ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು.

ಸಿಂದಗಿ: ಪ್ರಜಾಧ್ವನಿ ಯಾಥ್ರೆ ೭ಕೋಟಿ ಕನ್ನಡಿಗರ ಧ್ವನಿಯಾಗಿದೆ. ೨೦೧೪ರಲ್ಲಿ ೧೬೫ ಭರವಸೆಯ ಪ್ರಣಾಳಿಕೆ ಕೋಟ್ಟಿದ್ದೇವು ಅದರಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತಿನಂತೆ ನಡೆದಿದ್ದು ನಮ್ಮ ಕಾಂಗ್ರೆಸ್ ಸರಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾನಾತನಾಡಿದರು.

 


ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಪ್ರಜಾಧ್ವನಿ ಯಾತ್ರೆಯ ನಿಮಿತ್ಯ ಹಮ್ಮಿಕೊಂಡ ಬೃಹತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ೨೦೧೮ರಲ್ಲಿ ಬಿಜೆಪಿ ಸರಕಾರ ೬೦೦ ಭರವಸೆಗಳನ್ನು ನೀಡಿತ್ತು ಆದರೆ ಅದರಲ್ಲಿ ಕೇವಲ ೫೦ನ್ನು ಮಾತ್ರ ಈಡೇರಿಸಿದ್ದು, ಇನ್ನೂ ೫೫೦ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.

೫ವರ್ಷದ ಅವಧಿಯಲ್ಲಿ ನಮ್ಮದು ಒಂದು ಭ್ರಷ್ಟಾಚಾರದ ಆರೋಪವಿಲ್ಲದೆ ಸುಗಮವಾಧ ಆಡಳಿತವನ್ನು ನೀಡಿದ್ದೇವೆ. ನನ್ನ ಗಮನಕ್ಕೆ ಬಂದ ಆರೋಪ ಸಿಬಿಐಗೆ ಒಪ್ಪಸಿದ್ದೇನೆ. ಇಂದಿನ ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಮೇಲೆ ನಿತ್ಯ ಅನೇಕ ಆರೋಪಗಳು ಕೇಳಿ ಬಂದರು ಒಂದು ತನಿಖೆ ನಡಿಸದೆ ಮುಚ್ಚಿ ಹಾಕುತ್ತಿದ್ದಾರೆ.
ವಿಧಾನ ಸೌಧದ ಪ್ರತಿ ಗೋಡೆಗೆ ಕಿವಿಗೊಟ್ಟು ಕೇಳಿದರೆ ಬರಿ ಲಂಚ-ಲAಚ ಎಂದು ಪಿಸುಗುಟ್ಟುತ್ತದೆ. ಈ ಸರ್ಕಾರ ಒಂದು ರೀತಿಯಲ್ಲಿ ಅಲಿಬಾಬಾ ಮತ್ತು ೪೦ ಕಳ್ಳರ ಸರ್ಕಾರ ಎಂದರೆ ತಪ್ಪಾಗುವುದಿಲ್ಲ. ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ ಎಂದ ಅವರು ಸಿಂದಗಿ ಉಪ ಚುಣಾವಣೆಯಲ್ಲಿ ಸುಳ್ಳು ಭರವಸೆಗಳನ್ನು ಹೇಳಿ ಕೋಟ್ಯಂತರ ಸರ್ಕಾರಿ ಹಣಹಾಳು ಮಾಡಿ ಮೋಸದಿಂದ ಗೆದ್ದರು ಆದರೆ ಈ ಬಾರಿ ಹಾಗೇ ಆಗಲು ಸಿಂದಗಿ ಮತದಾರರು ಬಿಡುವುದಿಲ್ಲ.
ಸಂಸದ ತೇಜಶ್ವಿ ಸೂರ್ಯ ರೈತರಿಗೆ ಸಾಲ ಮನ್ನಾ ಮಾಡುವುದು ತಪ್ಪ ಅದು ಮಾಡಬಾರದು ಎಂದು ಹೇಳುತ್ತಿರುವುದು ನ್ಯಾಯವೇ. ನನ್ನ ಅಧಿಕಾರದ ಅವಧಿಯಲ್ಲಿ ರೂ ೮೧೬೫ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಅದಾನಿ ಅಂಬಾನಿಯAತಹ ಅನೇಕ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ ನಾಚಿಕೆಯಾಗಬೇಕು ಎಂದರು.

