ರಾಜ್ಯ ಸುದ್ದಿಗಳು
ಬೆಂಗಳೂರು
ಬಿಬಿಎಂಪಿ ಎಲೆಕ್ಷನ್ಗೆ ವೋಟರ್ ಲಿಸ್ಟ್ ಮಾಡಿ,ಸೆಪ್ಟೆಂಬರ್ 22ಕ್ಕೆ ಅಂತಿಮ ವೋಟರ್ ಲಿಸ್ಟ್ ಪ್ರಕಟಿಸಿ ಎಂದು ವಾರ್ಡ್ವಾರು ಮತದಾರರ ಪಟ್ಟಿ ಮಾಡಲು ಆಯೋಗ ಸೂಚನೆ ನೀಡಿದೆ.ಪಟ್ಟಿಯಲ್ಲಿ ದೋಷ ಕಂಡು ಬಂದ್ರೆ ವಲಯ ಅಧಿಕಾರಿಗಳೇ ನೇರ ಹೊಣೆ ಎಂದು ರಾಜ್ಯ ಚುನಾವಣಾ ಆಯೋಗ ಖಡಕ್ ಎಚ್ಚರಿಕೆ ನೀಡಿದೆ. ಈಗಾಗ್ಲೆ ಡಿಸಿ, BBMP ಅಪರ ಆಯುಕ್ತರು ಚುನಾವಣಾಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅಸೆಂಬ್ಲಿ ವಾರು ವಾರ್ಡ್ಗಳ ಮತದಾರರ ಪಟ್ಟಿ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ. 243 ವಾರ್ಡ್ಗಳ ಮತದಾರರ ಪಟ್ಟಿ ಸಿದ್ಧತೆಗೆ ಸೂಚನೆ ನೀಡಲಾಗಿದ್ದು, ಆಗಸ್ಟ್ 25ಕ್ಕೆ ವೋಟರ್ ಲಿಸ್ಟ್ ಕರಡು ಪ್ರಕಟ ಮಾಡ್ಬೇಕು, ಸೆಪ್ಟೆಂಬರ್ 2ರವರೆಗೆ ಆಕ್ಷೇಪಣೆಗೆ ಅವಕಾಶ ಕೊಡ್ಬೇಕು,ಸೆಪ್ಟೆಂಬರ್ 22ರಂದು ಅಂತಿಮ ಪಟ್ಟಿ ಪ್ರಕಟ ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ಒಂದು ವಾರದಲ್ಲಿ ಮೀಸಲು ನಿಗದಿಗೆ ಸುಪ್ರೀಂ ಸೂಚನೆ ಕೊಟ್ಟಿದೆ. ಹೀಗಾಗಿ ಎಲೆಕ್ಷನ್ಗೆ ರಾಜ್ಯ ಚುನಾವಣಾ ಆಯೋಗ ಸಜ್ಜಾಗುತ್ತಿದೆ.
Be the first to comment