ಬೆಳಗಾವಿ : ತಳವಾರ ಸಮಾಜದ ಬಹುದಿನಗಳ ಬೇಡಿ ಮತ್ತು ಹೋರಾಟ ಫಲವಾಗಿ ತಳವಾರ ಜಾತಿ ಜನಾಂಗದವರು 2020 ರಲ್ಲಿ ಎಸ ಟಿ ಸೇರ್ಪಡೆ ಆಗಿದ್ದರು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದ ತಳವಾರಿಗೆ ಎಸ ಟಿ ಸರ್ಟಿಫಿಕೇಟ್ ನೀಡದೆ ತೊಂದರೆ ಕೋಡುತ್ತಿರುವ ಜಿಲ್ಲಾಧಿಕಾರಿಗಳ ಮತ್ತು ತಹಶಿಲ್ದಾರರ ನಡೆಯ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಸಾಬಣ್ಣ ತಳವಾರ ರವರು ಬೆಳಗಾವಿ ಚಳಿಗಾಲ ಅಧಿವೇಶನದ ಶೂನ್ಯ ವೇಳೆಯಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರಿನಿವಾಸ ಮತ್ತು ಬುಡಕಟ್ಟು ಸಚಿವರಾದ ಬಿ ಶ್ರೀರಾಮುಲು ರವರಿಗೆ ಪ್ರಶ್ನೆ ಕೇಳಿದರು ರಾಜ್ಯಾದ್ಯಂತ ಮತ್ತು ಯಾದಗಿರಿ ಜಿಲ್ಲೆಯ ಹುಣಸಗಿ,ಯಾದಗಿರಿ, ಶಹಪುರ ,ಕಾಳಗಿ ತಳವಾರ ಜಾತಿ ಜನಾಂಗದವರಿಗೆ ಎಸ ಟಿ ಸರ್ಟಿಫಿಕೇಟ್ ನೀಡುತ್ತಿಲ್ಲ ಮತ್ತು ಎಸ ಟಿ ಸರ್ಟಿಫಿಕೇಟ್ ಪಡೆಯಲು ಹೋದರೆ ಬೆದರಿಕೆ, ಜೀವ ಬೆದರಿಕೆ ಹಾಕುತ್ತಿದ್ದಾರೆ,ಸುಳ್ಳು ಕೇಸಗಳನ್ನು ದಾಖಲಿಸುತ್ತಿದ್ದಾರೆ ಇದು ಸರ್ಕಾರದ ಗಮನಕ್ಕೆ ಬಂದಿದ್ದೆಯೇ ಎಂದು ಸಭಾಪತಿಗಳ ಮೂಲಕ ಸರ್ಕಾರಕ್ಕೆ ಮತ್ತು ಸಚಿವರಿಗೆ ಪ್ರಶ್ನೆ ಕೇಳಿದರು.
ಸದನದಲ್ಲಿ ಡಾ ಸಾಬಣ್ಣ ತಳವಾರಿಗೆ ಉತ್ತರವು ನೀಡಿದ್ದರು, ಅಧಿಕೃತವಾಗಿ ಕರ್ನಾಟಕ ವಿಧಾನ ಪರಿಷತ್ ಗೆ ಉತ್ತರ ನೀಡುವದರ ಜೋತೆಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕ ತಹಶಿಲ್ದಾರರಗೆ ಆದೇಶ ಮಾಡಲಾಗಿದೆ ಎಂದು ಹೇಳಲಾಗಿತ್ತಿದ್ದು ಇದು ಕಾರ್ಯಗತವಾಗಬೇಕಿದೆ, ತಳವಾರ ಸಮಾಜಕ್ಕೆ ಈ ಸರ್ಕಾರದ ಆದೇಶದಿಂದಲಾದರೂ ತೊಂದರೆ ಇಲ್ಲದಂತೆ ಸರ್ಟಿಫಿಕೇಟ್ ಸಿಗುವಂತಾಗಬೇಕಿದೆ.
Be the first to comment