಮುಖಂಡರುಗಳು ಹಾಗೂ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 

Be the first to comment

Leave a Reply

Your email address will not be published.


*