ಉಚಿತ ಧರ್ಮಸ್ಥಳ ಯಾತ್ರೆ ಹೆಸರಿನಲ್ಲಿ ರಾಜಕಾರಣಕ್ಕೆ ಜೋತು ಬಿದ್ದ ಆಕಾಕ್ಷಿಗಳು

*ಚೇಳೂರು* : ಕ್ಷೇತ್ರದ ಮತದಾರರನ್ನು ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯುವ ಮೂಲಕ ಭಾವನಾತ್ಮಕವಾಗಿ ಅವರ ಮನಸ್ಸನ್ನು ಗೆಲ್ಲುವ ಕಸರತ್ತಿಗೆ ಮುಂದಿನ ಚುನಾವಣಾ ಟಿಕೆಟ್‌ ಆಕಾಂಕ್ಷಿಗಳು ಇಳಿದಿದ್ದಾರೆ. ಧಾರ್ಮಿಕ ಯಾತ್ರೆ ಇದೀಗ ಚುನಾವಣಾ ಯಾತ್ರೆಯಾಗಿ ಪರಿವರ್ತನೆಗೊಂಡಿದ್ದು, ಬಿಜೆಪಿ ಪಕ್ಷದಲ್ಲಿ ತೀವ್ರ ಪೈಪೋಟಿ ಶುರುವಾಗಿದೆ.

 

ತಾಲೂಕಿನಲ್ಲಿ ಕೆಲವು ರಾಜಕಾರಣಿಗಳು ಮತದಾರರನ್ನು ಒಲಿಸಿಕೊಳ್ಳುವುದಕ್ಕೆ ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ, ವಿವಿಧ ರೀತಿಯ ಉಡುಗೊರೆಗಳನ್ನು ಹಂಚುವುದು ರಾಜಕೀಯ ಪಕ್ಷದ ಸಾಮಾನ್ಯ ಅಜೆಂಡಾ.ಆದರೆ, ಕಳೆದ ಮೂರು ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು

ಬಾಗೇಪಲ್ಲಿ / ಚೇಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಸಿ ಮುನಿರಾಜು.ಹಾಗೂ ರಾಮಲಿಂಗಪ್ಪ ಶ್ರಿ ಕ್ಷೇತ್ರ ಧರ್ಮಸ್ಥಳ ಯಾತ್ರೆಗೆ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಟ್ಟು ಉಚಿತವಾಗಿ ದೇವರ ದರ್ಶನ ಮಾಡಿಸುವುದರೊಂದಿಗೆ ಜನರ ಮನಸ್ಸನ್ನು ತಮ್ಮತ್ತ ಸೆಳೆಯಲು ಜಿದ್ದಾಜಿದ್ದಿನ ಪ್ರಯತ್ನ ನಡೆಸುತ್ತಿದ್ದಾರೆ.ಈ ಯಾತ್ರೆಗೆ ಕ್ಷೇತ್ರದ ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೆ, ಹೊಸ ಟ್ರೆಂಡ್‌ ಸೃಷ್ಟಿಮಾಡಿದೆ.

 

*ಓಂ ಶಕ್ತಿಯಿಂದ ಪ್ರಾರಂಭ.* ಉಚಿತ ಬಸ್ ವ್ಯವಸ್ಥೆ ಮಹಿಳೆಯರಿಗೆ ಓಂಶಕ್ತಿ ಹಾಗೂ ಗಂಡಸರಿಗೆ ಅಯ್ಯಪ್ಪ ಸ್ವಾಮಿ ದೇವಸ್ತಾನಕ್ಕೆ.ಕಲಿಸುವುದರಿಂದ ಶುರು ಮಾಡಿ ಈಗ ತೀರ್ಥಕ್ಷೇತ್ರಗಳ ದರ್ಶನ ಭಾಗ್ಯ ಕೂಡ ಕಲ್ಪಿಸಲಾಗುತ್ತಿದೆ.

