ಭಕ್ತರಿಗೆ ದರ್ಶನ ನೀಡಿದ ಮಾತೆ ಮಾಣೀಕೇಶ್ವರಿ

ವರದಿ: ಅಮರೇಶ ಕಾಮನಕೇರಿ


        ರಾಜ್ಯ ಸುದ್ದಿಗಳು


ಮಾತೆ ಮಾಣಿಕೇಶ್ವರಿ ದರ್ಶನದಿಂದ ಪೂನಿತರಾದ ಕರ್ನಾಟಕ, ಆಂದ್ರಪ್ರದೇಶ,ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಮಾತೆ ದರ್ಶನ ಪಡೆದು ತಮ್ಮ ಕಷ್ಟ ಪರಿಹರಿಸಿಕೋಳುತ್ತಾರೆ

ಕಲಬುರ್ಗಿ: ಮಹಾ ಶಿವರಾತ್ರಿ ಹಿನ್ನೆಲೆ ಮಾತೆ ಮಾಣಿಕೇಶ್ವರಿ ದರ್ಶನ ನೀಡಿದ್ದಾರೆ. ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿರುವ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಯಾನಾಗುಂದಿ ಮಾತೆ ಮಾಣಿಕೇಶ್ವರಿ ಅತ್ಯಪರೂಪ ದರ್ಶನವನ್ನು ಇಂದು ನೀಡಿದ್ದಾರೆ.

ಮಾತೆ ಮಾಣಿಕೇಶ್ವರಿ ಅಮ್ಮ
ಅನಾರೋಗ್ಯದ ಹಿನ್ನೆಲೆ ಮಲಗಿದ್ದ ಸ್ಥಿತಿಯಲ್ಲಿಯೇ ಯಾನಾಗುಂದಿಯ ಮಾಣಿಕಗಿರಿಯಲ್ಲಿ ಮಧ್ಯಾಹ್ನ 2:30ರಿಂದ ಕೇವಲ ಹತ್ತು ನಿಮಿಷ ಮಾತ್ರ ಮಾಣಿಕೇಶ್ವರಿ ಅಮ್ಮನವರು ಭಕ್ತರಿಗೆ ದರ್ಶನ ನೀಡಿದ್ದಾರೆ.

ಅಮ್ಮನವರ ದರ್ಶನ ಪಡೆಯಲು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತಿತರ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಪ್ರತಿ ಬಾರಿ ದರ್ಶನ ನೀಡಿದಾಗ ಮಾತೆ ಮಾಣಿಕೇಶ್ವರಿ ಅಮ್ಮನವರು ಭಕ್ತ ವೃಂದಕ್ಕೆ ಆಶೀರ್ವಚನ ನೀಡುತ್ತಿದ್ದರು. ಆದ್ರೆ ಈ ಬಾರಿ ಅನಾರೋಗ್ಯದ ಹಿನ್ನೆಲೆ ಮಾತನಾಡದೆ ದರ್ಶನ ನೀಡಿ ಮರಳಿದ್ದಾರೆ. ಮಾಣಿಕೇಶ್ವರಿ ಅಮ್ಮನವರನ್ನು ಕಂಡು ಕೃತಾರ್ಥರಾದ ಭಕ್ತರು, ಓಂ ನಮಃ ಶಿವಾಯ ಅಂತಾ ಉದ್ಘೋಷಿಸಿದರು.

Be the first to comment

Leave a Reply

Your email address will not be published.


*