ಸುರಪುರ :ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಅಮಲಿಹಾಳ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು.
ಹುಣಸಗಿ ತಾಲೂಕಿನ ಅಮಲಿಹಾಳ ಗ್ರಾಮದ ಕು. ಮೇಘಾ ತಂದೆ ಮಡಿವಾಳಪ್ಪ ಹೂಗಾರ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600 ಕ್ಕೆ 577 ಅಂಕಗಳನ್ನು ಗಳಿಸಿ ಪ್ರತಿಶತ 96% ನ್ನು ಪಡೆದು ಸಿಂದಗಿಯ ಆರ್.ಡಿ.ಪಾಟೀಲ್ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಸಾಮಾನ್ಯ ಬಡಕೃಷಿ ಕುಟುಂಬದಲ್ಲಿ ಜನಿಸಿದ ಮೇಘಾ 1 ರಿಂದ 5 ತರಗತಿಯವರೆಗೆ ಬೆಕಿನಾಳದ ಸರ್ಕಾರಿ ಶಾಲೆಯಲ್ಲಿ ಮತ್ತು 6 ರಿಂದ 10 ನೇ ತರಗತಿಯವರೆಗೆ ಯಂಕಂಚಿಯ ಪ್ರೌಢ ಶಾಲೆಯಲ್ಲಿ ಮುಗಿಸಿ ನಂತರ ಪಿಯುಸಿ ಯನ್ನು ಸಿಂದಗಿಯ ಆರ್ ಡಿ ಪಾಟೀಲ್ ಕಾಲೇಜಿನಲ್ಲಿ ಅಭ್ಯಸಿಸಿ ಕಾಲೇಜಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ ಎಂದು ಕರವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಯ್ಯಣ್ಣ ಹೂಗಾರ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಬಡತನದಲ್ಲಿರುವ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರ ನೆರವಾಗಬೇಕು ಎಂದರು.
ಈ ಸಂದರ್ಭದಲ್ಲಿ ವೀರಭದ್ರಪ್ಪ ಹೂಗಾರ್, ಭೀಮಾಶಂಕರ ಅಸ್ಕಿ,ಗುರುದೇವಿ ಹೂಗಾರ್,ಅಕ್ಷತಾ ಹದನೂರ,ಕಾರ್ತಿಕ, ಯಶೋದಾ, ಸೇರಿದಂತೆ ಇತರರು ಇದ್ದರು.
Be the first to comment