ಜಗತ್ತಿನ ಜನಸಂಖ್ಯೆ ಈಗ ಸುಮಾರು 750 ಕೋಟಿ. ಇಷ್ಟು ಜನಸಂಖ್ಯೆಯಲ್ಲಿ ಅನೇಕ ಅಪರೂಪದ ವ್ಯಕ್ತಿಗಳು ಈ ಭೂಮಿ ಮೇಲೆ ಇದ್ದಾರೆ ಅಂತಹವರಲ್ಲಿ ಅತಿ ಉದ್ದ- ಅತಿ ಕುಳ್ಳ, ಅತಿ ದಪ್ಪ- ಅತಿ ಸಣ್ಣ ,ಅತಿ ಕಪ್ಪು- ಅತಿ ಕೆಂಪು ಜನರಂತಹ ಅಪರೂಪದ ವ್ಯಕ್ತಿಗಳನ್ನು ನಾವು ನೋಡಬಹುದು. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಜಗತ್ತಿನಲ್ಲಿಯೇ ಅತಿ ಉದ್ದನೆಯ ಟಾಪ್ 10 ಜನರ ಸಾಲಿನಲ್ಲಿ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲಿಯ ಸಣ್ಣ ಕುಗ್ರಾಮ ಚಿಂತಾಕಿ ಈ ಗ್ರಾಮದಲ್ಲಿ ಮಾರುತಿ ಕೋಲಿ ಅತಿ ಎತ್ತರ ಅಂದರೆ 7.5 ಅಡಿ ಇದ್ದಾನೆ.
ಔರಾದ ತಾಲೂಕಿನ ಚಿಂತಾಕಿ ಗ್ರಾಮದ ತಂದೆ ಹಣಮಂತ ತಾಯಿ ಈರಮ್ಮ ಎಂಬ ಬಡ ದಂಪತಿಗಳ ಉದರದಲ್ಲಿ ಹಿರಿಯ ಮಗನಾಗಿ ಜನಿಸಿದ ಮಾರುತಿ ಕೋಲಿ, ಕರ್ನಾಟಕದ ಅತಿ ಎತ್ತರದ ವ್ಯಕ್ತಿ ಹಾಗೂ ದೇಶದ ಟಾಪ 5 ಜನರಲ್ಲಿ ರೆಕಾರ್ಡ್ ಹೊಂದಿದ್ದಾನೆ .ಮಾರುತಿ ಕೋಲಿ ಗಣಪತಿ ಮತ್ತು ಪ್ರಕಾಶ ಎಂಬ ಇಬ್ಬರ ಸಹೋದರರ ಮದ್ಯೆ ಬೆಳೆದವನು ಬಡ ಕುಟುಂಬವಾದ್ದರಿಂದ ತಂದೆ ತಾಯಿ ಅಂದು ದುಡಿದು ಮಕ್ಕಳನ್ನು ಸಾಕುವುದೇ ಕಷ್ಟವಾಗಿರುವ ಆ ದಿನಗಳಲ್ಲಿ ಯಾವ ಮಕ್ಕಳಿಗೂ ಶಿಕ್ಷಣ ಕಲಿಸಲಾಗಲಿಲ್ಲ ತಂದೆ ಹಣಮಂತು ಇಂದಿಗೆ 18 ವರ್ಷಗಳ ಹಿಂದೆ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಕಾರಣ ತಾಯಿ ಈರಮ್ಮ ತನ್ನ ಚಿಕ್ಕ ಮಕ್ಕಳನ್ನು ಕರೆದುಕೊಂಡು ಗಂಡನ ಊರಾದ ವಡಗಾಂವ ದಿಂದ ತವರೂರಾದ ಚಿಂತಾಕಿ ಗ್ರಾಮಕ್ಕೆ ಬಂದು ಆಸರೆಗಾಗಿ ಗುಡಿಸಲು ಹಾಕಿಕೊಂಡು ಜೀವಿಸ ತೊಡಗಿದಳು ಕೂಲಿ ನಾಲಿ ಮಾಡುತ್ತಾ ಮಕ್ಕಳನ್ನು ಸಾಕತೊಡಗಿದಳು.
