ಪ್ರಾಚೀನ ಕಾಲದ ಶಾಸನಗಳು ಆಚಾರ ವಿಚಾರ,ದೇವಾಲಯ ಸ್ಮಾರಕಗಳನ್ನು ಉಳಿಸಬೇಕು:ಚಂದ್ರಶೇಖರ್

ಕೆಜಿಎಫ್ : ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಚ್ಯ ಪ್ರಜ್ಞೆ ಮತ್ತು ಪರಂಪರೆ ಕುರಿತು ಸುಮತಿ ಜೈನ್ ಪ್ರೌಢಶಾಲೆ ಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

 

ಸ್ಪರ್ಧೆಗಳ ಬಗ್ಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಚಂದ್ರಶೇಖರ್ ಅವರು ಪ್ರಾಚೀನ ಕಾಲದ ಶಾಸನಗಳು ಆಚಾರ ವಿಚಾರಗಳು ದೇವಾಲಯಗಳು ಸ್ಮಾರಕಗಳು ಮುಂತಾದವುಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳು ಅರಿತು ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಿಕೊಡುವಂತಹ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಇಲಾಖೆಯ ವತಿಯಿಂದ ನೀಡಲಾಯಿತು.

 

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಶೇಖರ್, ಕ್ಷೇತ್ರ ಸಮನ್ವಯಾಧಿಕಾರಿ ರಮೇಶ್ ಕಾರ್ಯಕ್ರಮದ ನೋಡಲ್ ಅಧಿಕಾರಿ ಕೋದಂಡರಾಮಯ್ಯ ಹಾಗೂ ಬಿಆರ್‌ಪಿ ಶಂಕರ್ ಮತ್ತು ಶಾಲೆಯ ಮುಖ್ಯಶಿಕ್ಷಕ ರಾದ ನಾಗೇಶ್ ,ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*