ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ನಾಗರಕೊಂಡ ಗ್ರಾಮದ ರಸ್ತೆ ಅಭಿವೃದ್ದಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ಶಾಸಕ ಜಿ. ಕರುಣಾಕರ ರಡ್ಡಿ

ವರದಿ :- ಮಂಜುನಾಥ್ ಮಾಳ್ಗಿ ಹರಪನಹಳ್ಳಿ

ಹರಪನಹಳ್ಳಿ : ( ವಿಜಯನಗರ ಜಿಲ್ಲೆ ):- ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ದಿ, ಕುಡಿಯುವ ನೀರು ಸೇರಿ ಹಲವು ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾಗಲಿಕ್ಕೆ ಸಾದ್ಯ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ತಾಲ್ಲೂಕಿನ ನಾಗರಕೊಂಡ ಗ್ರಾಮದಲ್ಲಿ ಸೋಮವಾರ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ ನಾಗರಕೊಂಡ ಗ್ರಾಮದಿಂದ ಹನುಮನಹಳ್ಳಿ ಕೂಡ್ಲಿಗಿ ತಾಲ್ಲೂಕಿನ ಗಡಿಯವರೆಗೆ 1.70(ಒಂದು ಕೋಟಿ ಎಪ್ಪತ್ತು ಲಕ್ಷ) ಅಂದಾಜು ಮೊತ್ತದಲ್ಲಿ 2022-23ನೇ ಕೆ.ಕೆ.ಆರ್.ಡಿ.ಬಿ ಯೋಜನಯಡಿ ಮೈಕ್ರೋ ಸಾಮಾಜಿಕೇತರ (ಗ್ರಾಮೀಣ) ಲೋಕೋಪಯೋಗಿ ಇಲಾಖೆ ಹರಪನಹಳ್ಳಿ ಉಪ ವಿಭಾಗದಿಂದ ರಸ್ತೆ ಕಾಮಗಾರಿ ನಿರ್ಮಾಣ ಕೈಗೊಳ್ಳಲಾಗುತ್ತದೆ, ಈ ಕಾಮಗಾರಿಯನ್ನು ಗುತ್ತಿಗೆದಾರರು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ತಿಳಿಸಿದರು.

ತಾಲ್ಲೂಕಿನ ನಾಗರಕೊಂಡದ ಗ್ರಾಮದಲ್ಲಿ ಗುಡುಗು ಮಿಂಚು ಸಿಡಿಲಿನ ಆರ್ಭಟದ ನಡುವೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಶಾಸಕ ಜಿ. ಕರುಣಾಕರ ರಡ್ಡಿಯವರು ತಾಲ್ಲೂಕಿನ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಶಾಸಕರ ಕಾಳಜಿ ಮತ್ತು ಅಭಿವೃದ್ದಿಯ ಚಿಂತನೆಗೆ ಸಾಕ್ಷಿಯಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಷ್ಣು ರೆಡ್ಡಿ, ಆರ್ ಲೋಕೇಶ್, ದಾದಪುರ ಶಿವಾನಂದ, ಎಂ.ಮಲ್ಲೇಶ್, ಎನ್ ಸೀರನಹಳ್ಳಿ ಪ್ರಕಾಶ್, ಸಾಸ್ವಿಹಳ್ಳಿ ಎಸ್.ಹೆಚ್ ಬುಳ್ಳನಗೌಡ, ರೆಡ್ಡಿ ಸಿದ್ದೇಶ್, ಅನಂತನಳ್ಳಿ ಅಣ್ಣಪ್ಪ, ಶಾಸಕರ ಆಪ್ತ ಸಹಾಯಕ ಹೇಮಂತ್ ಮತ್ತು ನಾಗರಕೊಂಡ ಗ್ರಾಮದ ಗ್ರಾ.ಪಂ ಸದಸ್ಯರಾದ ಬಳೆಗಾರ ರೇವಣಸಿದ್ದಪ್ಪ, ಬಡಗೇರ ಸಾವಿತ್ರಮ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಂಜಮ್ಮ ರೇವಣಸಿದ್ದಪ್ಪ, ಮುಖಂಡರಾದ ಗೌಡ್ರು ರೇವನಗೌಡ, ಕರಣಂ ಶಶಿಗಿರಿ ರಾವ್, ಗ್ರಾ.ಪಂ ಮಾಜಿ ಸದಸ್ಯರಾದ ಜಿ.ಮಂಜುನಾಥ್, ಪ್ರಥಮ ದರ್ಜೆ ಗುತ್ತಿಗೆದಾರರಾದ ಮಂಜುನಾಥ್, ಉಪನ್ಯಾಸಕರಾದ ಜಿ.ಎಸ್ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*