ಹಿರಿಯ ಮಗ ಮಾರುತಿ ಕೂಡ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ 16 ವರ್ಷ ವಯಸ್ಸಿನ ತನಕ ಮಾರುತಿ ಎಲ್ಲರಂತೆ ಸಹಜವಾಗಿಯೇ ಇದ್ದ 16 ವರ್ಷಗಳ ನಂತರ ಅವನ ದೇಹ ಅವನಿಗೆ ಅರಿವಿಲ್ಲದಂತೆ ಅದೇಕೋ ಎತ್ತರ ಬೆಳೆಯಲು ಪ್ರಾರಂಭವಾಯಿತು, ವರ್ಷಕ್ಕೆ ಬೆಳೆಯುತ್ತಾ ಬೆಳೆಯುತ್ತಾ ಐದು ಅಡಿ ಇದ್ದ ದೇಹ ಅವನ 30ನೇ ವಯಸ್ಸಿಗೆ 7.5 ಅಡಿ ಬೆಳೆಯಿತು ಸದ್ಯ ಅವನ 42 ನೇ ವಯಸ್ಸಿನಲ್ಲಿ 7.5 ಅಡಿ ಎತ್ತರ ಬೆಳೆದು ವಿಶ್ವದ ಅಜಾನಬಾಹು ವ್ಯಕ್ತಿಗಳಲ್ಲಿ ಒಬ್ಬ ಎಂದು ರೆಕಾರ್ಡ್ ಹೊಂದಿದ್ದಾನೆ.
ಸದ್ಯ ಭಾರತದ ಐದು ಜನ ಟಾಪ ಉದ್ದನೆ ವ್ಯಕ್ತಿಗಳಲ್ಲಿ ವಿಕಾಸ ಉತ್ಪಲ್–8.2, ಧರ್ಮೇಂದ್ರ ಪ್ರತಾಪ್ ಸಿಂಗ್–8.1, ಅಸದುಲ್ಲಾ ಖಾನ–7.11, ಹೈದರಾಬಾದನ ಪೋಲಿ ಪಾಕ ಘಟ್ಟಯ್ಯ –7.8,ಜಿತೇಂದ್ರ ಸಿಂಗ್-7.7 ರೆಕಾರ್ಡ್ ಹೊಂದಿದವರಾಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಬೀದರ ಜಿಲ್ಲೆಯ ಚಿಂತಾಕಿ ಗ್ರಾಮದ ಮಾರುತಿ ಕೋಲಿ ಸದ್ಯ 7.5 ಅಡಿ ಎತ್ತರ ಹೊಂದಿದ್ದಾನೆ ಆದರೆ ಈ ಮಾರುತಿಗೆ ಯಾರು ಸೆಲೆಬ್ರಿಟಿಗಳಾಗಲಿ ಸರ್ಕಾರವಾಗಲಿ ಸಂಘ ಸಂಸ್ಥೆಗಳಾಗಲಿ ಆ ಎತ್ತರಕ್ಕೆ ಕರೆದುಕೊಂಡು ಹೋಗಲಾಗಲಿಲ್ಲ ಹೀಗಾಗಿ ಮಾರುತಿ ತನ್ನ ಚಿಂತಾಕಿ ಗ್ರಾಮದಲ್ಲಿ ಎಲೆ ಮರೆಯ ಕಾಯಿಯಂತೆ ಕಷ್ಟದ ಜೀವನ ಸಾಗಿಸುತ್ತಿದ್ದಾನೆ.
ಕರ್ನಾಟಕ ಸರ್ಕಾರ ಒಮ್ಮೆ ಮಾತ್ರ ಇವನನ್ನು ಗುರುತಿಸಿ ಸನ್ಮಾನಿಸಿದ್ದನ್ನು ಬಿಟ್ಟರೆ ಸರಕಾರದಿಂದ ಯಾವುದೇ ರೀತಿಯ ಸಹಾಯವಾಗಲಿಲ್ಲ ಈ ವ್ಯಕ್ತಿ ವಿಶ್ವ ಮಟ್ಟದಲ್ಲಿ ಪ್ರಚಾರವಾಗಲಿಲ್ಲ.
