ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ದಿವ್ಯಾಂಗರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗೆ ಆದ್ಯತೆ : ನಾರಾಯಣ್ ಸೇವಾ ಸಂಸ್ಥಾನ್ ಚಟುವಟಿಕೆ ಮಾದರಿ – ರಾಜ್ಯಪಾಲ ಥಾವರ್ ಚಂದ್

ಬೆಂಗಳೂರು, ಮಾ, 19; ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿವ್ಯಾಂಗರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗೆ ವಿಶೇಷ ಅದ್ಯತೆ ನೀಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಹೇಳಿದ್ದಾರೆ.

 

ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಬಿವಿಎಸ್ಎಸ್ ಮರಾಠ ಹಾಸ್ಟಲ್ ಬಳಿ ನಾರಾಯಣ್ ಸೇವಾ ಸಂಸ್ಥಾನ್ ನಿಂದ ಏರ್ಪಡಿಸಿದ್ದ ಕೃತಕ ಅಂಗಾಂಗ ಜೋಡಣಾ ಶಿಬಿರದಲ್ಲಿ ಮಾತನಾಡಿದ ಅವರು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ತಾವೂ ಕೂಡ ಈ ಸಚಿವಾಲಯದ ನೇತೃತ್ವ ವಹಿಸಿದ್ದಾಗ ಉತ್ತಮ ಕೆಲಸ ಮಾಡಿದ್ದನ್ನು ಸ್ಮರಿಸಿಕೊಂಡರು. ತಮ್ಮ ಅವಧಿಯಲ್ಲಿ ಹತ್ತು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿತ್ತು ಎಂದರು.

 

ದಿವ್ಯಾಂಗ ಸಮೂಹಕ್ಕೆ ನಾರಾಯಣ್ ಸೇವಾ ಸಂಸ್ಥಾನ್ ಉತ್ತಮವಾಗಿ ಸ್ಪಂದಿಸುತ್ತಿದೆ. “ಬದುಕು – ಬದುಕಲು ಬಿಡಿ” ತತ್ವದಡಿ ಇದು ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರೂ ಸುಖವಾಗಿರಬೇಕು. ನಿರೋಗಿಯಾಗಿರಬೇಕು ಎಂಬುದು ನಮ್ಮ ಸಂಸ್ಕೃತಿಯ ಉದಾತ್ತ ಚಿಂತನೆಯಾಗಿದೆ. ನಮಗೆ ಮಹಾಪುರಷರು ಪ್ರೇರಣೆ ನೀಡಿದ್ದಾರೆ. ದೇಶ ದಿವ್ಯಾಂಗ ಮುಕ್ತರಾಗಲು ನಾರಾಯಣ್ ಸೇವಾ ಸಂಸ್ಥಾನದ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

 

ನಾರಾಯಣ್ ಸೇವಾ ಸಂಸ್ಥಾನ್ ಅಧ್ಯಕ್ಷ ಪ್ರಶಾಂತ್ ಅಗರ್ ವಾಲ್ ನಾರಾಯಣ್ ಸೇವಾ ಸಂಸ್ಥಾನ್ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಯಶೋಗಾಥೆಗಳನ್ನು ಅನಾವರಣಗೊಳಿಸಿದರು. ಈ ಬಾರಿ ನಡೆದ ಒಲಿಂಪಿಕ್ ನಲ್ಲಿ 8 ಪದಕಗಳನ್ನು ಗಳಿಸಿದರೆ ದಿವ್ಯಾಂಗ ಸಮೂಹ ಪ್ಯಾರಾ ಒಲಿಂಪಿಕ್ ನಲ್ಲಿ 19 ಪದಕಗಳನ್ನು ಗೆದ್ದು ದಿಗ್ವಿಜಯ ಸಾಧಿಸಿದೆ ಎಂದು ಹೇಳಿದರು.

 

ನಾರಾಯಣ್ ಸೇವಾ ಸಂಸ್ಥಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಶೇಷ್ ಮುಜುಂದಾರ್, ಜನರಲ್ ಮೋಟಾರ್ಸ್ ನ ನಿರ್ದೇಶಕ ಅನಿತ್ ಭಾಯ್ ಪಟೇಲ್ ಹಾಗೂ ಡಾ. ದೈವಜ್ಞ ನರಸಿಂಹ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*