ಬಾಗೇಪಲ್ಲಿ ಚೇಳೂರು ತಾಲೂಕಿನ ಗಡಿಭಾಗದ ಕ್ಷೇತ್ರದಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ರವರ ಅಧಿಕಾರ ಅವದಿ ಮುಗಿಯುತ್ತಿದ್ದಂತೆ ಹಾಗೂ ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಚುನಾವಣೆ ಸಮಯದಲ್ಲಿ ಮತದಾರರನ್ನು ಸೆಳೆಯಲು ಇದೊಂದು ತಂತ್ರಗಾರಿಕೆ ಎಂದು ಸಾರ್ವಜನಿಕ ವಲಯಗಳಲ್ಲಿ ಆರೋಪಗಳು ಕೇಳಿಬರುತ್ತಿವೆ.
ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ರವರಿಗೆ ಒಂಬತ್ತು ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ವಾರದಲ್ಲಿ ಒಂದು ದಿನ ಬಂದು ಹೋಗುವ ಶಾಸಕರು ಚುನಾವಣೆ ಸಮೀಪಸುತ್ತಿದ್ದಂತೆ ವಾರದಲ್ಲಿ ಎರಡು ಮೂರು ದಿನ ಕಾಣುವ ಪರಿಸ್ಥಿತಿ ಎದುರಾಗಿದೆ.. ಇಷ್ಟು ವರ್ಷಗಳ ಆಡಳಿತ ಅವಧಿಯಲ್ಲಿ ಎಂದು ಬೇಟಿ ಕೊಡದ ಹಳ್ಳಿಗಳಿಗೆ ಭೇಟಿ ನೀಡಿ ವಿವಿಧ ಅಬಿರುದ್ದಿ ಕಾರ್ಯಗಳಿಗೆ ಚಲಾನೆ ನೀಡುತ್ತಿದ್ದಾರೆ. ಎಸ್ಟೊ ವರ್ಷಗಳ ಕಾಲ ಡಾಂಬರು ಕಾಣದ ರಸ್ತೆಗಳಿಗೆ ಗುದ್ದಲಿ ಪೂಜೆ ಕಾರ್ಯಗಳನ್ನು ಮಾಡುತ್ತಿದ್ದಾರೆ ಹಾಗೂ ವಿವಿಧ ಹಳ್ಳಿಗಳಿಗೆ ಬೇಟಿ ನೀಡುತ್ತಿದ್ದಾರೆ.ಹಾಗೂ ಚುನಾವಣೆ ಹತ್ತಿರವಾದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮಗಳು ಸಹ ನಡೆಸುತ್ತಿದ್ದಾರೆ. ಈಗ ಮಾಡುತ್ತಿರುವ ಕಾರ್ಯಗಳು ನೋಡಿದರೆ ಒಂಬತ್ತು ವರ್ಷಗಳ ಅಧಿಕಾರ ಅವದಿಯಲ್ಲಿ ಶಾಸಕರು ಗಾಢ ನಿದ್ರೆಗೆ ಜಾರಿದರೆ ಎಂದು ಒಮ್ಮೆ ಮತದಾರರಿಗೆ ಆಶ್ಚರ್ಯವಾಗಿತ್ತಿದೆ.
ಹಾಗೂ ಇಷ್ಟು ವರ್ಷಗಳಲ್ಲಿ ಮಾಡದ ಅಬಿರುದ್ದಿ ಕಾರ್ಯಕ್ರಮಗಳು ಇನ್ನೂ ಎರಡು ತಿಂಗಳಲ್ಲಿ ಮಾಡುವರೇ ಇದೆಲ್ಲವನ್ನು ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಹಾಗೂ ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಯ ಪೋಟಿಯಲ್ಲಿ ಗೆಲ್ಲಲು ಹಾಗೂ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಮಾಡುತ್ತಿರುವ ಗಿಮಿಕ್ ಎಂದು ಸಾರ್ವಜನಿಕ ವಲಯಗಳಲ್ಲಿ ಇತ್ತೀಚಿಗೆ ಕೇಳಿಬರುತ್ತಿವೆ.
Be the first to comment