ಈ ಗ್ರಾಮಕ್ಕೆ ಅಜಾನಬಾಹು ಮಾರುತಿ ಕೋಲಿ ಬಾಹುಬಲಿಯನ್ನು ನೋಡಲು ಹೋದರೆ ಅವನ ಮತ್ತು ಅವನ ಕುಟುಂಬದವರ ಪರಸ್ಥಿತಿ ನೋಡಿ ನಮಗೆ ಕರುಳು ಕಿತ್ತು ಬರುತ್ತದೆ ತಂದೆ ತೀರಿಕೊಂಡಿದ್ದಾನೆ ತಾಯಿಗೆ ವಯಸ್ಸಾಗಿದೆ ಅಪಘಾತದಲ್ಲಿ ಒಂದು ಕೈ ಮುರಿದುಕೊಂಡಿದ್ದಾಳೆ ಒಂದೇ ಕೈಯಿಂದ ಕೂಲಿ ಕೆಲಸಕ್ಕೆ ಹೋಗುತ್ತಾಳೆ ಒಬ್ಬ ಸಹೋದರ ಗಣಪತಿ ಮದುವೆ ಮಾಡಿಕೊಂಡ ಮೇಲೆ ಹೆಂಡತಿ ಜೊತೆ ಅದೇ ಊರಲ್ಲಿ ಬೇರೆ ವಾಸವಾಗಿದ್ದಾನೆ ಇನ್ನೊಬ್ಬ ಕಿರಿಯ ಸಹೋದರ ಪ್ರಕಾಶ ಹಾಗೂ ಅವನ ಹೆಂಡತಿ ಮಾತ್ರ ತಾಯಿ ಮತ್ತು ಮಾರುತಿ ಜೊತೆ ಇದ್ದಾರೆ ಆದರೆ ಈ ಪ್ರಕಾಶನಿಗೆ ಕೂಡ ಲಕ್ವಾ ಹೊಡೆದ ಕಾರಣ ಇವನು ಕೂಡ ಅಂಗವಿಕಲನಾಗಿದ್ದಾನೆ .
ಮಾರುತಿ ಕೈ ಕಾಲುಗಳು ದೇಹ ಉದ್ದುದ್ದ ಬೆಳೆದ ಕಾರಣ ಯಾವುದೇ ರೀತಿಯ ಕೆಲಸ ಮಾಡಲು ಆಗುತ್ತಿಲ್ಲ ಹೀಗಾಗಿ ಊರಲ್ಲಿ ಯಾರೂ ಇವನನ್ನು ಕೂಲಿ ಕೆಲಸಕ್ಕೂ ಕರೆಯುವುದಿಲ್ಲ ಪ್ರಕಾಶಗೆ ಲಕ್ವಾ ಹೊಡೆದ ಕಾರಣ ಅವನು ಅಂಗವಿಕಲನಾಗಿದ್ದಾನೆ ಹೀಗಾಗಿ ಮನೆಯಲ್ಲಿ ಇಬ್ಬರು ಗಂಡಸರಿದ್ದರೂ ತಾಯಿ ಒಂದೇ ಕೈಯಿಂದ ಕೂಲಿ ಕೆಲಸಕ್ಕೆ ಹೋಗಿ ಹಾಗೂ ಪ್ರಕಾಶನ ಹೆಂಡತಿ ಕೂಲಿ ಕೆಲಸಕ್ಕೆ ಹೋಗಿ ಈ ಕುಟುಂಬ ನಿರ್ವಹಣೆ ಮಾಡಬೇಕಾದಂತ ಪರಿಸ್ಥಿತಿ ಇದೆ. ಈ ರೀತಿ ಕೂಲಿ ಕೆಲಸ ಮಾಡುತ್ತಾ ಇಬ್ಬರು ಹೆಣ್ಣು ಮಕ್ಕಳು ಮನೆಯ ಮೂರು ಜನರನ್ನು ಬದುಕಿಸಬೇಕಾದ ಅನಿವಾರ್ಯತೆ ಇದೆ ಕೂಲಿ ಮಾಡಿ ಬಂದ ಬಿಡಿಗಾಸಿನಲ್ಲಿ ಕುಟುಂಬ ನಿರ್ವಹಣೆ ಮಾಡಬೇಕು.