ಈ ರೀತಿಯ ಕಾರ್ಯಕ್ರಮ ಕೆಲವು ರಾಜಕೀಯ ಪಕ್ಷದಿಂದ ಮಾತ್ರ ನಡೆಯುತ್ತಿರುವುದು ವಿಸ್ಮಯ. ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಪಕ್ಷದವರು ಮತದಾರರನ್ನು ಆಕರ್ಷಿಸಲು ಧರ್ಮಸ್ಥನಾ ದೇವಾಲಯ ಇತ್ಯಾದಿ ಸ್ಥಳಗಳಿಗೆ ಉಚಿತವಾಗಿ ಯಾತ್ರೆ ಕಳುಹಿಸುತ್ತಿದ್ದಾರೆ.

ಪುಣ್ಯಕ್ಷೇತ್ರಕ್ಕೆ ಹೋಗಿ ಬಂದವರು ಖಚಿತವಾಗಿಯೂ ನಮಗೇ ಓಟು ಹಾಕುತ್ತಾರೆಂದು ರಾಜಕಾರಣಿಗಳು ನಂಬಿಕೆ ಹೊಂದಿದ್ದಾರೆ.

ಗ್ರಾಮೀಣ ಪ್ರದೇಶದ ಜನತೆಯಲ್ಲಿ ನಿಯತ್ತು ಇರುತ್ತದೆ. ಅಲ್ಲಿನ ಜನರನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟರೆ ತೀರ್ಥಯಾತ್ರೆಗೆ ಏರ್ಪಾಟು ಮಾಡಿದವರಿಗೆ ಓಟು ಹಾಕುತ್ತಾರೆ ಎಂಬ ನಂಬಿಕೆಯಿಂದ ರಾಜಕಾರಣಿಗಳು ಪ್ರತಿನಿತ್ಯ ಒಂದೊಂದು ಗ್ರಾಮ ಪಂಚಾಯತಿ ಆಯ್ಕ ಮಾಡಿಕೊಂಡು ಹತ್ತು ರಿಂದ ಹದಿನೈದು ಬಸ್ಸುಗಳನ್ನು ಕಳುಹಿಸಿ ಪ್ರವಾಸ ಕಳಿಸುತ್ತಿದ್ದಾರೆ.ಕನಿಷ್ಟ ಒಂದು ಕುಟುಂಬದಲ್ಲಿ ಇಬ್ಬರು ಮೂವರು ಯಾತ್ರೆಗೆ ಹೋಗಿ ಬರಬೇಕೆಂದರೆ ಕನಿಷ್ಠ 10 ಸಾವಿರ ರು.ನಿಂದ 15 ಸಾವಿರ ರು. ಖರ್ಚಾಗುತ್ತದೆ. ಯಾವುದೇ ಖರ್ಚಿಲ್ಲದೆ, ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟು ಮನೆ ಬಾಗಿಲಿಗೆ ಬಂದು ಧಾರ್ಮಿಕ ಯಾತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ. ನಾ ಮುಂದು ತಾ ಮುಂದು ಎಂದು ಯಾತ್ರೆಗೆ ಜನರು ಮುಗಿ ಬೀಳುತ್ತಿದ್ದಾರೆ. ಇದರಿಂದ ಪ್ರವಾಸಿ ಬಸ್‌ಗಳಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ತೀರ್ಥಸ್ಥಳಗಳಿಗೆ ಹೋಗುವ ಜನರಿಗೆ ಉಚಿತ ವಾಹನ ವ್ಯವಸ್ಥೆಯ ಜತೆಗೆ ಊಟ-ತಿಂಡಿಯ ವ್ಯವಸ್ಥೆ, ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಗ್ರಾಮೀಣ ಪ್ರದೇಶ ಮಾತ್ರವಲ್ಲದೆ ನಗರ ಮತ್ತು ಪಟ್ಟಣ ಪ್ರದೇಶದ ಜನರು ಅದರಲ್ಲೂ ವಯಸ್ಸಾದವರು, ನಿರುದ್ಯೋಗಿಗಳು ಈ ಅವಕಾಶ ಪಡೆಯಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತಿದ್ದಾರೆ. ವಿಚಿತ್ರವೆಂದರೆ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಆಯೋಜಿಸುತ್ತಿರುವ ಪುಣ್ಯಕ್ಷೇತ್ರಗಳ ದರ್ಶನ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗಗಳಲ್ಲಿ ಗಲ್ಲಿ ಲೀಡರ್ ಎಂದು ಗುರುತಿಸಿಕೊಂಡವರು.ವಿವಿಧ ಪಕ್ಷಗಳಗಲ್ಲಿ ಗುರುತಿಸಿಕೊಂಡ ನಾಯಕರ ಮನೆಯವರು ಕೂಡ ಇವರ ಒಂದು ಉಚಿತ ಸೌಲಭ್ಯಗಳನ್ನು ಪಡೆಯಲು ಹೋಗುತ್ತಿದ್ದಾರೆ…….. ವಿವಿಧ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು ಸಹ ಪ್ರವಾಸಕ್ಕೆ ಹೊರಡುತ್ತಿದ್ದು ಇದು ಯಾರಿಗೆ ಅನುಕೂಲವಾಗುತ್ತದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