ಈ ಸಂಧರ್ಭದಲ್ಲಿ ಶಾಸಕ ಎಂ.ಬಿ.ಪಾಟೀಲ, ಎಚ್.ಸಿ.ಮಹಾದೇವಪ್ಪ, ಶಿವಾನಂದ ಪಾಟೀಲ, ಪ್ರಕಾಶ ರಾಠೋಡ ಮಾತನಾಡಿ, ಜನರ ಆಶೀರ್ವಾದ ಪಡೆಯದೆ ಬಹುಮತವಿಲ್ಲದ ಜನ ನ್ಯಾಯಲಯದ ತೀರ್ಪು ಪಡೆಯದೆ ಬಿಜೆಪಿ ಸರ್ಕಾರ ರಚನೆ ಮಾಡಿ ಜನರ ಆಶೋತ್ತರಗಳಿಗೆ ತಣ್ಣಿರು ಹಾಕುತಿದ್ದಾರೆ. ಬಿಜೆಪಿ ಸರ್ಕಾರ ಜನರ ಬದುಕು ಕಟ್ಟಿಕೊಳ್ಳುವ ಕಾರ್ಯ ಮಾಡುತ್ತಿಲ್ಲ ಭಾವನೆಗಳನ್ನು ಕೆಡಕುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶೇ ೪೦ ಕಮೀಷನ್ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ರಾಜ್ಯದ ಜನ ಚೀಮಾರಿ ಹಾಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಅನೇಕ ಒಡೆತನಗಳನ್ನು ಮಾರಾಟ ಮಾಡುತ್ತಿದ್ದಾರೆ ಮುಂಬರುವ ದಿನಗಳಲ್ಲಿ ಈ ದೇಶದಲ್ಲಿ ಅಜಾರುಕತೆವುಂಟು ಮಾಡಲಿದ್ದಾರೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನು ಮಾಡಿದ್ದು ಸಿದ್ದರಾಮಯ್ಯನವರ ಸರ್ಕಾರ ಹೊರತು ಬಿಜೆಪಿಯಲ್ಲ. ಈ ಬಾರಿ ಕಾಂಗ್ರೆಸ್ ಗ್ಯಾರೆಂಟಿ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ರಾಜ್ಯದ ತುಂಬೇಲ್ಲ ಸಂಚಲ ಮುಡುತ್ತಿದೆ ಇದಕ್ಕೆ ರಾಜ್ಯದ ಜನತೆಯ ಬೆಂಬಲ ಹಾಗೂ ಆಶೀರ್ವಾದ ಅಭೂತ ಪೂರ್ವದಲ್ಲಿ ಸಿಗುತ್ತಲಿದೆ ಎಂದರು.
ಈ ಸಂಧರ್ಬದಲ್ಲಿ ಕಾಂಗ್ರೆಸ್ ಮುಖಂಡ ರಾಜು ಆಲಗೂರ, ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಸಿ.ಎಸ್.ನಾಡಗೌಡ, ಡಾ ಶಾಂತವೀರ ಮನಗೂಳಿ, ಅಶೋಕ ಶಾಬಾದಿ, ಬಿ.ಎಸ್.ಪಾಟೀಲ ಯಾಳಗಿ, ಮಲ್ಲಣ್ಣ ಸಾಲಿ, ಚನ್ನು ವಾರದ, ವಿಠ್ಠಲ ಕೋಳೂರ, ಎಸ್.ಎಮ್,ಪಾಟೀಲ ಗಣಿಹಾರ, ರಾಕೇಶ ಕಲ್ಲೂರ, ಅರವಿಂದ ಹಂಗರಗಿ, ಶಾರದಾ ಬೇಟಗೇರಿ, ಮಹಾನಂದ ಬಮ್ಮಣ್ಣಿ, ಸಂತೊಷ ಹರನಾಳ, ರಾಜಶೇಖರ ಕೂಚಬಾಳ, ಪರುಷುರಾಮ ಕಾಂಬಳೆ ಸೇರಿದೆಂತೆ ಅನೇಕರು ಇದ್ದರು. ಈ ವೇಳೆ ನೂರಾರು ಜನರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ಮೆರವಣಿಗೆ- ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ಅಂಜುಮನ ಆವರಣದ ವರೆಗೆ ತೆರೆದ ಬಸ್ಸಿನ ಮುಖೇನ ರಾಜ್ಯ ನಾಯಕರನ್ನು ಅಬೂತ ಪೂರ್ವ ಮೆರವಣಿಗೆ ಮಾಡಿ ಪುಷ್ಪದ ಮಳೆ ಸುರಿಸಿದರು.

 

Be the first to comment

Leave a Reply

Your email address will not be published.


*