ಮಸ್ಕಿ,ಡಿಸೆಂಬರ್ 29 : ತಾಲೂಕಿನ ಡಬ್ಬೇರ್ ಮಡು ಗ್ರಾಮದ ಶಿವಾನಂದ ನಾಯಕ್ ಹಾಗೂ ಶಿವನಗೌಡ ಇವರ ಹೊಲದಲ್ಲಿ ಕೃಷಿ ಬೆಳೆಗಳಿಂದ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಅಧಿಕ ಲಾಭ ಪಡೆಯುವ ವಿಧಾನದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಯಿತು.ಇOದು ಬಳ್ಳಾರಿ ಧರ್ಮ ಪ್ರಾಂತ್ಯ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಜ್ಜೀವನ ಯೋಜನೆಯ ಬಗ್ಗೆ ರೈತರಿಗೆ ಡಬ್ಬೇರ್ ಮಡು ಗ್ರಾಮದ ಶಿವಾನಂದ ನಾಯಕ್ ಹಾಗೂ ಶಿವನಗೌಡ ಇವರ ಕೃಷಿ ಭೂಮಿಯ ಸಾಗುವಳಿ ಭೂಮಿಯಲ್ಲಿ ಮಾಡಿದಂತಹ ಸಾವಯವ ಕೃಷಿಯಲ್ಲಿ ತೊಗರಿ ಬೆಳೆ, ಹತ್ತಿ ಬೆಳೆ, ಪೇರಲಹಣ್ಣು ಹಾಗೂ ತೋಟಗಾರಿಕೆಯಿಂದ ವಾಣಿಜ್ಯ ಬೆಳೆಗಳಾದ ಪಪ್ಪಾಯ ಹಣ್ಣು ಹಾಗೂ ದಾಳಿಂಬೆ ಹಣ್ಣು ಬೆಳೆಗಳ ಬೆಳೆಯುವಿಕೆ, ಆದಾಯದ ಬಗ್ಗೆ ಈ ಭೂಮಿಯ ರೈತರಿಂದ ರೈತರಿಗೆ ಸ್ವ ಸಹಾಯ ಸಂಘದ ಸದಸ್ಯರಿಗೆ ಕ್ಷೇತ್ರ ಭೇಟಿ ನೀಡಿ, ಬೆಳೆಗಳಿಗೆ ಕಡಿಮೆ ಬಂಡವಾಳ ಹೂಡಿ ಅಧಿಕ ಲಾಭದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕ್ಷೇತ್ರ ಬೇಟಿಯ ಕಾರ್ಯದಲ್ಲಿ ಉಜ್ಜಿವನ ಯೋಜನೆಯ ಯೋಜನಾಸಂಯೋಜಕರಾದ ಶ್ರೀ ಶಾಂತಪ್ಪ ಸೋಮನಮರಡಿ,ಸ್ಪರ್ಶ ಯೋಜನೆಯ ಸಂಯೋಜಕರಾದ ಅರಳಪ್ಪ, ಕಾರ್ಯಕರ್ತರಾದ ವಿಜಯಕುಮಾರ್, ಹನುಮಂತ ಹಾಗೂ ಯೋಜನೆಯ ಕ್ಷೇತ್ರದ ಹಳ್ಳಿಗಳ ರೈತ ಮಹಿಳೆಯರು, ಸ್ವ ಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.
Be the first to comment