ವಿಶ್ವ ರೆಕಾರ್ಡ್ ಹೊಂದಬೇಕಾದ ಮಾರುತಿ ಕೋಲಿ ತುತ್ತು ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ. ನಾವೆಲ್ಲರೂ ಸಹಜವಾಗಿ ಎರಡು ರೊಟ್ಟಿ ಅಥವಾ ಎರಡು ಚಪಾತಿ ಊಟ ಮಾಡಿ ಬದುಕಬಹುದು ಆದರೆ ಈ ಮಾರುತಿ ದೇಹಕ್ಕೆ ಹೆಚ್ಚಿನ ಊಟ ಹೆಚ್ಚಿನ ಕ್ಯಾಲೋರಿ ಬೇಕಾಗುತ್ತದೆ ಬಡ ಕುಟುಂಬದಲ್ಲಿ ಊಟಕ್ಕೂ ಪರದಾಟ ಹಾಗಾಗಿ ಮಾರುತಿ ಅಪೌಷ್ಟಿಕತೆ, ಅಶಕ್ತತೆ ,ಮೊಳಕಾಲ ನೋವು ,ಕಣ್ಣಿನ ಬೇನೆ ,ಕಾಲಿಗೆ ಚರ್ಮರೋಗ ಅಂಟಿಕೊಂಡಿರುವ ಕಾರಣ ಇವನಿಗೆ ತಿಂಗಳಿಗೆ 3000 ಚಿಕಿತ್ಸೆ ಖರ್ಚಿಗೆ ಹಣ ಬೇಕಾಗುತ್ತದೆ ಮನೆಯಲ್ಲಿ ವಯಸ್ಸಾದ ಅಂಗವಿಕಲೆ ತಾಯಿ ಹಾಗೂ ಸಹೋದರ ಪ್ರಕಾಶನ ಹೆಂಡತಿ ಮಾತ್ರ ದುಡಿಯಬೇಕು ಅವರ ದುಡಿತ ಊಟಕ್ಕೂ ಸಾಲದು ಇನ್ನು ತಿಂಗಳಿಗೆ 3000 ಔಷಧಿಗೆ ಎಲ್ಲಿಂದ ತರಬೇಕು ಬೀದರನ ಪುಣ್ಯಾತ್ಮ ಡಾ. ಅಶೋಕ ನಾಗೋರೆ ಅವರು ಮಾರುತಿ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಮಾರುತಿ ಮನೆಯ ಈ ಪರಿಸ್ಥಿತಿಯಿಂದ ಡಿಪ್ರೆಶನ್ ಗೆ ಒಳಗಾಗಿದ್ದಾನೆ.
ಈ ವ್ಯಕ್ತಿಯ ಕೀರ್ತಿ ಕಂಡು ಇವನನ್ನು ನೋಡಲು ಆಗಾಗ ಬರುವ ಜನ ಇವನ ಜೊತೆ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ ವಿನಹ ಯಾವುದೇ ರೀತಿಯ ಸಹಾಯ ಸಹಕಾರಕ್ಕೆ ಮುಂದಾಗುತ್ತಿಲ್ಲ.
ಈ ಮಾರುತಿ ಕುಟುಂಬಕ್ಕೆ ಒಂದು ಎಕರೆ ಕೂಡ ಜಮೀನು ಇರುವುದಿಲ್ಲ ಮನೆ ಕೂಡ ಗ್ರಾಮ ಪಂಚಾಯತಿಯವರಿಂದ ಪತ್ರಾಸ ಹಾಕಿದ ಗುಡಿಸಿಲಿನ ತರಹ ಸಣ್ಣ ಎರಡು ಕೋಣೆಗಳಿವೆ, ಇವರ ಮನೆ ನೋಡಿದರೇನೇ ತಮಗೆ ಈ ಕುಟುಂಬದ ಬಡತನ ಕಣ್ಣಿಗೆ ರಾಚುತ್ತದೆ ಅಯ್ಯೋ ಪಾಪ ಎನಿಸುತ್ತದೆ.