 

 

*ಹಣ ಮಾಡುವ ಉದ್ದೇಶದಲ್ಲಿ ಸಂಘಟನೆಯ ನಾಯಕರು* .ಕೆಲವರು ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಮಹಿಳಾ ಅಧ್ಯಕ್ಷರುಗಳ ಗಂಡಂದಿರು ಚುನಾವಣಾ ಅ್ಯರ್ಥಿಗಳಿಂದ ಹಣ ವಸೂಲಿ ಮಾಡುವುದಕ್ಕೆ ಚುನಾವಣೆ ಸಂದರ್ಭದಲ್ಲಿ ಸಿಕ್ಕಿದ್ದು ಸೀರುಂಡೆ ಎಂದು ಕೈಲಾದಷ್ಟು ಬಾಚಿಕೊಳ್ಳುವುದಕ್ಕಾಗಿ ಯಾವ ಪಕ್ಷದ ಮುಖಂಡ ರಾಜಕಾರಣಿ ಬಂದರೂ ನಮ್ಮ ಬೆಂಬಲ ನಿಮಗೆ ಎಂದು ಹೇಳಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ ಎನ್ನುವುದು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ ಒಬ್ಬೊಬ್ಬರು ಒಂದೊಂದು ಪಕ್ಷದ ಮಾಹಿತಿದಾರರಾಗಿ, ಆಪ್ತ ಸಲಹೆಗಾರರಾಗಿ ನೇಮಕಗೊಂಡಿದ್ದು ಇವರುಗಳು ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ನಿಷ್ಠೆಯನ್ನು ಎತ್ತ ತಿರುಗಿಸುತ್ತಾರೋ ಕಾದು ನೋಡಬೇಕಾಗಿದೆ.

. ಪ್ರವಾಸಿ ಹೋಗಿ ಬಂದವರೆಲ್ಲ ಮತಗಳಾಗಿ ಪರಿವರ್ತನೆ ಆಗುತ್ತರ, ಹಣ ಖರ್ಚು ಮಾಡಿದವರ ರಾಜಕೀಯ ಲೆಕ್ಕಾಚಾರ ಈಡೇರುವುದೇ ಎಂಬುದು ಚುನಾವಣೆ ಮುಗಿದು ಫಲಿತಾಂಶ ಬಂದ ನಂತರವಷ್ಟೆ ತಿಳಿಯಲು ಸಾಧ್ಯ.

