ಇಲಕಲ್ಲ:ನಿವೃತ್ತರಿಗೆ,ಸಾಧಕರಿಗೆ ಸನ್ಮಾನ:ಸರಕಾರಿ ನೌಕರರ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

CHETAN KENDULI

ನೂರು ವರ್ಷಕ್ಕಿಂತ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹಾಲಿ ರಾಜ್ಯಾಧ್ಯಕ್ಷ ಷಡಾಕ್ಷರಿಯವರ ಉತ್ತಮ ಆಡಳಿತ ಬದಲಾವಣೆಯ ಗಾಳಿಯನ್ನು ತಂದಿದೆ’.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ

ಅಂಬೇಡ್ಕರ ಭವನದಲ್ಲಿ ನಡೆದ ಇಳಕಲ್ ತಾಲೂಕಾ ಸರಕಾರಿ ನೌಕರರ ಸಂಘದ 2022ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಿವೃತ್ತರನ್ನು, ಸಾಧಕರನ್ನು ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಯಾದವರನ್ನು ಗುರುಮಹಾಂತಶ್ರೀಗಳ ಸಾನಿಧ್ಯದಲ್ಲಿ ಅಧ್ಯಕ್ಷ ಪರಶುರಾಮ ಪಮ್ಮಾರ ಸತ್ಕರಿಸಿದರು.

ಇಳಕಲ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲ್ಲೂಕು ಶಾಖೆ ಇಳಕಲ್ ವತಿಯಿಂದ 2022 ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಅಭಿನಂದನಾ ಸಮಾರಂಭ ಇಳಕಲ್ ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ಅಭಿನಂದನಾ ಸಮಾರಂಭವನ್ನು ಶ್ರೀ ಮನಿಪ್ರ ಗುರುಮಹಾಂತ ಶ್ರೀಗಳು ದಿವ್ಯ ಸಾನಿಧ್ಯದಲ್ಲಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ದಿವ್ಯ ಸಾನಿಧ್ಯವನ್ನು ಅಲಂಕರಿಸಿ ಮಾತನಾಡಿದ ಗುರುಮಹಾಂತ ಶ್ರೀಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ವಿಶಿಷ್ಟವಾಗಿ ಸಂಘಟನೆಯನ್ನು ಬಲಗೊಳಿಸಬೇಕಿದೆ. ಅದೇ ರೀತಿ ತಾಲ್ಲೂಕು ಘಟಕವು ಕೂಡ ಸದಾ ಕಾರ್ಯೋನ್ಮುಖವಾಗಿ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಕಾರ್ಯ ಹೀಗೆ ಸಾಗಲಿ ಎಂದು ಆಶಿಸಿದರು.

ತಾಲೂಕಾ ದಂಡಾಧಿಕಾರಿಗಳಾದ ಬಸವರಾಜ ಮೆಳವಂಕಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳೆ, ಇಳಕಲ್ಲ ತಾಲೂಕು ಘಟಕದ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಪಮ್ಮಾರ ಮಾತನಾಡಿದರು.

ಈ ಸಮಾರಂಭದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ತಾಲ್ಲೂಕಿನ ಎಲ್ಲ ಸರ್ಕಾರಿ ನೌಕರರನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಿದರು.ಅಲ್ಲದೆ ಸರ್ಕಾರಿ ನೌಕರರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯಮಾನ್ಯರನ್ನು ಕೂಡ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ತಹಶೀಲ್ದಾರರಾದ ಬಸವರಾಜ ಮೆಳವಂಕಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿದ್ದಪ್ಪ ಪಟ್ಟಿಹಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಅಭಿವೃದ್ಧಿ ದೊಡ್ಡಬಸಪ್ಪ ನೀರಲಕೇರಿ, ಪೌರಾಯುಕ್ತ ರಾಮಕೃಷ್ಣ ಸಿದ್ಧನಕೊಳ್ಳ, ತಾಲ್ಲೂಕು ಆರೋಗ್ಯಧಿಕಾರಿ ಗಳಾದ ಡಾ.ಪ್ರಶಾಂತ ತುಂಬಗಿ, ಜಿಲ್ಲಾ ಪದಾಧಿಕಾರಿಗಳಾದ ಎಸ್.ಎ. ಸತ್ಯರಡ್ಡಿ, ವಿಠಲ ವಾಲಿಕಾರ, ಎಸ್.ಕೆ. ಹಿರೇಮಠ, ಸುರೇಶ ಇಂಜಗನೇರಿ, ಮಹಾದೇವ ಕಂಬಾಗಿ, ಸಂಗಣ್ಣ ಹಂಡಿ ಹಾಗೂ ವೃಂದ ಸಂಘದ ಉಪಸ್ಥಿತರಿದ್ದರು. ಪದಾಧಿಕಾರಿಗಳು

ತಾಲ್ಲೂಕು ಖಜಾಂಚಿ ಗೌಡರ, ಕಾರ್ಯದರ್ಶಿ ಗುಂಡಪ್ಪ ಕುರಿ, ಗೌರವಾಧ್ಯಕ್ಷ ಎಸ್‌.ಎನ್‌. ಗಡೇದ ಹಾಗೂ ಪದಾಧಿಕಾರಿಗಳು, ಹಾಗೂ ಆನೇಕಲ್ ತಾಲ್ಲೂಕಿನ ಎಲ್ಲ ಸರ್ಕಾರಿ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*