ರಾಜ್ಯ ಸುದ್ದಿಗಳು
ಬಾಗಲಕೋಟ
ರಬಕವಿ-ಬನಹಟ್ಟಿ: ಸಮೀಪದ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ತ ಶುಕ್ರವಾರ, ಶನಿವಾರ ರಾಜ್ಯ ಮಟ್ಟದ ಹಗಲು ರಾತ್ರಿ ಪಗಡೆ ಪಂದ್ಯಾವಳಿಗಳು ನಡೆದಿದ್ದು, ಪಂದ್ಯಾವಳಿಗೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಪಗಡೆ ಪಂದ್ಯಗಳು ನೂರಾರೂ ಜನರನ್ನು ಆಕರ್ಷಿಸಿದವು.ಇಂದಿನ ಆಧುನಿಕ ಕಾಲದಲ್ಲಿಯೂ ಮಹಾಭಾರತದ ಶಕುನಿ ಮತ್ತು ಪಾಂಡವರ ನಡುವಿನ ಆಟವನ್ನು ನೆನಪಿಸುವ ಈ ಆಟ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡಾ ಮಹತ್ವವನ್ನು ಪಡೆದಿದ್ದು, ಹಿರಿಯರ ಜೊತೆ ಯುವಕರು ಕೂಡಾ ಪಗಡೆಯಾಟ ಆಡುವುದರ ಮೂಲಕ ಆಟವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ.
ಸಮೀಪದ ಜಾನಪದರ ಗ್ರಾಮ ಜಗದಾಳ ಗ್ರಾಮದಲ್ಲಿ ಪ್ರತಿ ವರ್ಷ ಬ್ರಹ್ಮದೇವರ ಹಬ್ಬದ ಸಂದರ್ಭ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಪಗಡೆ ಆಟದ ಸ್ಪರ್ಧೆಯನ್ನು ಏರ್ಪಡಿಸುವುದರ ಜೊತೆಗೆ ಅದರಲ್ಲಿ ಜಯಶಾಲಿಯಾದವರಿಗೆ ಬಾರಿ ಬಹುಮಾನ ಕೂಡಾ ಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ.ಸುಮಾರು 28 ವರ್ಷಗಳಿಂದ ಪಗಡೆ ಆಟದ ಸ್ಪರ್ಧೆಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬಂದಿದ್ದು, ಅದು ಇಂದಿಗೂ ಮುಂದುವರೆದಿದೆ. ವರ್ಷದಿಂದ ವರ್ಷಕ್ಕೆ ಈ ಆಟ ಜನಪ್ರೀಯತೆ ಪಡೆಯುತ್ತಿದೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಪಗಡೆಯಾಟದ ಸ್ಫರ್ಧೆಗಳು ನಡೆಯುತ್ತಿವೆ. ಇಂದು ನಡೆದ ಸ್ಪರ್ಧೆಯಲ್ಲಿ ಬಾಗಲಕೋಟ, ಬಿಜಾಪೂರ, ಗದಗ, ಬೆಳಗಾಂವ ಹಾಗೂ ಮಹಾರಾಷ್ಟ್ರ ರಾಜ್ಯದ ಸಾಂಗಲಿ, ಕೊಲ್ಲಾಪೂರ ಜಿಲ್ಲೆಗಳಿಂದ ಒಟ್ಟು 54 ತಂಡಗಳು ಆಗಮಿಸಿದ್ದವು.
ಪ್ರಥಮ ಬಹುಮಾನ 50,001ರೂ., ದ್ವಿತೀಯ ಬಹುಮಾನ 30,001ರೂ., ತೃತೀಯ ಬಹುಮಾನ 20,001 ರೂ., ಚತುರ್ಥ ಬಹುಮಾನ 10,001 ರೂ. ಸೇರಿದಂತೆ 8 ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗುರಲಿಂಗಪ್ಪ ಚಿಂಚಲಿ, ಶೇಖರ ನೀಲಕಂಠ, ಗುರು ಅಸ್ಕಿ, ಮಾರುತಿ ಸೋರಗಾವಿ, ಕಾಡಪ್ಪ ಕಬಾಡಗಿ, ಕಾಡಪ್ಪ ಉಳ್ಳಾಗಡ್ಡಿ, ಬಸಯ್ಯ ಕಾಡದೇವರ, ಹೊನ್ನಪ್ಪ ಕುಳ್ಳೋಳ್ಳಿ, ಹನಮಂತಗೌಡ ಪಾಟೀಲ, ಸದಾಶಿವ ದಡ್ಡಿಮನಿ, ಸುರೇಶ ಅಸ್ಕಿ, ಪಂಡಿತ ಬೋಸ್ಲೆ, ಅಶೋಕ ಆಸಂಗಿ, ಸದಾಶಿವ ಉಳ್ಳಾಗಡ್ಡಿ, ಮುತ್ತು ಉಳ್ಳಾಗಡ್ಡಿ, ಚಂದ್ರಶೇಖರ ಕುರಿ, ಹಣಮಂತ ಅತ್ಯವ್ವಗೋಳ, ಶ್ರೀಶೈಲಗೌಡ ಪಾಟೀಲ, ಅಶೋಕ ಗೊಬ್ಬಾಣಿ, ಬಸಪ್ಪ ನಾಯಕ, ಯಲ್ಲಪ್ಪ ದೊಡಮನಿ, ಬಸಪ್ಪ ಮುತ್ತೂರ, ಅಡಿವೆಪ್ಪ ಪಾಟೀಲ, ವಿಠ್ಠಲ ಕಲಮಡಿ, ಭೀಮಪ್ಪ ಹರಪನಹಳ್ಳಿ ಸೇರಿದಂತೆ ಅನೇಕರು ಇದ್ದರು.
Be the first to comment