 

 

*ಚುನಾವಣೆ ಸಮಯದಲ್ಲಿ ಹುಟ್ಟುವ ನಾಯಿಕೊಡೆಗಳಂತೆ* .ಈ ಕ್ಷೇತ್ರದಲ್ಲಿ ಐದು ವರ್ಷಕ್ಕೊಮ್ಮೆ ಹುಟ್ಟುವ ಕೆಲವು ಸಮಾಜ ಸೇವಕರು ಎಲ್ಲರೂ ಒಂದು ದಿನ ಆಯಸ್ಸು ಇರುವ ನಾಯಿಕೊಡೆ ಇದ್ದಹಾಗೆ ಇವರಿಗೂ ಚುನಾವಣೆ ಮುಗಿಯುವವರೆಗೂ ಆಯಸ್ಸು ಚುನಾವಣೆ ಮುಗಿದ ಬಳಿಕ ಯಾವೊಬ್ಬ ನಾಯಕನೂ ಕಾಣುವುದಿಲ್ಲ ಕ್ಷೇತ್ರದಲ್ಲಿ ಎಲ್ಲಿಲ್ಲದ ಸಮಾಜ ಸೇವಕರು ನಮ್ಮ ಕ್ಷೇತ್ರದಲ್ಲಿ ಇದ್ದರೂ ನಮ್ಮ ಕ್ಷೇತ್ರ ಅಬಿರುದ್ದಿ ಮಾತ್ರ ಕಾಣಲಿಲ್ಲ.ಇವರಿಗೆ ಸಮಾಜ ಸೇವೆ ಎನ್ನುವುದು ರಾಜಕೀಯ ಅಖಾಡಕ್ಕೆ ಇಳಿಯಲು ಇದೊಂದು ಪ್ರಚಾರ ಅಷ್ಟೇ ಚುನಾವಣೆಗೆ ನಿಲ್ಲದೆ ಸಮಾಜ ಸೇವೆ ಮಾಡುವುದಿಲ್ಲ ಅವನಿಗೆ ಅದರ ಅವಶ್ಯಕತೆ ಕೂಡ ಇಲ್ಲ. ಜನರಿಗೆ ಉಚಿತ ವ್ಯವಸ್ಥೆಗಳು ಕೊಟ್ಟು ಜನರನ್ನು ಸೋಂಬೇರಿಗಳಗಿ ಪ್ರಶ್ನೆ ಮಾಡದ ಮೂಖ ವ್ಯಕ್ತಿಯಾಗಿ ಹಲ್ಲು ಕಿತ್ತ ಹಾವಿನಂತೆ ಮಾಡುತ್ತಿದ್ದಾರೆ.. ಇವರಿಗೆ ಯೋಗ್ಯತೆ ಇದ್ದಲ್ಲಿ ಕೈಗಾರಿಕೋದ್ಯಮಿಗಳು ಕಾರ್ಖಾನೆಗಳು ಸ್ಥಾಪನೆ ಮಾಡಿ ಅವರನ್ನು ಸ್ವಂತ ಜೀವನ ನಡೆಸುವ ವ್ಯವಸ್ಥೆ ಮಾಡಲಿ ಎನ್ನುತ್ತಾರೆ.ಹೆಸರು ಹೇಳಲು ಇಚ್ಛಿಸದ ಪ್ರಜ್ಞಾವಂತ ಯುವಕ.

 

.. *ಆಕಾಕ್ಷಿಗಳು ಹೇಳುವ ಮಾತು* …ಚುನಾವಣಾ ಹಿನ್ನೆಲೆಯಲ್ಲಿ ಈ ಧಾರ್ಮಿಕ ಯಾತ್ರೆ ಮಾಡುತ್ತಿಲ್ಲ. ವಯಸ್ಸಾದವರು, ಅಶಕ್ತರು, ದುರ್ಬಲರು ಯಾತ್ರೆ ಕೈಗೊಳ್ಳಲಾಗದೆ ಪರಿತಪಿಸುತ್ತಿರುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ದೇವರ ದರ್ಶನ ಮಾಡಿಸಿಕೊಂಡು ಬರುವುದಕ್ಕೆ ಯೋಜಿಸಿದ್ದೆವು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಸಮಜಾಯಿಷಿ ಕೊಳ್ಳುತ್ತಾರೆ..

 

Be the first to comment

Leave a Reply

Your email address will not be published.


*