ವಿಶ್ವದಲ್ಲಿ ಟಾಪ್ ಟೆನ್ ರಲ್ಲಿ ಹೆಸರು ಸೇರಿಸಲು ರೆಕಾರ್ಡ್ ಮಾಡಲು ಸರ್ಕಾರದವರು, ಸಂಘ ಸಂಸ್ಥೆಯವರು, ಸೆಲೆಬ್ರಿಟಿಗಳು, ಮಾಧ್ಯಮ ವರ್ಗದವರು ಅವನ ಸಮುದಾಯದವರು ಇವನ ಕಡೆ ಗಮನ ಹರಿಸಿ ಸಹಾಯ ಹಸ್ತ ಚಾಚಿದರೆ ಇಂಥ ಒಂದು ಅಪರೂಪದ ಕುಟುಂಬ ಹಾಗೂ ಅಪರೂಪದ ಮಾರುತಿ ಕೋಲಿ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಸದ್ಯ ಸರ್ಕಾರದಿಂದ ತಿಂಗಳಿಗೆ 1200 ರೂಪಾಯಿ ಮಾಶಾಸನ ಮಾತ್ರ ಮಾರುತಿ ಕೋಲಿಗೆ ಸಿಗುತ್ತಿದೆ.
ಬಂಧುಗಳೇ ಇಂತಹ ಒಬ್ಬ ಅಪರೂಪದ ಮಾರುತಿ ಕೋಲಿ ವ್ಯಕ್ತಿ ನಮ್ಮ ಮಧ್ಯೆ ಬದುಕಿ ಬಾಳಬೇಕು ಸಂಘ-ಸಂಸ್ಥೆಯವರು. ಸರ್ಕಾರ , ಜನಪ್ರತಿನಿಧಿಗಳು,ಧಾನಿಗಳು ಈ ಬಡ ಕುಟುಂಬದ ಬೆಂಬಲಕ್ಕೆ ನಿಂತರೆ ಆರ್ಥಿಕ ಸಹಾಯ ಸಹಕಾರ ಕೊಡಲು ಮುಂದೆ ಬರಬೇಕು.
ಸಹೃದಯಿಗಳಾದ ತಾವು ಈ ಕುಟುಂಬ ಈ ಅಜಾನುಬಾಹು ಮಾರುತಿ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಮನಸ್ಸು ತಮ್ಮಲ್ಲಿ ಬಂದರೆ
ಈ ಕೆಳಗಿನ ಅವನ ಬ್ಯಾಂಕ್ ಖಾತೆಗೆ ತಾವು ಹಣ ಸಂದಾಯ ಮಾಡಿ .
( ಮಾರುತಿ ತಂದೆ ಹನುಮಂತು ಚಿಂತಾಕಿ ಗ್ರಾಮ ಔರಾದ ತಾಲೂಕು ಜಿಲ್ಲಾ ಬೀದರ
A/C. NO..62086366282 ಬ್ಯಾಂಕ್..S.B.I ಚಿಂತಾಕಿ ತಾ.ಔರಾದ
IFC CODE-SBIN0020645
ದೂರವಾಣಿ ಸಂಖ್ಯೆ .7348993110. ಪ್ರಕಾಶ ಸಹೋದರ )
ಈ ಬಡ ಕುಟುಂಬ ಹಾಗೂ ಈ ಮಾರುತಿ ನಮ್ಮ ಮಧ್ಯೆ ನಗುತಾ ನಗುತಾ ಖುಷಿಖುಷಿಯಾಗಿ ಬಾಳುವಂತೆ ಮಾಡಬೇಕು.
–ಧನ್ಯವಾದಗಳು
–ಶಿವ ಶರಣಪ್ಪ ಜಮಾದಾರ ಶಿಕ್ಷಕರು. ಕಲ್ಬುರ್ಗಿ
Be the first to comment