ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಯಾದಗಿರಿ ಸುದ್ದಿ:: ಅಖಿಲ ಕರ್ನಾಟಕ ಹೆಳವ ಸಮಾಜ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯಾದಗಿರಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ನಮ್ಮ ಸಮಾಜದ ಮಕ್ಕಳಿಗೆ ಪಾಲಕರಾದ ನಾವು ಹಿಂದುಳಿದವರು ಎಂದು ಹೇಳುತ್ತಾ ಹಣೆಪಟ್ಟಿ ಕಟ್ಟುವುದು ಬೇಡ, ನಮ್ಮ ಮಕ್ಕಳು ಮುಂದೆ ಇರಲಿ ನಾವು ಅವರ ಹಿಂದೆ ನಿಂತು ಸಹಕಾರ ನೀಡೋಣ, ಆಗ ನಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬೆಳೆದು ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಮಾವಿನಭಾವಿಯ ಬಸವರಾಜ ಗುರೂಜಿ ಹೇಳಿದರು.
ಅಖಿಲ ಕರ್ನಾಟಕ ಹೆಳವ ಸಮಾಜ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಣದಿಂದ ಎಲ್ಲವು ಸಾಧ್ಯವಿದೆ. ಶೈಕ್ಷಣಿಕವಾಗಿ ಮುಂದುವರೆದ ಸಮಾಜ ಆರ್ಥಿಕವಾಗಿ ಹಾಗೂ ರಾಜಕೀಯವಾಗಿಯೂ ಮುಂದುವರೆಯುತ್ತದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈದಪ್ಪ ಗುತ್ತೇದಾರ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಳವ ಸಮಾಜಕ್ಕೆ ಅವರದೆ ಆದ ಪ್ರಾಮುಖ್ಯತೆ ಹಾಗೂ ಪ್ರಾಧಾನ್ಯತೆಯಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಆತ್ಮಸ್ಥೈರ್ಯ ಬರುತ್ತದೆ ಎಂದು ಹೇಳಿದರು.
ಇನ್ನೋರ್ವ ಮುಖಂಡ ಬಸವರಾಜ ಹೆಳವರ ಯಾಳಗಿ ಮಾತನಾಡಿ,ಇದು ಎರಡನೇ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಸಂತಸದ ಸಂಗತಿ. ಗ್ರಾಮೀಣ ಭಾಗದ ಮಕ್ಕಳು ಉನ್ನತ ಹುದ್ದೆಗೇರುವಂತಾಗಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯ ೨೬ ಹಾಗೂ ಪಿಯುಸಿಯ ೬ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜೊತೆಗೆ ಸಮಾಜದ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಮಾಜದ ನಿವೃತ್ತ ನೌಕರರಿಗೂ ಕೂಡ ಸನ್ಮಾನಿಸಿ ಗೌರವಿಸಲಾಯಿತು.
ಧುಮ್ಮನಸೂರ ಹೆಳವ ಸಮಾಜ ಮಠದ ಪೂಜ್ಯ ಶಂಕರಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಹಿರಿಯ ಮುಖಂಡ ಮಲ್ಲಿಕಾರ್ಜುನ.ಬಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಯಾದಗಿರಿ ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಾಬಯ್ಯ ,ಕ.ರವೇ.ಜಿಲ್ಲಾ ಉಪಾಧ್ಯಕ್ಷ ಅಯ್ಯಣ್ಣ ಹೂಗಾರ, ಜಿಲ್ಲಾಧ್ಯಕ್ಷರಾದ ಡಾ :ಹಣಮಂತರಾಯ ಹಳಿಸಗರ, ಗೌರವಾಧ್ಯಕ್ಷರಾದ ಶಿವಶರಣಪ್ಪ ಕನ್ನೊಳ್ಳಿ, ಉಪಾಧ್ಯಕ್ಷರಾದ ಯಲ್ಲಪ್ಪ ಕೋರಿ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಹೆಚ್. ಎನ್. ಗೋಗಿ, ಪತ್ರಕರ್ತರಾದ ದೇವೇಂದ್ರ ಹೆಳವರ, ಬಾಬು ಹೆಳವರ,ಶ್ರೀಮಂತ ಸೌಂದರ್ಗೆ, ಸಾಯಬಣ್ಣ ಹೆಳವರ ಕಲಬುರ್ಗಿ,ಹಣಮಂತ್ರಾಯ ಖಾನಾಪುರ, ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ,ಕೆಂಚಪ್ಪ ಹೆಳವರ ಗದಗ, ಯಮುನಪ್ಪ ಹೆಳವರ,ಚಂದಪ್ಪ ಕಕ್ಕೇರಿ,ಶಂಕ್ರಪ್ಪ ಬಾಲಛಡಿ, ಮಲ್ಲಣ್ಣ ತಳ್ಳಳ್ಳಿ, ನೆಹರೂ ಹಳಿಸಗರ, ಮಲ್ಲಣ್ಣ ಕರಡಕಲ್ಲ್, ದೇವಪ್ಪ, ಲಾಲಪ್ಪ ಕಟ್ಟಿಮನಿ,ಪರಶುರಾಮ ಮುದನೂರ,ದೇವಪ್ಪ ನಗನೂರ, ತಿಮ್ಮಪ್ಪ ಗುರುಮಠಕಲ್, ಬಸವರಾಜ ಹೆಳವರ ದಂಡಸೊಲ್ಲಾಪುರ, ಸೇರಿದಂತೆ ಇತರರು ಇದ್ದರು,
ಕಾರ್ಯದರ್ಶಿ ರಾಘವೇಂದ್ರ ಮಾಸ್ತರ್ ನಿರೂಪಿಸಿ ವಂದಿಸಿದರು.
Be the first to comment