14-15 ನೇ ಹಣಕಾಸು ಆಯೋಗದ ಭ್ರಷ್ಟಾಚಾರ ಹಾಗೂ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಡಿ ಎಸ್ ಎಸ್ ಮನವಿ

ಮಸ್ಕಿ, ಫೆಬ್ರುವರಿ 11 : ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ 14-15 ಹಣ ಕಾಸು ಯೋಜನೆಯಡಿ ಭ್ರಷ್ಟಾಚಾರ ಸೇರಿದಂತೆ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಟ್ಟಿಸುವಲ್ಲ ಕೂಡಾ ಅವ್ಯವಹಾರ ಮಾಡುತ್ತಿರುವದು ಕಂಡು ಬಂದಿದ್ದು, ತಕ್ಷಣ ತನಿಖೆ ಮತ್ತು ಕ್ರಮಕ್ಕೆ ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ (ಅ) ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕಾರ್ಯಾಲಯ ರಾಯಚೂರು,ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಮಸ್ಕಿ ಇವರ ಮುಖಾಂತರವಾಗಿ ಮನವಿಯನ್ನು ಸಲ್ಲಿಸಿದರು.

 

 

ಈ ವೇಳೆ ಮಾತನಾಡಿದ ಬಾಲಸ್ವಾಮಿ ಜಿನ್ನಾಪೂರ ಮಸ್ಕಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು, ಎಲ್ಲಾ ಅನುದಾನದ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವ್ಯವಹಾರ ಮೂಲಕ ನಡೆಯುತ್ತಿದ್ದು, ಮುಖ್ಯವಾಗಿ ಸರಕಾರದ ಮುಖ್ಯ ಯೋಜನೆಯಾದ ನರೇಗಾ, ಜೆ.ಜೆ.ಎಂ. ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮೂಲಕ ಭೂತ ಸೌಕರ್ಯ ಗಳನ್ನು ಒದಗಿಸಲು ಕೂಡಾ ಗ್ರಾಮ ಪಂಚಾಯತಿ ಗಳು ಸಂಪೂರ್ಣವಾಗಿ ವಿಫಲಗೊಂಡಿದ್ದು, ಈ ಕುರಿತಂತೆ ನಮ್ಮ ಸಮಿತಿ ವತಿಯಿಂದ ಹಲವಾರು ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಜರುಗಿಸಿರುವದಿಲ್ಲ. ಪರಿಣಾಮವಾಗಿ ಈ ಗ್ರಾಮ ಪಂಚಾಯತಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸಮಗ್ರ ತನಿಖೆ ಮತ್ತು

ವಿವಿಧ ಗ್ರಾಮದಲ್ಲಿರುವ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಬೇಕು, ನಾಲ್ಕು ವರ್ಷಗಳಿಂದ ನಿರ್ವಹಣೆ ಮಾಡದೇ ಕಾಮಗಾರಿಯನ್ನು ಗುತ್ತಿಗೆಯನ್ನು ಪಡೆದ ಗುತ್ತಿಗೆದಾರನ ಲೈಸೆನ್ಸ್ ಅನ್ನು ರದ್ದು ಪಡಿಸಬೇಕು, ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಇರಕಲ್ ಕೆರೆಯಿಂದ ಮತ್ತು ನಾಗಲದಿನ್ನಿ ಸೇರಿ ಇನ್ನುಳಿದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ನಿರ್ವಹಣೆ ಮಾಡದೆ ಇರುವ ಗುತ್ತಿಗೇದಾರರ ಮೇಲೆ ಕಾನೂನು ಕ್ರಮ ಕೈಗೊಂಡು

ಹಿರೇ ಕಡಬೂರು, ಹೂವಿನಬಾವಿ, ಎಂ.ರಾಮಲದಿನ್ನಿ, ಹಂಚಿನಾಳ, ಗ್ರಾಮಗಳ ದಆತ ಜನಾಂಗದವರಿಗೆ ಸ್ಮಶಾನ ಭೂಮಿ ಮಂಜೂರಿ ಮಾಡಿ ಅಭಿವೃದ್ಧಿ ಪಡಿಸಿಕೊಡುವದು.

 

ನಾಗಲದಿನ್ನಿ ಸರ್ವೆ ನಂ. 27 ರಲ್ಲಿ ಸುಮಾರು 90 ಎಕರೆ ಮತ್ತು ಸರ್ವೆ ನಂ. 331/1 ರಲ್ಲಿ 17 ಎಕರೆ ಮತ್ತು 33/*/2 ರಲ್ಲಿ 21 ಎಕರೆ 17 ಗುಂಟೆ ಸರಕಾರಿ ಭೂಮಿಯಿದ್ದು, ಎಂ.ರಾಮಲ ದಿನ್ನಿ ಮತ್ತು ಹಾಲಾಪೂರು ದಲಿತ ಭೂ ರಹಿತ ಕೃಷಿ ಕಾರ್ಮಿಕರಿಗೆ ಪ್ರತಿ ಕುಟುಂಬಗಳಿಗೆ ಎರಡು ಎಕರೆ ಭೂಮಿ ಹಂಚುವುದರ ಜೊತೆಯಲ್ಲಿ ಪಟ್ಟಾ ನೀಡುವುದು. ಎಂ. ರಾಮಲ ದಿನ್ನಿ, ಹೂವಿನ ಭಾವಿ,ಹಾಲಾಪೂರ ಗ್ರಾಮಗಳಿಗೆ ದಲಿತರಿಗಾಗಿ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನ ಸಾರ್ವಜನಿಕ ಸಮಸ್ಯೆಗಳನ್ನು ಎಳೆ ಎಳೆಯಾಗಿ ಅಧಿಕಾರಿಗಳ ಸಮ್ಮುಖದಲ್ಲಿ ಹೋರಾಟ ನಿರತರ ಒಮ್ಮತದ ಬೆಂಬಲದೊಂದಿಗೆ ಚರ್ಚಿಸಲಾಯಿತು.

ನಂತರ ದಲಿತ ಸಂರಕ್ಷ ಸಮಿತಿ ಹಾಗೂ ಮಹಿಳಾ ಸಂಘಟನೆಗಳ ಜಂಟಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಯಚೂರು ಇವರಿಗೆ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ತಾ. ಪಂ ಮಸ್ಕಿ ಇವರಲ್ಲಿ ಮನವಿ ಪತ್ರ ಸಲ್ಲಿಸಲಾಯಿತು .

 

 

ಇದೇ ಸಂದರ್ಭದಲ್ಲಿ ಭೀಮ ರಾಯಪ್ಪ ಬಳಗಾನೂರ ರಾಜ್ಯ ಉಪಾಧ್ಯಕ್ಷರು ಡಿ ಎಸ್ ಎಸ್, ಬಾಲ ಸ್ವಾಮಿ ಜೀನ್ನಾಪೂರ ಜಿಲ್ಲಾಧ್ಯಕ್ಷರು ಡಿ ಎಸ್ ಎಸ್,ಮೌನೇಶ್ ಬಿ ಬಳಗಾನೂರ ಜಿಲ್ಲಾ ಉಪಾಧ್ಯಕ್ಷರು ಡಿ ಎಸ್ ಎಸ್, ಅಬೇಲ್ ರಾಜ್ ಹಂಚಿನಾಳ,ಸಿದ್ದಪ್ಪ ಹೂವಿನ ಭಾವಿ,ಹನುಮಂತ ಬೆನಕನಾಳ, ಸೇರಿದಂತೆ ದಲಿತ ಸಂಘಟನೆಗಳ ಹಾಗೂ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*