ಮಸ್ಕಿ, ಫೆಬ್ರುವರಿ 09 : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ್ ಕಾರ್ಯಾಲಯ ಮುಂಭಾಗ ಬಂಜಾರ ಸೇವಲಾಲ್ ಸಂಘಟನೆ ತಾಲೂಕ ಸಮಿತಿ ವತಿಯಿಂದ ಷಣ್ಮುಖಪ್ಪ ಮಾನವಿ ಗ್ರೇಡ್ 2 ತಹಶೀಲ್ದಾರ್ ಇವರ ಮುಖಾಂತರ ಬಂಧಿತ ಆರೋಪಿ ಸೇರಿ, ಇನ್ನುಳಿದ ಹಾಸ್ಟೇಲ್ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇತ್ತೀಚಿನ ತಿಂಗಳು ಗಳಿಂದ ಹದಿ ಹರೆಯದ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದೀಗ ಅಂತಹ ಘಟನೆ ಮರುಕಳಿಸಿದೆ. ಲಿಂಗಸ್ಗೂರು ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಗೋನವಟ್ಲಾ ತಾಂಡಾದ ವಿದ್ಯಾರ್ಥಿನಿ ಐಶ್ವರ್ಯ ಪವಾರ ಕಾಲೇಜಿನಿಂದ ನೇರವಾಗಿ ಹಾಸ್ಟೇಲ್ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಗೆ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ರವರು ಲೈಂಗಿಕ ಕಿರುಕುಳ ಕೊಟ್ಟಿದ್ದು ಈ ಘಟನೆಗೆ ಕಾರಣವಾಗಿದೆ ಎಂದು ಬಲವಾದ ಆರೋಪ ಕೇಳಿ ಬಂದಿವೆ. ಈಗಾಗಲೇ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಲಿಂಗಸ್ಗೂರು ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು,ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಹಾಗೂ ಹಾಸ್ಟೇಲ್ ಸಿಬ್ಬಂದಿಗಳನ್ನು ತನಿಖೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಬಂಜಾರ ಸೇವಲಾಲ್ ಸಂಘಟನೆ ತಾಲೂಕ ಸಮಿತಿ ವತಿಯಿಂದ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಯವರಿಗೆ ಮನವಿ ಪತ್ರ ಸಲ್ಲಿಸಿದರು.
ಬಂಜಾರ ಸೇವಲಾಲ್ ಸಂಘಟನೆ ತಾಲೂಕ ಸಮಿತಿಯದೇ ವಪ್ಪ ರಾಠೋಡ್ ಅಧ್ಯಕ್ಷರು, ವಿಠಲ್ ಕೆಳೂತ್ ಪ್ರಧಾನ ಕಾರ್ಯದರ್ಶಿ,ಹನುಮಂತ ಎಸ್, ಶೇಠಪ್ಪ ಮೂಡಲ ದಿನ್ನಿ,ಶೇಠಪ್ಪ ಮಟ್ಟೂರು, ಶೇಖರಪ್ಪ, ಭೀಮಶಪ್ಪ,ನೀಲಪ್ಪ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
Be the first to comment